ಆಲೌಟ್ ಆಗದ ಆಸ್ಟ್ರೇಲಿಯಾ, ಭಾರತಕ್ಕೆ ಉಳಿದಿರುವುದು ಒಂದೇ ದಾರಿ!

ಆಸ್ಟ್ರೇಲಿಯಾ ಹೆಡೆಮುರಿ ಕಟ್ಟಲು ಸಜ್ಜಾಗಿದ್ದ ಭಾರತದ ಹುಲಿಗಳಿಗೆ, 4ನೇ ದಿನದಾಟದಲ್ಲಿ ಒಂದಷ್ಟು ಹಿನ್ನಡೆ ಆಗಿದೆ. ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಈ ಪಂದ್ಯ ಇಡೀ ಜಗತ್ತಿನ ಗಮನ ಸೆಳೆದಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆಡಲು ಭಾರತ ಈ ಮ್ಯಾಚ್ ಗೆಲ್ಲಲೇಬೇಕು. ಹಾಗೇ ಆಸ್ಟ್ರೇಲಿಯಾಗೆ ಕೂಡ ಈ ಮ್ಯಾಚ್ ಗೆಲ್ಲಬೇಕು ಎಂಬ ಒತ್ತಡ ಇದೆ. ಇಲ್ಲವಾದರೆ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಫೈನಲ್ ಪಂದ್ಯವನ್ನು ಆಡುವ ಅವಕಾಶ ಕಾಂಗರೂ ನಾಡಿಗೆ ಮಿಸ್ ಆಗಲಿದೆ.

ಭಾರತ & ಆಸ್ಟ್ರೇಲಿಯಾ ನಡುವೆ ಇದೀಗ ಜಿದ್ದಾಜಿದ್ದಿನ ಆಟ ನಡೆಯುತ್ತಿದ್ದು, ಗೆಲುವು ನಮ್ಮದೆ ಅಂತಾ ಎರಡೂ ತಂಡಗಳ ಆಟಗಾರರು ಮುಂದೆ ನುಗ್ಗುತ್ತಿದ್ದಾರೆ. ಒಂದು ಕಡೆ ಇನ್ನೇನು ಈ ಮ್ಯಾಚ್ ಭಾರತ ಗೆದ್ದೇಬಿಡುತ್ತೆ ಅಂತಾ ಅಂದುಕೊಳ್ಳುವ ಸಮಯದಲ್ಲೇ, ಮತ್ತೊಂದು ಕಡೆ ಆಸ್ಟ್ರೇಲಿಯಾ ಪುಟಿದೆದ್ದಿದೆ. ಈಗಾಗಲೇ 333 ರನ್ ಲೀಡ್ ಪಡೆದು ಆಡುತ್ತಿರುವ ಆಸ್ಟ್ರೇಲಿಯಾ ಕೂಡ ಗೆಲ್ಲುವ ಹುಮ್ಮಸ್ಸಿನಲ್ಲಿ ಇದೆ!

India s Opportunities to Secure Victory Against Australia

ಇಂಡಿಯಾ & ಆಸ್ಟ್ರೇಲಿಯಾ ನಡುವೆ ಗೆಲುವು ಯಾರಿಗೆ?

ಭಾರತ ತಂಡ ಇಂದು ಬೆಳಗ್ಗೆಯೇ 369 ರನ್‌ಗಳಿಗೆ ಆಲೌಟ್ ಆಗಿ ಆಸ್ಟ್ರೇಲಿಯಾ ಎದುರಲ್ಲಿ ಲೀಡ್ ನೀಡಿ ಶರಣಾಯಿತು. ನಂತರ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭವಾಗಿತ್ತು, ಆಗ ಆಸ್ಟ್ರೇಲಿಯಾ ತಂಡದ ದಾಂಡಿಗರು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. ಹೀಗಿದ್ದಾಗ 80 ರನ್‌ಗೆ ಆಸ್ಟೇಲಿಯಾ ತನ್ನ 3ನೇ ವಿಕೆಟ್ ಆಗಿ ಸ್ಟೀವ್ ಸ್ಮಿತ್‌ನ ಕಳೆದುಕೊಂಡಿತ್ತು.

ಅಲ್ಲಿಂದಲೇ ನೋಡಿ ಶುರುವಾಗಿದ್ದು ಮಹಾ ಪತನ, ಜಸ್ಪ್ರಿತ್ ಬುಮ್ರಾ ಹಾಕಿದ ಬಾಲ್‌ಗಳಿಗೆ ತರಗೆಲೆ ರೀತಿ ಉದುರಿ ಬಿದ್ದ ಆಸಿಸ್ ಆಟಗಾರರು 91 ರನ್‌ಗೆ 6 ವಿಕೆಟ್ ಕಳೆದುಕೊಂಡರು. ಆದರೆ ನಂತರ ಕಂಬ್ಯಾಕ್ ಮಾಡಿದ್ದ ಆಸ್ಟ್ರೇಲಿಯಾ, ದಿನದಾಟ ಮುಗಿಸಿದ್ದು 228 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿದೆ. ಹೀಗಾಗಿ ನಾಳೆಗೆ ಕೂಡ ಆಸ್ಟ್ರೇಲಿಯಾ ತನ್ನ ಬ್ಯಾಟಿಂಗ್ ಕೆಲಸ ಮುಂದುವರಿಸಲಿದೆ.

ಭಾರತಕ್ಕೆ ಉಳಿದಿರುವುದು ಒಂದೇ ದಾರಿ!

ಈವರೆಗೂ ಆಸ್ಟ್ರೇಲಿಯಾ ತಂಡ ಒಟ್ಟಾರೆ 333 ರನ್ ಲೀಡ್ ಪಡೆದಿದ್ದು, ಇನ್ನೂ 1 ವಿಕೆಟ್ ಆಸಿಸ್ ಕೈಯಲ್ಲಿ ಇರುವ ಕಾರಣಕ್ಕೆ 350 ರನ್ ಗಡಿ ದಾಟುವ ನಿರೀಕ್ಷೆ ಇದೆ. ಮತ್ತೊಂದ್ಕಡೆ, ಭಾರತ ತಂಡ ಕೂಡ ಆದಷ್ಟು ಬೇಗ ಆಸಿಸ್ ಪಡೆಯನ್ನ ಆಲೌಟ್ ಮಾಡಲು ಪರದಾಡ್ತಿದೆ. ಇಷ್ಟೆಲ್ಲದರ ನಡುವೆ ಜಿದ್ದಾಜಿದ್ದಿನ 4ನೇ ಟೆಸ್ಟ್ ಪಂದ್ಯದ 5ನೇ ದಿನದಾಟ ನಾಳೆ ನಡೆಯಲಿದೆ.

ಕೊನೆಯ ದಿನದ ಆಟದಲ್ಲಿ ಭಾರತ ತಂಡ ಅದ್ಧೂರಿಯಾಗಿ ಬ್ಯಾಟಿಂಗ್ ಮಾಡಬೇಕು. ಹೀಗೆ ಬ್ಯಾಟ್ ಬೀಸಿದರೆ ಮಾತ್ರ ಭಾರತಕ್ಕೆ ಗೆಲ್ಲುವ ಅವಕಾಶ ಇರಲಿದೆ. ಇಲ್ಲವಾದರೆ ಈ ಮ್ಯಾಚ್ ಕೂಡ ಡ್ರಾನಲ್ಲಿ ಅಂತ್ಯವಾಗುವ ಭಯ ಕಾಡುತ್ತಿದೆ. ಈಗಾಗಲೇ ಎಲ್ಲಾ ರೀತಿಯ ಲೆಕ್ಕಾಚಾರ ಹಾಕಲಾಗಿದ್ದು, ನಾಳೆ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಅಬ್ಬರಿಸಬೇಕಿದೆ. ಇಲ್ಲ ಅಂದ್ರೆ ಮತ್ತೆ ಸಂಕಷ್ಟ ಗ್ಯಾರಂಟಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+