India vs Australia: ಸೆಮಿಫೈನಲ್‌ನಲ್ಲಿ ಭಾರತ-ಅಸ್ಟ್ರೇಲಿಯಾ ಮುಖಾಮುಖಿ
ಭಾರತ ಮತ್ತೊಂದು ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ. ಶುಕ್ರವಾರ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ಶುಕ್ರವಾರ (ಜುಲೈ 12) ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ನಲ್ಲಿರುವ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ನ ಎರಡನೇ ಸೆಮಿಫೈನಲ್‌ನಲ್ಲಿಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್ ತಲುಪಲು ಭಾರತ ಸಜ್ಜಾಗಿದೆ.

ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಪಂದ್ಯಾವಳಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದ ಯುವರಾಜ್ ಸಿಂಗ್ ನೇತೃತ್ವದ ಭಾರತ ತಂಡವು, ಬಳಿಕ ಸತತವಾಗಿ ಮೂರು ಪಂದ್ಯಗಳನ್ನು ಸೋತಿದೆ. ಆದರೂ ರನ್‌ರೇಟ್ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಭಾರತ ಚಾಂಪಿಯನ್ಸ್ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ವಿರುದ್ಧ 54 ರನ್‌ಗಳಿಂದ ಸೋತಿದೆ. ಆದರೂ ರನ್‌ರೇಟ್ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾಗಿಂತ ಮುಂದೆ ಇದ್ದು, ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ. ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ 1ನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ಸೆಣೆಸಲಿವೆ.
ಪಂದ್ಯದ ಸಮಯ
ಭಾರತ ಚಾಂಪಿಯನ್ಸ್ vs ಆಸ್ಟ್ರೇಲಿಯಾ ಚಾಂಪಿಯನ್ಸ್ ಪಂದ್ಯವು ಸ್ಥಳೀಯ ಕಾಲಮಾನ (ಯುಕೆ) ಸಂಜೆ 4:30 ಕ್ಕೆ ಪ್ರಾರಂಭವಾಗಲಿದ್ದು, ಭಾರತ ಕಾಲಮಾನದ ಪ್ರಕಾರ ರಾತ್ರಿ 9 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಉಭಯ ತಂಡಗಳು
ಭಾರತ: ಯುವರಾಜ್ ಸಿಂಗ್ (ನಾಯಕ), ಹರ್ಭಜನ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಯೂಸುಫ್ ಪಠಾಣ್, ಗುರುಕೀರತ್ ಮಾನ್, ರಾಹುಲ್ ಶರ್ಮಾ, ನಮನ್ ಓಜಾ, ರಾಹುಲ್ ಶುಕ್ಲಾ, ಆರ್ ಪಿ ಸಿಂಗ್, ವಿನಯ್ ಕುಮಾರ್, ಧವಲ್ ಕುಲಕರ್ಣಿ, ಅನುರೀತ್ ಸಿಂಗ್, ಪವನ್ ನೇಗಿ.
ಆಸ್ಟ್ರೇಲಿಯಾ: ಬ್ರೆಟ್ ಲೀ, ಟಿಮ್ ಪೈನ್, ಶಾನ್ ಮಾರ್ಷ್, ಬೆನ್ ಕಟಿಂಗ್, ಬೆನ್ ಡಂಕ್, ಡಿರ್ಕ್ ನ್ಯಾನೆಸ್, ಡಾನ್ ಕ್ರಿಶ್ಚಿಯನ್, ಬೆನ್ ಲಾಫ್ಲಿನ್, ಆರನ್ ಫಿಂಚ್, ಜಾನ್ ಹೇಸ್ಟಿಂಗ್, ಬ್ರಾಡ್ ಹ್ಯಾಡಿನ್, ಕ್ಯಾಲಮ್ ಫರ್ಗುಸನ್, ಪೀಟರ್ ಸಿಡ್ಲ್, ಕ್ಸೇವಿಯರ್ ಡೊಹೆರ್ಟಿ, ನಾಥನ್ ಕೌಲ್ಟರ್-ನೈಲ್.












Click it and Unblock the Notifications