ಮಾಸ್ಕ್ ಹಾಕದೆ ಗಮನ ಸೆಳೆದ ಯುವತಿ, ಆಕೆ ಆರೆಂಜ್ ಆರ್ಮಿ ಒಡತಿ!
ಚೆನ್ನೈ, ಏಪ್ರಿಲ್ 12: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ಪ್ರತಿ ಬಾರಿ ಫ್ಯಾನ್ ಗರ್ಲ್ ಟ್ರೆಂಡ್ ಆಗುವುದು ಮಾಮೂಲಿಯಾಗಿದೆ. ಆರ್‌ಸಿಬಿ ಫ್ಯಾನ್ ಗರ್ಲ್ ನಂತರ ಆ ರೀತಿ ಯಾರೂ ಟ್ರೆಂಡ್ ಆಗಿರಲಿಲ್ಲ. ಪ್ರೇಕ್ಷಕರೇ ಇಲ್ಲದೆ ಆಡುವಂಥ ಪರಿಸ್ಥಿತಿಯನ್ನು ಕೊವಿಡ್ 19 ಸಾಂಕ್ರಾಮಿಕ ತಂದೊಡ್ಡಿದೆ. ಹೀಗಾಗಿ, ಮೈದಾನದಲ್ಲಿ ಯಾರಾದರೂ ಗಮನ ಸೆಳೆಯುವ ಯುವತಿ, ಫ್ಯಾನ್ ಗರ್ಲ್ ಕಾಣಿಸಿಕೊಂಡರೆ ಫ್ರಾಂಚೈಸಿಗೆ ಸಂಬಂಧಿಸಿದವರೇ ಆಗಿರಬೇಕಾಗುತ್ತದೆ.
ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಭರ್ಜರಿಯಾಗಿ ಆರಂಭವಾಗಿದೆ. ಕ್ರಿಕೆಟರ್‌ಗಳ ಆಟದ ಜೊತೆಗೆ ಕ್ರೀಡಾ ನಿರೂಪಕ/ಕಿಯರ ಬಗ್ಗೆ, ಫ್ಯಾನ್ ಗರ್ಲ್ ಬಗ್ಗೆ ಕೂಡಾ ಹೆಚ್ಚು ಚರ್ಚೆಯಾಗುತ್ತದೆ. ಯುಎಇಯಲ್ಲಿ ನಡೆದ ಕಳೆದ ಸೀಸನ್ ಸಂದರ್ಭದಲ್ಲೂ ಟ್ರೆಂಡ್‌ನಲ್ಲಿದ್ದ ಯುವತಿ ಮತ್ತೆ ಟ್ರೆಂಡ್ ಹುಟ್ಟುಹಾಕಿದ್ದಾರೆ.
So far a great match... 😍😍😍😍#KKRvsSRH#IPL2021#srh pic.twitter.com/TxdkTLOpWx
— {𝕻𝖗𝖆𝖘𝖍𝖆𝖓𝖙} (@malvnimumbaikar) April 11, 2021
ಭಾನುವಾರದ ನಡೆದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲೂ ಆರೆಂಜ್ ಆರ್ಮಿಯ ಜೊತೆ ಇದ್ದ ಯುವತಿ ಗಮನ ಸೆಳೆದಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ ಯಾರೀಕೆ ಎಂದು ಚರ್ಚೆ ಆರಂಭವಾಯಿತು. ಜೊತೆಗೆ ಮಾಸ್ಕ್ ಹಾಕಿಲ್ಲವೇಕೆ ಎಂಬ ಪ್ರಶ್ನೆಯೂ ಎದ್ದಿತು.

ಪಂದ್ಯದ ವೇಳೆ ಆಗಾಗ ಆಕೆ ಮೇಲೆ ಫೋಕಸ್
ಕೋಲ್ಕತಾ ಹಾಗೂ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಪಂದ್ಯದ ವೇಳೆ ಆಗಾಗ ಆಕೆ ಮೇಲೆ ಕ್ಯಾಮೆರಾ ಫೋಕಸ್ ಮಾಡಲಾಗಿತ್ತು. ಹೀಗಾಗಿ, ಸಾಮಾಜಿಕ ಜಾಲ ತಾಣಗಳಲ್ಲಿ ಯಾರೀಕೆ ಎಂಬ ಕುತೂಹಲ ಹೆಚ್ಚಾಗಿದೆ. ಕೊನೆಗೆ ಈಕೆ ಫ್ಯಾನ್ ಗರ್ಲ್ ಅಲ್ಲ ಬದಲಿಗೆ ತಂಡದ ಒಡತಿ, ಸನ್ ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯ ಮಾರನ್ ಎಂದು ತಿಳಿದು ಬಂದಿದೆ. ಹೈದರಾಬಾದ್ ತಂಡದ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯ ಅವರು ಸನ್ ಮ್ಯೂಸಿಕ್, ಸನ್ ಟಿವಿ, ಎಫ್ಎಂ ಚಾನೆಲ್ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.

ಈ ಹಿಂದೆಯೂ ಲೈವ್ ಪಂದ್ಯ ವೀಕ್ಷಣೆ
ಕಾವ್ಯ ಮೈದಾನದಲ್ಲಿ ಲೈವ್ ಪಂದ್ಯ ವೀಕ್ಷಿಸುತ್ತಿರುವುದು ಇದೇ ಮೊದಲಲ್ಲ. 2018ರ ಐಪಿಎಲ್ ಸೀಸನ್ ಇದ್ದಾಗಲೂ ಹೈದರಾಬಾದ್ ತಂಡವನ್ನು ಬೆಂಬಲಿಸಲು ಪೆವಿಲಿಯನ್ ನಲ್ಲಿರುತ್ತಿದ್ದರು. ಈಗಲೂ ಪಂದ್ಯದುದ್ದಕ್ಕೂ ಆರೆಂಜ್ ಆರ್ಮಿಗೆ ಬೆಂಬಲ ನೀಡಿದರು. ಕಳೆದ ಐಪಿಎಲ್ ಹರಾಜು ಪ್ರಕ್ರಿಯೆ ಸಂದರ್ಭದಲ್ಲೂ ಭಾಗವಹಿಸಿದ್ದು, ತಮ್ಮ ಫ್ರಾಂಚೈಸಿಯ ಪರ ಬೆಂಬಲ ವ್ಯಕ್ತಪಡಿಸಲು ಕವಿಯಾ ಸದಾ ಸಕ್ರಿಯರಾಗಿ ಬರುತ್ತಾರೆ.

ನಿಯಮ ಏನು ಹೇಳುತ್ತದೆ
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನಿರ್ದೇಶನದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಮೈದಾನದಲ್ಲಿ ಐಪಿಎಲ್ ಪಂದ್ಯ ವೀಕ್ಷಿಸುವವರು ಕೊವಿಡ್ 19 ನೆಗಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮುಂತಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ನಿಯಮ ಉಲ್ಲಂಘಿಸಿದರೆ ಯಾರು ಹೊಣೆ
ಒಂದು ವೇಳೆ ಈ ರೀತಿ ನಿಯಮ ಉಲ್ಲಂಘಿಸಿದರೆ, ಆ ಮೈದಾನವನ್ನು ನಿಯಂತ್ರಿಸುವ ರಾಜ್ಯ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐನ ಐಪಿಎಲ್ ಆಯೋಜನಾ ಸಮಿತಿ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಕೊವಿಡ್ 19 ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಆಯೋಜಕರಿಗೆ ರಾಜ್ಯ ಸರ್ಕಾರ ದಂಡ ವಿಧಿಸಬಹುದು. ಮುಂಬೈ ಮೈದಾನಕ್ಕೆ ತೆರಳಿ ಮರಳುವ ವ್ಯಕ್ತಿಗಳಿಗೂ ನೆಗಟಿವ್ ವರದಿ ಕಡ್ಡಾಯವಾಗಿದೆ.

ಪಂದ್ಯದ ಫಲಿತಾಂಶ
ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 187/6 ಸ್ಕೋರ್ ಮಾಡಿತ್ತು. ಚೇಸ್ ಮಾಡಿದ ಹೈದರಾಬಾದ್ 177/5 ಮಾತ್ರ ಗಳಿಸಿ ಸೋಲೋಪ್ಪಿಕೊಂಡಿತು. ಕೆಕೆಆರ್ ಪರ ನಿತೀಶ್ ರಾಣಾ 80 ರನ್, ರಾಹುಲ್ ತ್ರಿಪಾಠಿ 53 ರನ್ ಗಳಿಸಿದರೆ, ಹೈದರಾಬಾದ್ ಪರ ಮನೀಶ್ ಪಾಂಡೆ ಅಜೇಯ 61, ಜಾನಿ ಬೈರ್ಸ್ಟೋ 55ರನ್ ಗಳಿಸಿ ಗಮನ ಸೆಳೆದರು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications