IND VS PAK: ಭಾರತದ ವಿರುದ್ಧ ಚಾಂಪಿಯನ್ ಟ್ರೋಪಿ ಪಂದ್ಯಕ್ಕೂ ಮುನ್ನವೇ ಪಾಕ್‌ಗೆ ದೊಡ್ದ ಆಘಾತ
IND VS PAK: ನಿನ್ನೆ (ಫೆಬ್ರವರಿ 21) ನಡೆದ ಚಾಂಪಿಯನ್ಸ್ ಟ್ರೋಪಿ ಪಂದ್ಯದಲ್ಲಿ ಭಾರತವು ಬಾಂಗ್ಲಾ ವಿರುದ್ಧ ಗೆದ್ದು ಬೀಗಿದೆ. ಮತ್ತೆ ಫೆಬ್ರವರಿ 23ರಂದು ಟೀಂ ಇಂಡಿಯಾ ಮತ್ತು ಪಾಕ್ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನವೇ ಪಾಕ್‌ಗೆ ದೊಡ್ಡ ಆಘಾತವೊಂದು ಎದುರಾಗಿದೆ. ಹಾಗಾದರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರೀಂಡಾಂಗಣದಲ್ಲಿ ಭಾರತವು ಬಾಂಗ್ಲಾ ವಿರುದ್ಧ ಸೆಣಸಾಡಿ ಭರ್ಜರಿ ಗೆಲುವು ಸಾಧಿಸಿದೆ. ಅದರಲ್ಲೂ ಭರ್ಜರಿ ಶತಕ ಸಿಡಿಸಿದ ಶುಭ್‌ಮನ್ ಗಿಲ್ ಅವರ ಪಾತ್ರ ಪ್ರಮುಖವಾಗಿದೆ. ಆರಂಭಿಕ ಕ್ರಮಾಂಕದಲ್ಲಿ ಬಂದ ಶುಭ್‌ಮನ್ ಗಿಲ್ ಕೊನೆಯವರೆಗೂ ಉತ್ತಮ ಬ್ಯಾಟ್ ಬೀಸುವ ಮೂಲಕ ಬಾಂಗ್ಲಾ ಬೌಲರ್‌ಗಳಿಗೆ ಬೆವರಿಳಿಸಿ ಔಟಾಗದೇ 129 ಬಾಲ್‌ಗಳಿಗೆ 9 ಬೌಂಡರಿ, 2 ಸಿಕ್ಸರ್ ಸಿಡಿಸುವ ಮೂಲಕ 101 ರನ್ ಚಚ್ಚಿ ಭಾರತದ ಗೆಲುವಿಗೆ ಪ್ರಮುಖ ಪಾತ್ರರಾದರು.

ಶುಭ್‌ಮನ್ ಗಿಲ್ ಜೊತೆ ಆರಂಭಿಕ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಕೆ ನಾಯಕ ರೋಹಿತ್ ಶರ್ಮಾ ಅವರು 36 ಬಾಲ್‌ಗಳಿಗೆ 41 ಗಳಿಸಿ ಕ್ಯಾಚ್ ಔಟ್ ಆದರು. ವಿರಾಟ್ ಕೊಹ್ಲಿ 38 ಬಾಲ್‌ಗಳಿಗೆ 28 ರನ್, ಶ್ರೇಯಸ್ ಅಯ್ಯರ್ 15, ಅಕ್ಸರ್ ಪಟೇಲ್ 8 ರನ್‌ಗಳಿಗೆ ಔಟ್ ಆದರು. ನಂತರದ ಕ್ರಮಾಂಕದಲ್ಲಿ ಬಂದ ಕೆ.ಎಲ್.ರಾಹುಲ್ ಕೂಡ ಉತ್ತಮವಾಗಿ ಬ್ಯಾಟಿಂಗ್ ಮೂಲಕ ಗಿಲ್ ಜೊತೆ ಉತ್ತಮ ಜೊತೆಯಾಟ ಆಡಿ 1 ಸಿಕ್ಸ್, 2 ಬೌಂಡರಿ 41 ರನ್ ಚಚ್ಚಿದರು.
ಈ ಮೂಲಕ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಬಾಂಗ್ಲಾ ನೀಡಿದ್ದ 229 ರನ್‌ಗಳ ಟಾರ್ಗೆಟ್ ಅನ್ನು ಕೇವಲ 46.3 ಓವರ್‌ಗಳಿಗೆ ಕ್ಲಿಯರ್ ಮಾಡಿತು. ಮೊದಲು ಬ್ಯಾಂಟ್ ಮಾಡಿದ ಬಾಂಗ್ಲಾ ಭಾರತದ ಬೌಲರ್‌ಗಳ ಅಬ್ಬರಕ್ಕೆ 49.4 ಓವರ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 228 ರನ್‌ಗಳಿಸಲು ಹೆಣಗಾಡಿತು. ಬಳಿಕ ಈ ಟಾರ್ಗೆಟ್ ಬೆನ್ನತ್ತಿದ್ದ ಭಾರತವು ಸುಲಭವಾಗಿ ಪಂದ್ಯ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇನ್ನು ನಂತರದ ಭಾರತವು ಫೆಬ್ರವರಿ 23ರಂದು ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ. ಈಗಾಗಲೇ ಯುವ ಉತ್ತಮ ಲಯ ಕಂಡುಕೊಂಡಿರುವ ಭಾರತ ಆಟಗಾರರು ಈ ಪಂದ್ಯವನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದ್ದಾರೆ. ಈ ಪಂದ್ಯ ವೀಕ್ಷಣೆಗೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಮತ್ತೊಂದೆಡೆ ಭಾರತದ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಮುನ್ನವೇ ಪಾಕ್ ತಂಡಕ್ಕೆ ದೊಡ್ಡ ಆಘಾತವೊಂದು ಎದರುರಾಗಿದೆ.
ಆರಂಭಿಕ ಆಟಗಾರ ಫಖರ್ ಜಮಾನ್ ಮೊಣಕಾಲಿನ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಗುರುವಾರ ದುಬೈಗೆ ತೆರಳಿರುವ ತಂಡದಲ್ಲಿ ಇಮಾಮ್-ಉಲ್-ಹಕ್ ಸ್ಥಾನ ಪಡೆದಿದ್ದಾರೆ. ಐಸಿಸಿ ಕಾರ್ಯಕ್ರಮ ತಾಂತ್ರಿಕ ಸಮಿತಿಯಿಂದ ಅನುಮೋದನೆ ಪಡೆದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡದಲ್ಲಿ ಬದಲಾವಣೆ ಮಾಡಿದೆ.
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ-ಪಾಕಿಸ್ತಾನ ಮುಖಾಮುಖಿಯಾಗಲಿವೆ. 72 ಏಕದಿನ ಪಂದ್ಯಗಳನ್ನು ಆಡಿರುವ 29 ವರ್ಷದ ಇಮಾಮ್ ಅವರನ್ನು ತಂಡಕ್ಕೆ ಬದಲಿ ಆಟಗಾರನಾಗಿ ಸೇರಿಸಿಕೊಳ್ಳಲಾಗಿದೆ ಎಂದು ಐಸಿಸಿ ಮಾಹಿತಿ ನೀಡಿದೆ. ಫೆಬ್ರವರಿ 19ರಂದು ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದ ವೇಳೆ ಜಮಾನ್ ಗಾಯಗೊಂಡಿದ್ದರು.
"ದುರದೃಷ್ಟವಶಾತ್ ನಾನು ಈಗ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಿಂದ ಹೊರಗುಳಿದಿದ್ದೇನೆ. ಆದರೆ, ಅಲ್ಲಾಹ್ ಅತ್ಯುತ್ತಮ ಯೋಜಕನಾಗಿದ್ದಾನೆ. ಅವಕಾಶಕ್ಕಾಗಿ ಕೃತಜ್ಞನಾಗಿದ್ದೇನೆ. ನಾನು ಮನೆಯಿಂದಲೇ ನಮ್ಮ ತಂಡವನ್ನು ಬೆಂಬಲಿಸುತ್ತೇನೆ," ಎಂದು ಜಮಾನ್ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆದರೆ ಇದೀಗ ಉತ್ತಮ ಫಾರ್ಮ್‌ನಲ್ಲಿದ್ದ ಜಮಾನ್ ಅವರು ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಆಘಾತ ಆದಂತಾಗಿದೆ.












Click it and Unblock the Notifications