ಟೀಮ್ ಇಂಡಿಯಾಗೆ ಆರ್‌ಸಿಬಿ ಸ್ಟಾರ್ ಬೌಲರ್ ಭುವನೇಶ್ವರ್ ಕಮ್‌ಬ್ಯಾಕ್; ಕಿವೀಸ್‌ ವಿರುದ್ಧ ಪ್ಲೇಯಿಂಗ್ 11 ಹೀಗಿದೆ

India vs New Zealand: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯವು ಗುರುವಾರ (ಅಕ್ಟೋಬರ್ 22) ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಸರಣಿಯನ್ನಾದರೂ ಗೆಲುವಿನೊಂದಿಗೆ ಆರಂಭಿಸಲು ಶ್ರೇಯಸ್ ಅಯ್ಯರ್ ಪಡೆ ಮೈದಾನಕ್ಕಿಳಿಯುತ್ತಿದೆ. ವಿಶೇಷತೆ ಅಂದ್ರೆ ಆರ್‌ಸಿಬಿ ಸ್ಟಾರ್ ಭುವನೇಶ್ವರ್ ಕುಮಾರ್ ಮತ್ತೆ ಭರ್ಜರಿ ಕಮ್‌ಬ್ಯಾಕ್‌ ಮಾಡಿರುವುದು. ಹಾಗಾದ್ರೆ ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈ ಸರಣಿಯ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಭಾರತ ತಂಡಕ್ಕೆ ಮರಳುವಿಕೆ. ಜಸ್ಪ್ರೀತ್ ಬುಮ್ರಾಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿರುವುದರಿಂದ, ಭುವಿ ವೇಗದ ಬೌಲಿಂಗ್ ದಾಳಿಯ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

India vs New Zealand 1st T20I Predicted Playing XI RCB Star Bowler Bhuvneshwar Kumar Returns

ಗಾಯದಿಂದ ಚೇತರಿಸಿಕೊಂಡ ವರುಣ್ ಚಕ್ರವರ್ತಿ

ನ್ಯೂಜಿಲೆಂಡ್‌ನ ಸ್ವಿಂಗ್ ಪಿಚ್‌ಗಳಲ್ಲಿ ಹೊಸ ಚೆಂಡಿನೊಂದಿಗೆ ದಾಳಿ ನಡೆಸಲು ಭುವನೇಶ್ವರ್ ಕುಮಾರ್ ಸಿದ್ಧರಾಗಿದ್ದು, ಅವರಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಹಾಗೂ ಪ್ರಿನ್ಸ್ ಯಾದವ್ ಸಾಥ್ ನೀಡಲಿದ್ದಾರೆ. ಜೊತೆಗೆ ಗಾಯದಿಂದ ಚೇತರಿಸಿಕೊಂಡಿರುವ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ತಂಡಕ್ಕೆ ಮರಳಿದ್ದಾರೆ.

ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದ ವಿವರ

ಕಿವೀಸ್ ಮೈದಾನಗಳು ವೇಗದ ಬೌಲಿಂಗ್ ಹಾಗೂ ಹೆಚ್ಛಿನ ಬೌನ್ಸ್‌ಗೆ ಹೆಸರಾಗಿರುವುದರಿಂದ ಭಾರತೀಯ ಬ್ಯಾಟರ್‌ಗಳಿಗೆ ಇದು ಕಠಿಣ ಪರೀಕ್ಷೆಯಾಗಲಿದೆ. ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇದರಿಂದಾಗಿ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಪ್ಲೇಯಿಂಗ್ 11ನಲ್ಲಿ ಅವಕಾಶಕ್ಕಾಗಿ ಇನ್ನು ಕೆಲವು ಪಂದ್ಯ ಕಾಯಬೇಕಾಗಿದೆ. ಇನ್ನೂ ಮೂರನೇ ಇಶಾನ್ ಕಿಶನ್, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಐದನೇ ಸ್ಥಾನದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ.

ನ್ಯೂಜಿಲೆಂಡ್ ವಾತಾವರಣದಲ್ಲೂ ಸ್ಪಿನ್ ಆಲ್‌ರೌಂಡರ್‌ಗಳ ಪಾತ್ರ ಪ್ರಮುಖವಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಅಕ್ಷರ್ ಪಟೇಲ್ ಮತ್ತು ನಮನ್ ಧೀರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್‌ 11

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್.

ನ್ಯೂಜಿಲೆಂಡ್ ಪ್ಲೇಯಿಂಗ್‌ 11

ಫಿನ್ ಅಲೆನ್, ಟಿಮ್ ಸೀಫರ್ಟ್ (ವಿಕೆಟ್ ಕೀಟರ್), ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನಾಥನ್ ಸ್ಮಿತ್, ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್.

ವೈಭವ್‌ಗೆ ಯಾಕಿಲ್ಲ ಅವಕಾಶ?

ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಸ್ಟೋಟಕ ಬ್ಯಾಟಿಂಗ್ ಮೂಲಕ ವಿಶ್ವದ ಗಮನ ಸೆಳೆದಿರುವ ಈ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಪ್ರಸ್ತುತ ಟೀಮ್ ಇಂಡಿಯಾದಲ್ಲಿದ್ದರೂ ಪ್ಲೇಯಿಂಗ್ 11ನಲ್ಲಿ ಜಾಗ ಪಡೆಯಲು ಪರದಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಕೂಡ ಇದೆ.

ಪ್ರಸ್ತುತ ಭಾರತ ಟಿ20 ತಂಡದ ಆರಂಭಿಕ ಜೋಡಿಯಾಗಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಸತತವಾಗಿ ರನ್ ಗಳಿಸುತ್ತಿದ್ದು, ತಂಡಕ್ಕೆ ಬಲವಾದ ತಡಿಪಾಯ ಹಾಕಿಕೊಡುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣವಿಲ್ಲದೆ ತಂಡದಲ್ಲಿ ಬದಲಾವಣೆ ಮಾಡಲು ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಬಯಸುತ್ತಿಲ್ಲ.

ಈಗಾಗಲೇ ಈ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಅವರು ಮಾತನಾಡಿದ್ದು, 'ಸತತವಾಗಿ ರನ್ ಗಳಿಸುತ್ತಿರುವ ಆಟಗಾರರಿರುವಾಗ ವೈಭವ್ ಸೂರ್ಯವಂಶಿಗೆ ಈಗಲೇ ನೇರ ಪ್ರವೇಶ ಸಿಗುವುದಿಲ್ಲ,' ಎಂದು ಹೇಳಿದ್ದಾರೆ. ವೈಭವ್‌ಗೆ ಈ ಸತ್ಯವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಂತ ಅವರನ್ನು ತಂಡದ ಯೋಜನೆಯಿಂದ ಹೊರಗಿಡಲಾಗಿಲ್ಲ. ಬದಲಿಗೆ ಸೂಕ್ತ ಸಮಯ ಬಂದಾಗ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+