India VS Pakistan: ಪಾಪಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು ಗ್ಯಾರಂಟಿ!
ಪಾಕಿಸ್ತಾನ ತಂಡದ ಹೆಡೆಮುರಿ ಕಟ್ಟಲು ಈಗ ಭಾರತ ತಂಡದ ಆಟಗಾರರು ಸಜ್ಜಾಗಿದ್ದಾರೆ. ಭಾರತದ ಅತಿದೊಡ್ಡ ಶತ್ರು ಪಾಕಿಸ್ತಾನ ವಿರುದ್ಧ ಭಾರತ ಗೆದ್ದೇ ಗೆಲ್ಲಬೇಕು ಎಂಬುದು ಇಡೀ ಇಂಡಿಯಾದ ಆಸೆ. ಹೀಗಿದ್ದಾಗ ಭಾರತ ಕ್ರಿಕೆಟ್ ತಂಡದ ಆಟಗಾರರು ಕೂಡ ಅದ್ಭುತವಾಗಿ ಆಟ ಶುರು ಮಾಡಿದ್ದು, ಪಾಕಿಸ್ತಾನ ವಿರುದ್ಧ ಇಂಡಿಯಾ ಸುಲಭವಾಗಿ ಗೆಲ್ಲಲಿದೆ ಅಂತಾ ಇದೀಗ ಅಭಿಮಾನಿಗಳು ಹೇಳುತ್ತಿದ್ದಾರೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟ್ ಮಾಡಿರುವ ಪಾಕಿಸ್ತಾನ ತಂಡ ಉತ್ತಮವಾಗಿ ರನ್ ಗಳಿಕೆ ಮಾಡಲು ಪರದಾಡಿತ್ತು. ಭಾರತದ ತೀಕ್ಷ್ಣವಾದ ಬೌಲಿಂಗ್ ದಾಳಿಗೆ ಹೆದರಿದ ಪಾಕ್ ಬ್ಯಾಟಿಂಗ್ ಲೇನ್, ಒಂದೊಂದು ರನ್ ಗಳಿಸುವುದಕ್ಕೂ ಒದ್ದಾಡಿತ್ತು. ಆದರೆ ಸೌದ್ ಶಕೀಲ್ 62 ರನ್ & ಮೊಹಮ್ಮದ್ ರಿಜ್ಞಾನ್ 46 ರನ್ ಗಳಿಸಿ ಪಾಕ್ ತಂಡಕ್ಕೆ ಒಂದಷ್ಟು ನೆರವಾಗಿದ್ದಾರೆ. ಹೀಗಿದ್ದಾಗ ಕೂಡ ಕೇವಲ 241 ರನ್‌ಗೆ ಪಾಕಿಸ್ತಾನ ಅಲೌಟ್ ಆಗಿದ್ದು, 49.4 ಓವರ್ ಆಟ ಆಡಿದೆ. ಈ ಗುರಿಯನ್ನು ಬೆನ್ನು ಹತ್ತಿರುವ ಭಾರತ ಭರ್ಜರಿಯಾಗಿ ಶುಭಾರಂಭ ಮಾಡಿದೆ.

ಭಾರತಕ್ಕೆ ಭರ್ಜರಿ ಗೆಲುವು ಗ್ಯಾರಂಟಿ!
ಪಾಕಿಸ್ತಾನ ನೀಡಿರುವ ಅಲ್ಪ ಮೊತ್ತ ಮುಟ್ಟುವುದು ಭಾರತದ ಬ್ಯಾಟಿಂಗ್ ಪಡೆಗೆ ಕಷ್ಟ ಆಗಲ್ಲ ಎನ್ನಬಹುದು. ಯಾಕಂದ್ರೆ ಭಾರತದ ಬಳಿ ಬಲಿಷ್ಠ ಬ್ಯಾಟಿಂಗ್ ಪಡೆ ಇದ್ದು, ಸುಲಭವಾಗಿ ಪಾಕಿಸ್ತಾನದ ಬೌಲಿಂಗ್ ಪಡೆಯ ಹೆಡೆಮುರಿ ಕಟ್ಟುವುದು ಗ್ಯಾರಂಟಿ ಆಗಿದೆ. ಈ ಗೆಲುವಿನ ಮೂಲಕ ಟೀಂ ಇಂಡಿಯಾ ಈಗ ಸುಮಾರು 8 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.
ಪಾಕಿಸ್ತಾನ ಮನೆಗೆ ಹೋಗೋದು ಪಕ್ಕಾ
ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ, ಮುಂದಿನ ಹಂತಕ್ಕೆ ಹೋಗಬೇಕು ಅಂದ್ರೆ ಇಂದಿನ ಪಂದ್ಯವನ್ನು ಗೆಲ್ಲಬೇಕಿತ್ತು. ಆದರೆ ಬಲಿಷ್ಠ ಭಾರತ ತಂಡದ ಎದುರು ಗೆಲ್ಲುವುದು ಸುಲಭದ ಮಾತಲ್ಲ. ಹೀಗಾಗಿ ಪಾಕಿಸ್ತಾನ ತಂಡ ಈ ಮ್ಯಾಚ್ ಸೋತು ಟೂರ್ನಿಯಿಂದಲೇ ಹೊರಗೆ ಹೋಗುವುದು ಬಹುತೇಕ ಗ್ಯಾರಂಟಿ ಅಗಿದೆ. ಪಾಕ್‌ನ ಹಣೆಬರಹ ಹೇಗಿದೆ ಅಂದ್ರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಆಥಿತ್ಯ ವಹಿಸಿದ್ದರು ಕೂಡ ಇಂತಹ ಸ್ಥಿತಿಗೆ ತಲುಪಿದೆ.
111 ಬಾಲ್ + 7 ಬೌಂಡರಿ = 100 ರನ್
ಪಾಕಿಸ್ತಾನ ಬೌಲರ್‌ಗಳ ಡ್ರಾಮಾ ಹೆಚ್ಚಾದರೂ ಅದನ್ನು ಲೆಕ್ಕಿಸದೆ ದಿಟ್ಟ ಹೋರಾಟ ತೋರಿದ ವಿರಾಟ್ ಕೊಹ್ಲಿ, 111 ಬಾಲ್ ಆಡಿ 7 ಬೌಂಡರಿಯನ್ನು ಬಾರಿಸಿ ಭರ್ಜರಿಯಾಗಿ 100 ರನ್ ಗಳಿಸಿ ಮಿಂಚಿದರು. ವಿರಾಟ್ ಕೊಹ್ಲಿ ಪ್ರತಿಯೊಬ್ಬ ಪಾಕ್ ಬೌಲರ್‌ನ ಕಾಡಿದರು. ಒಂದು ಕಡೆ ಪಾಕ್ ತಂಡ ವಿಕೆಟ್ ಉರುಳಿಸಲು ಪ್ರಯತ್ನ ಮಾಡುವಾಗಲೇ, ವಿರಾಟ್ ಕೊಹ್ಲಿ & ಶ್ರೇಯಸ್ ಐಯ್ಯರ್ ನಿಧಾನವಾಗಿ ರನ್ ಕದಿಯಲು ಶುರು ಮಾಡಿದರು.
ಹೀಗೆ ನೋಡ ನೋಡುತ್ತಲೇ ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸಿ ಶತಕದ ಕಡೆ ಮುನ್ನುಗ್ಗಿದ್ದರು ಆಗಲೂ ಪಾಕ್ ಟೀಂ ಎಲ್ಲಾ ರೀತಿ ಪ್ರಯತ್ನ ಮಾಡಿದರೂ ವರ್ಕೌಟ್ ಆಗಲೇ ಇಲ್ಲ. ಕೊನೆಗೂ ಕೊಹ್ಲಿ ಶತಕ ಸಿಡಿಸಿ ಮಿಂಚಿದರು. ಭಾರತ ಗೆಲ್ಲಲು ಕೊನೆಯ 2 ರನ್ ಬಾಕಿ ಇದ್ದಾಗ ಕಿಂಗ್ ಕೊಹ್ಲಿ 96 ರನ್ ಗಳಿಸಿದ್ದರು. ಹೀಗಿದ್ದಾಗ ವಿರಾಟ್ ಕೊಹ್ಲಿ ಸೆಂಚ್ಯುರಿ ಅನುಮಾನ ಎಂಬ ಮಾತು ಕೇಳಿ ಬಂದಿತ್ತು. ಆದರೆ ಕೊನೆಗೆ ಬೌಂಡರಿ ಬಾರಿಸಿ 4 ರನ್ ಕದ್ದು ಸೆಂಚ್ಯುರಿ ಗುರಿ ಮುಟ್ಟಿದರು ವಿರಾಟ್ ಕೊಹ್ಲಿ.












Click it and Unblock the Notifications