India vs New Zealand: ನ್ಯೂಜಿಲೆಂಡ್‌ ವಿರುದ್ಧ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದು ಯಾರು?

India vs New Zealand 1st T20I: ಕ್ರೈಸ್ಟ್‌ಚರ್ಚ್‌ನಲ್ಲಿ ಗುರುವಾರ (ಅಕ್ಟೋಬರ್ 22) ನಡೆದ ಮೊದಲ ಟಿ20ಐ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸಂಜು ಸ್ಯಾಮ್ಸನ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡವು 5 ಪಂದ್ಯಗಳ ಈ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಈ ಕುರಿತ ವರದಿ ಸಂಪೂರ್ಣ ಇಲ್ಲಿದೆ ನೋಡಿ.

ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ನ್ಯೂಜಿಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 225 ರನ್‌ಗಳನ್ನು ಕಲೆಹಾಕಿತು. ಆದರೆ, ಭಾರತವು ಈ ಬೃಹತ್ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗುವ ಮೂಲಕ ಭರ್ಜರಿ ಗಲುವು ಸಾಧಿಸಿತು.

India vs New Zealand 1st T20I Sanju Samson Stars as India Chase Record 226-Run Target Know details

ಹೊಸ ದಾಖಲೆ ಬರೆದ ಟೀಮ್ ಇಂಡಿಯಾ

ನ್ಯೂಜಿಲೆಂಡ್ ನೀಡಿದ್ದ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 230 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತ ಸಾಧಿಸಿದ ಅತ್ಯಂತ ಗರಿಷ್ಠ ಯಶಸ್ವಿ ರನ್ ಚೇಸಿಂಗ್ ಎಂಬ ನೂತನ ದಾಖಲೆಯಾಗಿದೆ.

ಭಾರತದ ಗೆಲುವಿಗೆ ಪ್ರಮುಖ ಕಾರಣಕರ್ತರು ಯಾರು?

ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಕೇವಲ 33 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 67 ರನ್ ಸಿಡಿಸಿ ಇನಿಂಗ್ಸ್‌ಗೆ ಬಲವಾದ ತಡಿಪಾಯ ಹಾಕಿಕೊಟ್ಟರು. ಅಭಿಷೇಕ್ ಶರ್ಮಾ 29(12) ರನ್‌ಗಳ ಕೊಡುಗೆ ನೀಡಿದರು. ಸ್ಯಾಮ್ಸನ್ ನಿರ್ಗಮನದ ಬಳಿಕ ನಾಯಕ ಶ್ರೇಯಸ್ ಅಯ್ಯರ್ 42(28) ರನ್ ಬಾರಿಸಿದರೆ, ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ 24(14) ರನ್‌ ಕಲೆಹಾಕಿ ವಿಕೆಟ್‌ ಒಪ್ಪಿಸಿದರೆ, ನಮನ್ ಧೀರ್ ಅಜೇಯ 42 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕಿವೀಸ್ ಪರ ಯಾರು ಎಷ್ಟು ರನ್ ಬಾರಿಸಿದರು?

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿತ್ತು. ಕಿವೀಸ್ ಪಡೆ ಪರ ಗ್ಲೆನ್ ಫಿಲಿಪ್ಸ್ ಕೇವಲ 40 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 82 ರನ್ ಗಳಿಸಿದರೆ, ಫಿನ್ ಅಲೆನ್ 45 ರನ್‌ಗಳ ಕಾಣಿಕೆ ನೀಡಿದ್ದರು. ಉಳಿದಂತೆ ಬೆವೊನ್ ಜೇಕಬ್ಸ್ 31(16), ಡ್ಯಾರಿಲ್ ಮಿಚೆಲ್ 28 ರನ್ ಸಿಡಿಸಿದರು. ಭಾರತದ ಪರ ಬೌಲಿಂಗ್ ದಾಳಿ ನಡೆಸಿದ ಅರ್ಷದೀಪ್ ಸಿಂಗ್, ಮಾಯಾಂಕ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಅನುಭವಿ ಭುವನೇಶ್ವರ್ ಕುಮಾರ್ ಅವರು ನಾಲ್ಕು ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ್ದು, ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯದೇ 49 ರನ್‌ ಬಿಟ್ಟುಕೊಟ್ಟರು. ಆದರೆ ಅವರು ಮುಂದಿನ ಪಂದ್ಯದಗಳಲ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆ ಎನ್ನುವುದು ಅಭಿಮಾನಿಗಳು ನಿರೀಕ್ಷೆಯಾಗಿದೆ. ಅವರ ಮುಂದಿನ ಪ್ರದರ್ಶನಕ್ಕಾಗಿ ಕಾದುನೋಡಬೇಕಿದೆ.

ಭುವನೇಶ್ವರ್ ಕುಮಾರ್ ಮೇಲೆ ಅಭಿಮಾನಿಗಳ ನಿರೀಕ್ಷೆ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದ ಮೂಲಕ ಸುದೀರ್ಘ ವಿರಾಮದ ನಂತರ ಭಾರತ ತಂಡಕ್ಕೆ ಮರಳಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ತಮ್ಮ ಕಂಬ್ಯಾಕ್ ಪಂದ್ಯದಲ್ಲಿ 49 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯಲು ಸಾಧ್ಯವಾಗದಿರಬಹುದು. ಆದರೆ ಕಿವೀಸ್ ಬ್ಯಾಟರ್‌ಗಳು ಅಬ್ಬರಿಸಿದ ಕ್ರೈಸ್ಟ್‌ಚರ್ಚ್‌ನ ಹೈ-ಸ್ಕೋರಿಂಗ್ ಮೈದಾನದಲ್ಲಿ ಹೊಸ ಚೆಂಡನ್ನು ಸ್ವಿಂಗ್ ಮಾಡುವ ಅವರ ಸಾಮರ್ಥ್ಯ ಮತ್ತು ರನ್ ಚೇಸಿಂಗ್ ವೇಳೆ ಪ್ರದರ್ಶಿಸಿದ ಅನುಭವ ತಂಡಕ್ಕೆ ಭರವಸೆ ಮೂಡಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ವಿಕೆಟ್‌ಗಳನ್ನು ಕಬಳಿಸಿ, ಡೆತ್ ಓವರ್‌ಗಳಲ್ಲಿ ಹಾಗೂ ಪವರ್‌ಪ್ಲೇನಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಅಪಾರ ಅನುಭವ ಭುವಿಗಿದೆ. ಮೊದಲ ಪಂದ್ಯದಲ್ಲಿ ಲಯ ಕಂಡುಕೊಳ್ಳಲು ಸಣ್ಣ ಹಿನ್ನಡೆಯಾಗಿದ್ದರೂ, ಕಿವೀಸ್ ನೆಲದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಮುಂಬರುವ ಪಂದ್ಯಗಳಲ್ಲಿ ಅವರು ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳುವುದು ಖಚಿತ ಎಂಬ ಬಲವಾದ ನಂಬಿಕೆ ಅಭಿಮಾನಿಗಳಲ್ಲಿದೆ.

ಸ್ವಿಂಗ್ ಕಿಂಗ್ ಎನಿಸಿಕೊಂಡಿರುವ ಭುವನೇಶ್ವರ್ ಕುಮಾರ್, ಸರಣಿಯ ಮುಂದಿನ ಪಂದ್ಯಗಳಲ್ಲಿ ಕಂಟ್ರೋಲ್ಡ್ ಬೌಲಿಂಗ್ ಹಾಗೂ ವಿಕೆಟ್ ಬೇಟೆಯ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+