Vaibhav Sooryavanshi: ಅಫ್ಗಾನ್ ವಿರುದ್ಧ ಟೀಮ್ ಇಂಡಿಯಾ ಪ್ಲೇಯಿಂಗ್ 11ನಲ್ಲಿ ವೈಭವ್ ಸೂರ್ಯವಂಶಿ..

India vs Afghanistan: ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ಭಾನುವಾರ (ಸೆಪ್ಟೆಂಬರ್ 13)ದಿಂದ ಆರಂಭವಾಗಲಿದೆ. ಹಾಗಾದ್ರೆ ಟೀಮ್ ಇಂಡಿಯಾ ಪ್ಲೇಯಿಂಗ್‌ 11ನಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಇರಲಿದ್ದಾರಾ ಎನ್ನುವ ಪ್ರಶ್ನೆಗಳು ಎದ್ದಿವೆ. ಇದೀಗ ಈ ಕುರಿತು ಕಾಮೆಂಟೇಟರ್ ವಿವೇಕ್ ರಾಜ್ದನ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 13ರ ಭಾನುವಾರ ನಡೆಯಲಿದ್ದು, ಭಾರತದ ಪ್ಲೇಯಿಂಗ್ 11 ಆಯ್ಕೆಯ ಬಗ್ಗೆ ತೀವ್ರ ಚರ್ಚೆಗಳು ಆರಂಭವಾಗಿವೆ. ಅದರಲ್ಲೂ ವಿಶೇಷವಾಗಿ, ತಂಡದಲ್ಲಿ ನಾಲ್ಕು ಪ್ರಮುಖ ಓಪನಿಂಗ್ ಆಯ್ಕೆಗಳಿರುವುದರಿಂದ ಮ್ಯಾನೇಜ್‌ಮೆಂಟ್‌ಗೆ ಅಂತಿಮ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ.

India vs Afghanistan T20 Will Vaibhav Sooryavanshi Play Vivek Razdan Gives Verdict Huge Viral

ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಭಾರತದ ಮಾಜಿ ವೇಗಿ ಹಾಗೂ ಪ್ರಸಿದ್ಧ ಕಾಮೆಂಟೇಟರ್ ವಿವೇಕ್ ರಾಜ್ದನ್ ಅವರು, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಮೊದಲ ಪಂದ್ಯದಲ್ಲಿ ಅವಕಾಶ ಸಿಗುವುದು ಕಷ್ಟ ಎಂದು ಹೇಳಿದ್ದಾರೆ.

'ಆರಂಭಿಕ ಕ್ರಮಾಂಕದಲ್ಲಿ ಸಂಜುಗೆ ಮೊದಲ ಆದ್ಯತೆ'

ಸೋನಿ ಸ್ಪೋರ್ಟ್ಸ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ವಿವೇಕ್ ರಾಜ್ದನ್ ಅವರು, ಟೀಮ್ ಇಂಡಿಯಾ ಆರಂಭಿಕ ಆಟಗಾರನಾಗಿ ಸಂಜು ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಬೇಕೆಂದು ಹೇಳಿದ್ದಾರೆ. 'ಕೆಲವು ತಿಂಗಳ ಹಿಂದಷ್ಟೇ 200 ಪ್ಲಸ್ ಸ್ಟ್ರೈಕ್ ರೇಟ್‌ನಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿ, ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್ ಅದ್ಭುತ ಆಟಗಾರ. ಹಾಗಾಗಿ ಮೊದಲ ಪಂದ್ಯದಲ್ಲಿ ಅವರಿಗೆ ಆರಂಭಿಕನಾಗಿ ಅವಕಾಶ ನೀಡಬೇಕು,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಎಡ-ಬಲ ಸಂಯೋಜನೆಗಿಂತ ಪ್ರದರ್ಶನವೇ ಮುಖ್ಯ'

ಭಾರತದ ಆರಂಭಿಕ ಸ್ಥಾನಕ್ಕೆ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ ಅವರ ಹೆಸರುಗಳೂ ಮುಂಚೂಣಿಯಲ್ಲಿವೆ. ಆದರೆ ಈ ಮೂವರೂ ಎಡಗೈ ಬ್ಯಾಟರ್‌ಗಳಾಗಿದ್ದಾರೆ. ಎಡ ಮತ್ತು ಬಲಗೈ ಬ್ಯಾಟಿಂಗ್ ಸಂಯೋಜನೆಯನ್ನು ಕಾಯ್ದುಕೊಳ್ಳಲು ಕೇವಲ ಬಲಗೈ ಬ್ಯಾಟರ್ ಎಂಬ ಒಂದೇ ಕಾರಣಕ್ಕೆ ಯಾವುದೇ ಆಟಗಾರನನ್ನು ಆಯ್ಕೆ ಮಾಡುವುದನ್ನು ರಾಜ್ದನ್ ವಿರೋಧಿಸಿದ್ದಾರೆ.

'ಬ್ಯಾಟಿಂಗ್ ಸಂಯೋಜನೆಗಿಂತ ಆಟಗಾರನ ಸದ್ಯದ ಫಾರ್ಮ್ ಮತ್ತು ಪ್ರದರ್ಶನ ಅತ್ಯಂತ ಮುಖ್ಯ. ತಂಡದಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿರುವ ಎಡಗೈ ಆಟಗಾರರಿದ್ದರೆ, ಏಳು ಎಡಗೈ ಬ್ಯಾಟರ್‌ಗಳನ್ನು ಆಡಿಸುವುದರಲ್ಲೂ ತಪ್ಪಿಲ್ಲ. ಮೈದಾನದಲ್ಲಿ ಆಟಗಾರ ನೀಡುವ ಕೊಡುಗೆಯೇ ಅಂತಿಮ,' ಎಂದು ಅವರು ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಕ್ರಮಾಂಕ

ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಶ್ರೇಯಸ್ ಅಯ್ಯರ್, ಟೀಮ್ ಇಂಡಿಯಾ ಪರ ನಾಯಕನಾಗಿ ತಮ್ಮ ಕ್ರಮಾಂಕವನ್ನು ಬದಲಾಯಿಸಬಾರದು ಎಂಬುದು ರಜ್ದಾನ್ ಸಲಹೆಯಾಗಿದೆ. 'ಮೇಲಿನ ಮೂರು ಕ್ರಮಾಂಕಗಳಿಗೆ ಈಗಾಗಲೇ ಹಲವು ಸ್ಪರ್ಧಿಗಳಿದ್ದಾರೆ. ಹೀಗಾಗಿ ನಾಯಕ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲೇ ಕ್ರೀಸ್‌ಗೆ ಇಳಿಯುವುದು ತಂಡದ ಸಮತೋಲನಕ್ಕೆ ಸೂಕ್ತ,' ಎಂದು ಹೇಳಿದ್ದಾರೆ. ಇದು ತಾಯ್ನಾಡಿನಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ನಾಯಕನಾಗಿ ಮೊದಲ ಸರಣಿಯಾಗಿದೆ.

ಭಾರತದ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿ ಅಪ್ಘಾನ್

ತಂಡದಲ್ಲಿ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಗಾಯದಿಂದ ಚೇತರಿಸಿಕೊಂಡಿರುವ ಜಸ್ಪ್ರೀತ್ ಬೂಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಮತ್ತೊಂದೆಡೆ ಇಬ್ರಾಹಿಂ ಜದ್ರಾನ್ ನಾಯಕತ್ವದ ಅಫ್ಘಾನಿಸ್ತಾನ್ ತಂಡವು ಭಾರತದ ವಿರುದ್ಧ ತನ್ನ ಚೊಚ್ಚಲ ಟಿ20 ಗೆಲುವಿನ ನಿರೀಕ್ಷೆಯಲ್ಲಿದೆ. ಇದುವರೆಗೆ ಉಭಯ ತಂಡಗಳು ಟಿ20 ಸ್ವರೂಪದಲ್ಲಿ 9 ಬಾರಿ ಮುಖಾಮುಖಿಯಾಗಿದ್ದು, ಭಾರತ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

ಒಟ್ಟಿನಲ್ಲಿ ಹೇಳುವುದಾದರೆ ವೈಭವ್ ಸೂರ್ಯವಂಶಿ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿದ್ದು, ಹೇಳಿಕೊಳ್ಳುವಷ್ಟು ಪ್ರದರ್ಶನ ಕಂಡುಬಂದಿರಲಿಲ್ಲ. ಆದರೂ ಹಿರಿಯ ಆಟಗಾರರ ಸ್ಪರ್ಧೆಯ ಕಾರಣದಿಂದಾಗಿ ಅವರು ಮೊದಲ ಪಂದ್ಯದಲ್ಲಿ ಹೊರಗುಳಿಯುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಭಾರತ ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+