India Pakistan match: ದುಬೈನಲ್ಲಿ ನಡೆಯಲಿರುವ ಇಂಡಿಯಾ-ಪಾಕ್ ಮ್ಯಾಚ್ ನೋಡಲು ದಾವೂದ್ ಇಬ್ರಾಹಿಂ..
ಭಾರತ & ಪಾಕಿಸ್ತಾನ ನಡುವೆ ನಡೆಯಲಿರುವ ಮಹತ್ವದ ಪಂದ್ಯಕ್ಕೆ ಇನ್ನೇನು ಕೆಲವೇ ಕ್ಷಣ ಬಾಕಿ ಉಳಿದಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ರಂಗು ಹೆಚ್ಚಿಸಲು ಈಗ ಭಾರತ & ಪಾಕಿಸ್ತಾನ ನಡುವೆ ಮಹತ್ವದ ಪಂದ್ಯ ನಡೆಯುತ್ತಿದೆ. ಗೆಲುವಿಗಾಗಿ ಎರಡೂ ತಂಡಗಳ ಮಧ್ಯೆ ದೊಡ್ಡ ಹೋರಾಟ ನಡೆಯಲಿದೆ. ಇಂತಹ ಸಮಯದಲ್ಲೇ ಎಲ್ಲರ ಕಣ್ಣು ಇದೀಗ ದಾವೂದ್ ಇಬ್ರಾಹಿಂ ಮೇಲೆ ಬಿದ್ದಿದೆ!
ಐಸಿಸಿ ನಡೆಸುವ ಯಾವುದೇ ಟೂರ್ನಮೆಂಟ್ ಇರಲಿ ಅಲ್ಲಿ ಭಾರತ & ಪಾಕಿಸ್ತಾನದ ನಡುವೆ ಮ್ಯಾಚ್ ಗ್ಯಾರಂಟಿ. ಯಾಕಂದ್ರೆ ಕ್ರೇಜ್‌ಗೆ ಮತ್ತೊಂದು ಹೆಸರೇ ಭಾರತ & ಪಾಕಿಸ್ತಾನ ಮ್ಯಾಚ್ ಅಂತಾ ಹೇಳಬಹುದು. ಹೀಗಿದ್ದಾಗ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಡ ಭಾರತ & ಪಾಕ್ ನಡುವಿನ ಪಂದ್ಯಕ್ಕೆ ಸಾಕ್ಷಿಯಾಗುತ್ತಿದೆ. ಇಂತಹ ಸಮಯದಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಚಾರ ಕೂಡ ಪ್ರಸ್ತಾಪವಾಗುತ್ತಿದೆ. ಕಾರಣ ಏನು? ಮುಂದೆ ಓದಿ.

ಮ್ಯಾಚ್ ನೋಡಲು ದಾವೂದ್ ಎಂಟ್ರಿ?
ಪಾಕಿಸ್ತಾನ ತೀವ್ರವಾದ ಆರ್ಥಿಕ ನಷ್ಟದಲ್ಲಿ ನಲುಗಿ ಹೋಗಿದ್ದು, ತುತ್ತು ಅನ್ನಕ್ಕೂ ನರಳಾಟ ಕಂಡುಬರುತ್ತಿದೆ. ಪಾಕಿಸ್ತಾನದ ಜನರು ಉದ್ಯೋಗ ಇಲ್ಲದೆ, ತಿನ್ನಲು ಅನ್ನ ಇಲ್ಲದೆ ಪರದಾಟ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಭಾರತವನ್ನು ಎದುರು ಹಾಕಿಕೊಂಡು 'ಚಾಂಪಿಯನ್ಸ್ ಟ್ರೋಫಿ' ಆಯೋಜನೆ ಮಾಡಿದೆ. ಆದರೆ ಯಾವುದೇ ರೀತಿಯ ಮುನ್ನೆಚ್ಚರಿಕೆ ಇಲ್ಲದ ಕಾರಣ ಇದು ಕೂಡ ದೊಡ್ಡ ಫ್ಲಾಪ್ ಶೋ ಆಗುತ್ತಿದೆ. ಇಂತಹ ಸ್ಥಿತಿ ಎದುರಾಗಿರುವಾಗ ಭಾರತದ ವಿರುದ್ಧ ನಡೆಯಲಿರುವ ಪಾಕಿಸ್ತಾನದ ಪಂದ್ಯ ಸಾಕಷ್ಟು ಗಮನ ಸೆಳೆದಿದೆ.
ದುಬೈನಲ್ಲಿ ನಡೆಯುತ್ತಿರುವ ಮ್ಯಾಚ್
ಭದ್ರತಾ ಕಾರಣಗಳಿಗೆ ದುಬೈನಲ್ಲಿ ಈ ಮ್ಯಾಚ್ ನಡೆಯುತ್ತಿದ್ದು, ಪಂದ್ಯ ನೋಡಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬರೋದು ಗ್ಯಾರಂಟಿನಾ? ಅನ್ನೋ ಚರ್ಚೆ ಜೋರಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ. ಅಲ್ಲದೆ ಇದೇ ಪಂದ್ಯಕ್ಕಾಗಿ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇನ್ನೇನು ಕೆಲವೇ ಗಂಟೆಗಳ ಒಳಗೆ ಫಲಿತಾಂಶ ಕೂಡ ಹೊರ ಬೀಳಲಿದೆ.












Click it and Unblock the Notifications