ಭಾರತಕ್ಕೆ ಭರ್ಜರಿ ಗೆಲುವು, ಟಿ20 ವಿಶ್ವಕಪ್ ಗೆದ್ದು ಬೀಗಿದ ಟೀಂ ಇಂಡಿಯಾ!

ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯವನ್ನು ಗೆದ್ದು ಬೀಗಿದ್ದು, ಈ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದೆ. 2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದ್ದ ಭಾರತಕ್ಕೆ 2024 ರಲ್ಲಿ ಮತ್ತೊಮ್ಮೆ ವಿಜಯಲಕ್ಷ್ಮೀ ಒಲಿದು ಬಂದಿದ್ದು, ಇಡೀ ಭಾರತವೇ ಈಗ ಸಂಭ್ರಮಾಚರಣೆ ನಡೆಸುತ್ತಿದೆ. ಹಾಗಾದ್ರೆ ಭಾರತದ ಗೆಲುವಿನ ಹಾದಿ ಹೇಗಿತ್ತು? ಬನ್ನಿ ತಿಳಿಯೋಣ.

ಅಂದಹಾಗೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ, ವಿರಾಟ್ ಕೊಹ್ಲಿ ಅವರ ಅರ್ಧಶತಕ & ಅಕ್ಷರ್ ಪಟೇಲ್ ಅವ್ರ ಅಮೋಘ ಆಟದ ನೆರವಿನಿಂದಾಗಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ಟೀಂಗೆ 177 ರನ್‌ ಗುರಿ ನೀಡಲಾಗಿತ್ತು. ಹೀಗೆ 177 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಒಂದು ಹಂತದಲ್ಲಿ ಸುಲಭವಾಗಿ ಮ್ಯಾಚ್ ಗೆದ್ದೇ ಬಿಡುತ್ತೆ ಎಂಬ ಪರಿಸ್ಥಿತಿ ಎದುರಾಗಿತ್ತು. ಆಗಲೇ ನೋಡಿ ಜಸ್ಪ್ರಿತ್ ಬುಮ್ರಾ ಪಂದ್ಯದ ಹಣೆಬರಹ ಪೂರ್ತಿ ಬದಲಾಯಿಸಿದರು!

India Won The 2024 T20 Cricket World Cup Final Match Against South Africa

ಗೆಲ್ಲುವ ಹಂತಕ್ಕೆ ಹೋದಿದ್ದ ಆಫ್ರಿಕಾ!

ಭಾರತ ತಂಡದ ಇನ್ನಿಂಗ್ಸ್ ಆರಂಭಿಸಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಪಂದ್ಯದಲ್ಲಿ ಉತ್ತಮ ಜೊತೆಯಾಟ ನೀಡುವ ನಿರೀಕ್ಷೆ ಹೊಂದಿದ್ದರು. ಆದರೆ ಬೇಗನೇ ಈ ಜೋಡಿ ದೂರ ಆಗಿತ್ತು. ಈ ಜೋಡಿ ಮೊದಲ ವಿಕೆಟ್‌ಗೆ 1.4 ಓವರ್‌ನಲ್ಲಿ 23 ರನ್‌ ಜೊತೆ ಆಟ ನೀಡಿತ್ತು. ಆ ನಂತರ ವಿರಾಟ್ ಕೊಹ್ಲಿ & ಅಕ್ಸರ್ ಪಟೇಲ್ ಇಡೀ ದಕ್ಷಿಣ ಆಫ್ರಿಕಾ ಬೌಲಿಂಗ್ ಪಡೆಯನ್ನ ಬಗ್ಗು ಬಡಿದರು. ನಂತರ ಬ್ಯಾಟಿಂಗ್ ಆರಂಭಿಸಿದ್ದ ದ.ಆಫ್ರಿಕಾ ಆರಂಭದಲ್ಲಿ ಮುಗ್ಗರಿಸಿದರೂ, ನಂತರ ಕಪ್ ಗೆಲ್ಲುವ ಹಂತಕ್ಕೆ ಹೋಗಿತ್ತು.

ಹೀಗೆ ಒಂದು ಹಂತದಲ್ಲಿ 66 ಬಾಲ್‌ಗೆ 96 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದ್ದರು ದಕ್ಷಿಣ ಆಫ್ರಿಕಾ ಆಟಗಾರರು. ಆದರೆ ಹೆನ್ರಿಕ್ ಕ್ಲಾಸೆನ್ ಅವರ 52 ರನ್‌ಗಳ ಕೊಡುಗೆ & ಡಿಕಾಕ್ ಚಚ್ಚಿದ 39 ರನ್ ಭಯ ಹುಟ್ಟಿಸಿತ್ತು. ಅಂತಿಮವಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಐಡಿಯಾ ಮಾಡಿ ಬುಮ್ರಾ ಕೈಗೆ ಬಾಲ್ ನೀಡಿ, ಅಂತಿಮ ಹಂತದಲ್ಲಿ ದಕ್ಷಿಣ ಆಫ್ರಿಕಾ 9 ಬಾಲ್‌ಗೆ 16 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು.

ಸೂರ್ಯಕುಮಾರ್ ಯಾದವ್ ಕೂಡ ಹೀರೋ!

ಆ ನಂತರ ಭಾರತದ ಆಟಗಾರರು ದಕ್ಷಿಣ ಆಫ್ರಿಕಾ ತಂಡಕ್ಕೆ ಯಾವುದೇ ಅವಕಾಶವನ್ನ ನೀಡದೆ ಸೋಲಿಸಿದರು. ಅದರಲ್ಲೂ ಸೂರ್ಯಕುಮಾರ್ ಯಾದವ್ ಪಂದ್ಯದ ಕೊನೆಗೆ ಹಿಡಿದ ಕ್ಯಾಚ್, ಇಡೀ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಕ್ಯಾಚ್ ಎನಿಸಿಕೊಂಡಿದೆ. ಈ ಮೂಲಕ ಭಾರತ ತಂಡ ಮತ್ತೊಮ್ಮೆ ತನ್ನ ತಾಕತ್ ಏನು ಅನ್ನೋದನ್ನ ಕ್ರಿಕೆಟ್‌ನ ಪ್ರತಿಯೊಂದು ತಂಡಕ್ಕೂ ತೋರಿಸಿದೆ. ಹಾಗೇ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+