India vs Australia: ಮೊದಲ ಟೆಸ್ಟ್‌ ಆರಂಭದ ಸಮಯ, ಪಿಚ್ ವರದಿ, ಪ್ಲೇಯಿಂಗ್ 11

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತ ಬಳಿಕ ಭಾರತ ಹೊಸ ಸವಾಲಿಗೆ ಸಜ್ಜಾಗಿದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯಕ್ಕೆ ಭಾರತ ಸಜ್ಜಾಗಿದೆ. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರಿತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಟೆಸ್ಟ್‌ ಇದೀಗ ಭಾರಿ ಕುತೂಹಲ ಕೆರಳಿಸಿದ್ದು, ಭಾರತದ ಬ್ಯಾಟಿಂಗ್ ಪಡೆ ಕಾಂಗರೂ ಪಡೆಯ ಬೌಲರ್ ಗಳನ್ನು ಹೇಗೆ ಎದುರಿಸುತ್ತದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಮೊದಲ ಟೆಸ್ಟ್‌ ಪರ್ತ್‌ ಆಪ್ಟಸ್ ಸ್ಟೇಡಿಯಂನಲ್ಲಿ ನಡೆಯಲಿದ್ದು ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಭಾರತೀಯ ಕಾಲಮಾನ ಬೆಳಗ್ಗೆ 7.50ಕ್ಕೆ ಪಂದ್ಯ ಆರಂಭವಾಗಲಿದೆ. ಪರ್ತ್‌ನ ಆಪ್ಟಸ್‌ ಕ್ರೀಡಾಂಗಣದಲ್ಲಿ ಕ್ಲಾಸಿಕ್ ಪಿಚ್ ರೆಡಿ ಮಾಡಲು ಕ್ಯುರೇಟರ್ ಐಸಾಕ್ ಮೆಕ್‌ಡೊನಾಲ್ಡ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮೊದಲ ಎರಡು ದಿನ ಬ್ಯಾಟರ್ ಗಳಿಗೆ ಪಿಚ್‌ ವೇಗಿಗಳಿಗೆ ಹೆಚ್ಚಿನ ಅನುಕೂಲ ನೀಡಲಿದೆ, ವೇಗ ಮತ್ತು ಬೌನ್ಸ್‌ಗೆ ಸಹಕಾರಿಯಾಗುವ ಕಾರಣ ಬ್ಯಾಟರ್ ಗಳಿಗೆ ಕಷ್ಟವಾಗಲಿದೆ ಎನ್ನಲಾಗಿದೆ.

India vs australia 1st match timings pitch report probable xi

ಮೊದಲ ದಿನವೇ ಮಳೆ ಭೀತಿ

ಮೊದಲ ದಿನವೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕ ಎದುರಾಗಿದೆ. ಹವಾಮಾನ ವರದಿ ಪ್ರಕಾರ, ನವೆಂಬರ್ 22ರಂದು 25 ಪ್ರತಿಶತ ಮಳೆ ಬರುವ ಅವಕಾಶವಿದೆ ಎಂದು ಹೇಳಿದೆ. ಬೆಳಗ್ಗೆ ತುಂತುರು ಮಳೆಯಾಗಲಿದ್ದು, ಆಪ್ಟಸ್ ಸ್ಟೇಡಿಯಂನಲ್ಲಿ ವೇಗದ ಬೌಲಿಂಗ್‌ಗೆ ಪೂರಕವಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಮೊದಲ ದಿನ ಹೊರತುಪಡಿಸಿ ಉಳಿದ ನಾಲ್ಕು ದಿನ ಮಳೆಯ ಆತಂಕವಿಲ್ಲ ಎಂದು ಹೇಳಿದೆ.

ನಾಲ್ವರು ವೇಗಿಗಳು ಆಡುವ ಸಾಧ್ಯತೆ

ವೇಗಿಗಳಿಗೆ ಪಿಚ್ ಸಹಕಾರಿಯಾಗುವ ಕಾರಣ ನಾಯಕ ಜಸ್ಪ್ರೀತ್ ಬುಮ್ರಾ ಮೂವರು ವೇಗಿಗಳು ಮತ್ತು ಓರ್ವ ವೇಗದ ಆಲ್‌ರೌಂಡರ್ ರನ್ನು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಿಸುವ ಸಾಧ್ಯತೆ ಇದೆ. ಸ್ಪಿನ್‌ ಆಲ್‌ರೌಂಡರ್ ಆಗಿ ಜಡೇಜಾ ಅಥವಾ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆ ಇದೆ. ಮೊದಲ ಟೆಸ್ಟ್‌ಗೆ ರೋಹಿತ್ ಶರ್ಮಾ ಅಲಭ್ಯರಾಗಿರುವ ಕಾರಣ ಯಶಸ್ವಿ ಜೈಸ್ವಾಲ್ ಜೊತೆ ದೇವದತ್ ಪಡಿಕ್ಕಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಭಾರತ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದು. ಡಿಡಿ ಸ್ಪೋರ್ಟ್ಸ್‌ನಲ್ಲಿ ಕೂಡ ಉಚಿತವಾಗಿ ವೀಕ್ಷಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ವೀಕ್ಷಿಸುವವರು ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ನೋಡಬಹುದಾಗಿದೆ.

ಭಾರತ ಸಂಭ್ಯಾವ್ಯ ಆಡುವ ಬಳಗ

ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಧ್ರುವ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ / ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್ / ಪ್ರಸಿದ್ಧ್‌ ಕೃಷ್ಣ, ಜಸ್ಪ್ರೀತ್ ಬುಮ್ರಾ (ನಾಯಕ), ಮೊಹಮ್ಮದ್ ಸಿರಾಜ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+