ಹಗಲಿನಲ್ಲಿ ಸಾಫ್ಟ್‌ವೇರ್ ಜಾಬ್, ಬಿಡುವಿನಲ್ಲಿ ಕಠಿಣ ಅಭ್ಯಾಸ: ಜಪಾನ್ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಬಿಹಾರಿ ಆಯ್ಕೆ

Success Story: ಬಿಹಾರದ ಅಭಿಷೇಕ್ ಆನಂದ್ ಅವರು ಐಐಟಿ ಕಾನ್‌ಪುರದಲ್ಲಿ ಪದವಿ ಪಡೆದು ಜಪಾನ್‌ನಲ್ಲಿ ಐಟಿ ಉದ್ಯೋಗಕ್ಕೆ ಸೇರಿದರು. ವೃತ್ತಿಜೀವನದ ಜೊತೆಗೆ ಕ್ರಿಕೆಟ್ ಅಭ್ಯಾಸ ಮುಂದುವರಿಸಿದ ಅವರು, 2025ರಲ್ಲಿ ಕುಕ್ ಐಲ್ಯಾಂಡ್ಸ್ ವಿರುದ್ಧ ಜಪಾನ್ ರಾಷ್ಟ್ರೀಯ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

ನಿಮ್ಮಿಷ್ಟದ ಕನಸುಗಳು ನೆರವೇರಲು ವೃತ್ತಿಜೀವನವನ್ನು ತ್ಯಜಿಸಬೇಕಿಲ್ಲ, ಬದಲಿಗೆ ಎರಡನ್ನೂ ಬ್ಯಾಲೆನ್ಸ್ ಮಾಡಿದರೆ ಒಲಿದುಬರುವ ಯಶಸ್ಸು ಕಲ್ಪನೆಗೂ ಮೀರಿದ್ದು ಎಂಬುದನ್ನು ಇಲ್ಲೊಬ್ಬ ಯುವಕ ಸಾಬೀತುಪಡಿಸಿದ್ದಾರೆ. ಜಪಾನ್‌ನಲ್ಲಿ ಐಟಿ ಉದ್ಯೋಗ ಮಾಡುತ್ತಲೇ ಅಲ್ಲಿನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಈ ಭಾರತೀಯನ ಕಥೆ ಪ್ರತಿಯೊಬ್ಬ ಯುವಕನಿಗೂ ದೊಡ್ಡ ಮಾದರಿಯಾಗಿದೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

Indian-origin Abhishek Anand Works in Japan s IT Sector Plays for Japan National Cricket Team

ಜೀವನದಲ್ಲಿ ನಾವು ಒಂದೊಳ್ಳೆ ಉದ್ಯೋಗಕ್ಕಾಗಿ ಕಂಡುಕೊಳ್ಳುವ ಹಾದಿ ಕೆಲವೊಮ್ಮೆ ಕಲ್ಪನೆಗೂ ಮೀರಿದ ಅದ್ಭುತ ಮೈಲಿಗಲ್ಲುಗಳಿಗೆ ಕರೆದೊಯ್ಯುತ್ತದೆ ಎಂಬುದಕ್ಕೆ ಬಿಹಾರದ ಈ ಯುವಕನ ಅತ್ಯದ್ಭುತ ಸಾಧನೆಯೇ ಅತ್ಯುತ್ತಮ ಉದಾಹರಣೆಯಾಗಿದೆ. ಐಟಿ ಕಂಪನಿಯ ಉದ್ಯೋಗಕ್ಕಾಗಿ ಜಪಾನ್‌ಗೆ ತೆರಳಿದ್ದ ಇವರು, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಪಾನ್ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ಐಐಟಿಯಿಂದ ಜಪಾನ್ ಜರ್ನಿಯವರೆಗಿನ ಪಯಣ

ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಜನಿಸಿದ ಅಭಿಷೇಕ್ ಆನಂದ್, ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಐಐಟಿ ಕಾನ್‌ಪುರದಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ವ್ಯಾಸಂಗ ಮುಗಿಯುತ್ತಿದ್ದಂತೆಯೇ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಜಪಾನ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗ ದೊರೆಯಿತು. ಕರಿಯರ್ ಕಟ್ಟಿಕೊಳ್ಳುವ ಕನಸಿನೊಂದಿಗೆ ಅವರು ಜಪಾನ್‌ಗೆ ಹಾರಿದರು.

ವೃತ್ತಿಯ ಜೊತೆಗೆ ಕ್ರಿಕೆಟ್ ಅಭ್ಯಾಸ..

ಹೊಸ ದೇಶ, ಸಂಪೂರ್ಣ ಬದಲಾದ ವಾತಾವರಣ ಮತ್ತು ಐಟಿ ಉದ್ಯೋಗದ ಜವಾಬ್ದಾರಿಗಳ ನಡುವೆಯೂ ಅಭಿಷೇಕ್ ತಮ್ಮ ನೆಚ್ಚಿನ ಕ್ರಿಕೆಟ್ ಕ್ರೀಡೆಯನ್ನು ಕೈಬಿಡಲಿಲ್ಲ. ಜಪಾನ್‌ಗೆ ಹೋದ ತಕ್ಷಣವೇ ಅಲ್ಲಿನ ಸ್ಥಳೀಯ ಕ್ರಿಕೆಟ್ ಕ್ಲಬ್‌ ಒಂದಕ್ಕೆ ಸೇರಿದರು. ಹಗಲಿನಲ್ಲಿ ಕಾರ್ಪೊರೇಟ್ ಕೆಲಸ ಮಾಡುತ್ತಲೇ, ಬಿಡುವಿನ ವೇಳೆಯಲ್ಲಿ ಕಠಿಣ ತರಬೇತಿಯಲ್ಲಿ ತೊಡಗಿಸಿಕೊಂಡರು.

ಅವರ ಈ ಅಪಾರ ಶ್ರಮ ಮತ್ತು ಶ್ರದ್ಧೆಗೆ ಮೂರೇ ವರ್ಷಗಳಲ್ಲಿ ಅದ್ಭುತ ಫಲ ಸಿಕ್ಕಿತು. ಜಪಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಸಾಲಿನಲ್ಲಿ ಅಭಿಷೇಕ್ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದು ಇಡೀ ಭಾರತವೇ ಹೆಮ್ಮೆಪಡುವಂತಹ ವಿಷಯವಾಗಿದ್ದು, ಇವರ ಸಾಧನೆಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ

2025ರಲ್ಲಿ ಕುಕ್ ಐಲ್ಯಾಂಡ್ಸ್ ವಿರುದ್ಧ ನಡೆದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಭಿಷೇಕ್ ಆನಂದ್ ಜಪಾನ್ ತಂಡದ ಪರವಾಗಿ ಪಾದಾರ್ಪಣೆ ಮಾಡಿದರು. ಈ ಮೂಲಕ ಜಪಾನ್ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ 111ನೇ ಅಂತಾರಾಷ್ಟ್ರೀಯ ಆಟಗಾರ ಎಂಬ ವಿಶೇಷ ಗೌರವಕ್ಕೆ ಪಾತ್ರರಾದರು.

ಬಿಹಾರದಿಂದ ಜಪಾನ್‌ವರೆಗಿನ ಸ್ಫೂರ್ತಿದಾಯಕ ಪ್ರಯಾಣ

ಬಿಹಾರ → ಐಐಟಿ ಕಾನ್‌ಪುರ → ಜಪಾನ್ ಐಟಿ ಉದ್ಯೋಗ → ಸ್ಥಳೀಯ ಕ್ರಿಕೆಟ್ ಕ್ಲಬ್ → ನಂತರ ಜಪಾನ್ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾದರು. ಈ ಸಾಧನೆಯ ಹಿಂದಿರುವುದು ಕೇವಲ ಪ್ರತಿಭೆಯಷ್ಟೇ ಅಲ್ಲ, ಅವರ ಸತತ ಪ್ರಯತ್ನ. ತಮ್ಮ ಕನಸನ್ನು ಮುಟ್ಟಲು ಅವರು ಸೂಕ್ತ ಸಮಯಕ್ಕಾಗಿ ಕಾಯಲಿಲ್ಲ. ಉದ್ಯೋಗ, ಹೊಸ ವಾತಾವರಣ ಮತ್ತು ಜವಾಬ್ದಾರಿಗಳ ನಡುವೆಯೂ ಕ್ರೀಡೆಯ ಮೇಲಿದ್ದ ಪ್ರೀತಿಯನ್ನು ಜೀವಂತವಾಗಿರಿಸಿಕೊಂಡರು.

ಯುವಜನತೆಗೆ ಪ್ರೇರಣೆಯಾದ ಭಾರತ ಮೂಲದ ಅಭಿಷೇಕ್

ಅಭಿಷೇಕ್ ಆನಂದ್ ಅವರ ಕಥೆಯು ಇಂದಿನ ಯುವಜನತೆಗೆ ಮಾದರಿಯಾಗಿದೆ. ನೆಚ್ಚಿನ ಹವ್ಯಾಸ ಅಥವಾ ಆಸಕ್ತಿಯನ್ನು ಮುಂದುವರೆಸಲು ವೃತ್ತಿಜೀವನವನ್ನು ತ್ಯಜಿಸಬೇಕಿಲ್ಲ. ಬದಲಿಗೆ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ದರೆ, ನಿಮ್ಮ ಆಸಕ್ತಿಯೇ ಒಂದು ದಿನ ನೀವು ಊಹಿಸದ ಹೊಸ ಬಾಗಿಲನ್ನು ತೆರೆಯುತ್ತದೆ. ಹೊಸ ನಗರ ಅಥವಾ ಉದ್ಯೋಗ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ತಿಳಿಯದಿದ್ದರೂ, ನಮ್ಮಿಷ್ಟದ ಕನಸುಗಳನ್ನು ಜೀವಂತವಾಗಿಡುವುದು ನಮ್ಮ ಕೈಯಲ್ಲೇ ಇದೆ ಎಂಬುದನ್ನು ಅಭಿಷೇಕ್ ನಿರೂಪಿಸಿದ್ದಾರೆ. ಇವರ ಸಾರ್ಥಕತೆಯ ಪ್ರಯಾಣ ಯುವ ಪೀಳಿಗೆಗೆ ಪ್ರೇರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+