2025ರ ಐಪಿಎಲ್ ಆರ್ಭಟ ಮತ್ತೆ ಶುರು, ಯುದ್ಧ ನಿಂತ ನಂತರ... IPL 2025
2025ರ ಐಪಿಎಲ್ ನಿಂತು ಹೋಗಿತ್ತು, ಭಾರತ & ಪಾಕಿಸ್ತಾನ ನಡುವೆ ಯುದ್ಧ ಶುರುವಾಗಿದ್ದ ಕಾರಣಕ್ಕೆ 2025ರ ಐಪಿಎಲ್ ಅರ್ಧಕ್ಕೆ ನಿಲ್ಲಿಸಿ ಬಿಸಿಸಿಐ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ, 150 ಕೋಟಿ ಭಾರತೀಯರು ಮತ್ತೆ ಐಪಿಎಲ್ ಬೇಗ ಶುರುವಾಗಲಿ ಅಂತಾ ಪ್ರಾರ್ಥನೆ ಮಾಡಿ ಕಾಯುವಂತೆ ಆಗಿತ್ತು. ದೇಶಕ್ಕಿಂತ ಕ್ರಿಕೆಟ್ ಮುಖ್ಯವಲ್ಲ ಅಂತಾ ದಿಢೀರ್ ಐಪಿಎಲ್ ನಿಲ್ಲಿಸಿ ಪಾಪಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತ ಮುಂದಾಗಿತ್ತು. ಇಷ್ಟೆಲ್ಲದರ ನಡುವೆ ಇಂದು ದಿಢೀರ್ ಯುದ್ಧ ನಿಂತಿದೆ.. ಹೀಗಿದ್ದಾಗಲೇ, 2025ರ ಐಪಿಎಲ್ ಆರ್ಭಟ ಮತ್ತೆ ಶುರು, ಯುದ್ಧ ನಿಂತ ನಂತರ...
ಹೌದು, ಯುದ್ಧದ ಕಾರಣಕ್ಕೆ ಐಪಿಎಲ್ ನಿಂತು ಹೋಗಿತ್ತು, ಹೀಗಾಗಿ ಐಪಿಎಲ್ ಫ್ಯಾನ್ಸ್ ಈ ಸುದ್ದಿಯಿಂದ ಭಾರಿ ಬೇಸರ ಹೊರ ಹಾಕಿದ್ದರು. ಅಲ್ಲದೆ ಇದೇ ರೀತಿಯಾಗಿ ಪರಿಸ್ಥಿತಿ ಇದ್ದರೆ ಮುಂದಿನ ದಿನಗಳಲ್ಲಿ ಐಪಿಎಲ್ ಕ್ರೇಜ್ ಕೂಡ ಹೋಗಲಿದೆ ಅಂತಾ ಗೊಣಗುತ್ತಿದ್ದರು. ಆದರೆ ಯುದ್ಧದ ಸಮಯದಲ್ಲಿ ದೇಶ ಮುಖ್ಯ & ಕ್ರಿಕೆಟ್ ಅಲ್ಲ ಅಂತಾ ದಿಢೀರ್ ಐಪಿಎಲ್ ನಿಲ್ಲಿಸಿ ಮುಂದೂಡಿಕೆ ಮಾಡಲಾಗಿತ್ತು. ಹೀಗಿದ್ದಾಗಲೇ ಭಾರತ & ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಆಗಿದ್ದು ಐಪಿಎಲ್ ಮತ್ತೆ ಶುರುವಾಗುವುದು ಗ್ಯಾರಂಟಿ ಆಗಿದೆ!

ಐಪಿಎಲ್ ಹವಾ ಮತ್ತೆ ಶುರು!
ಅಂದಹಾಗೆ ಐಪಿಎಲ್ ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡುವ ಜೊತೆಗೆ ಆರ್ಥಿಕವಾಗಿ ಕೂಡ ಸಾಕಷ್ಟು ಪ್ರಯೋಜನ ತಂದು ಕೊಟ್ಟಿದೆ. ಹೀಗಿದ್ದಾಗ ನಿಂತು ಹೋದ ಐಪಿಎಲ್ ಮತ್ತೆ ಶುರು ಮಾಡಲು ಇದೀಗ ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ದಿನಾಂಕ ಅಧಿಕೃತ ಆಗಬೇಕಿದೆ. ಇದೇ ವಾರದಲ್ಲಿ ಮತ್ತೆ ಐಪಿಎಲ್ ಟೂರ್ನಿ ಶುರು ಮಾಡಬೇಕು ಎಂಬ ಚರ್ಚೆ ನಡೆದಿದೆ. ಅದರಲ್ಲೂ ಈ ಬಾರಿ ಟ್ರೋಫಿ ಗೆಲ್ಲುವ ಬಗ್ಗೆ ಆಸಕ್ತಿ ಹೊಂದಿದ್ದ ತಂಡಗಳು ಐಪಿಎಲ್ ಪುನಾರಂಭಕ್ಕೆ ಕಾಯುತ್ತಿದ್ದವು.
ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ...
ಐಪಿಎಲ್ 2025 ಆರ್‌ಸಿಬಿ ಪಾಲಿಗೆ ವರವಾಗಿ ಪರಿಣಮಿಸಿದ್ದು, ಈ ಬಾರಿಯ ಐಪಿಎಲ್ ನಮ್ಮ ಆರ್‌ಸಿಬಿ ಪಾಲಿಗೆ ಒಲಿದು ಬರುವುದು ಗ್ಯಾರಂಟಿ ಆಗಿದೆ. ಹೀಗಿದ್ದಾಗ ದಿಢೀರ್ ಭಾರತ & ಪಾಪಿ ಪಾಕಿಸ್ತಾನ ನಡುವೆ ಯುದ್ಧ ಶುರುವಾಗಿತ್ತು. ಭಾರತೀಯ ಸೇನೆ ಪಾಪಿ ಪಾಕಿಸ್ತಾನಕ್ಕೆ ಸರಿಯಾಗಿ ಏಟು ಕೊಡುತ್ತಿತ್ತು. ಹೀಗಿದ್ದರೂ ಭಾರತೀಯರ ಸುರಕ್ಷತೆ & ಐಪಿಎಲ್ ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಐಪಿಎಲ್ ಮುಂದೂಡಿಕೆ ಮಾಡಲಾಗಿತ್ತು. ಹೀಗಿದ್ದಾಗ ಆರ್‌ಸಿಬಿ ಅಭಿಮಾನಿ ಬಳಗ ಇದರಿಂದ ಬೇಸರ ಹೊರ ಹಾಕಿದ್ದರು. ಆದರೆ ಇದೀಗ ಮತ್ತೆ ಐಪಿಎಲ್ ಶುರುವಾಗಿ & ಆರ್‌ಸಿಬಿ ಕಪ್ ಗೆಲ್ಲುವುದು ಗ್ಯಾರಂಟಿ ಆಗುತ್ತಿದೆ.












Click it and Unblock the Notifications