• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

T20 World Cup 2022 : ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಅನ್ನೂ ತಲುಪುವುದಿಲ್ಲವೇ ಟೀಮ್ ಇಂಡಿಯಾ?

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ 2022ರಲ್ಲಿ ಭಾರತವು ಸೆಮಿಫೈನಲ್ ತಲುಪುವ ಸಾಧ್ಯತೆಯು ತೀರಾ ವಿರಳ ಎಂದು ಕ್ರಿಕೆಟಿಗ ಕಪಿಲ್ ದೇವ್ ಭವಿಷ್ಯ ನುಡಿದಿದ್ದಾರೆ. ಟೀಮ್ ಇಂಡಿಯಾದ ಕುರಿತು ಮಾತನಾಡಿದ ಅವರು, ಆಘಾತಕಾರಿ ಅಂಶಗಳನ್ನು ಉಲ್ಲೇಖಿಸಿದ್ದಾರೆ.

ವಿಶ್ವಕಪ್ ಟಿ-20 ಟೂರ್ನಿಯಲ್ಲಿ ಭಾರತವು ನಾಲ್ಕು ಅಗ್ರರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಅವಕಾಶವು ಶೇ.30ರಷ್ಟು ಮಾತ್ರ ಇದೆ ಎಂದು ಕಪಿಲ್ ದೇವ್ ಹೇಳಿದ್ದಾರೆ. ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನೂ ನೀಡಿದ್ದು, ಏಕೆ ಎಂಬುದನ್ನು ವಿವರಿಸಿದ್ದಾರೆ.

ಭಾರತ ತಂಡ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲ್ಲ: ಖಚಿತಪಡಿಸಿದ ಜಯ್ ಶಾಭಾರತ ತಂಡ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲ್ಲ: ಖಚಿತಪಡಿಸಿದ ಜಯ್ ಶಾ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಅಕ್ಟೋಬರ್ 23ರಂದು ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಆಡಲಿದೆ. ಅಂದಿನಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ. ಇತ್ತೀಚಿಗೆ ನಡೆದ ಏಷ್ಯಾಕಪ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಭಾರತ ಗೆದ್ದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು.

ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಗೆಲುವಿನ ಸಾಧ್ಯತೆ

ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಗೆಲುವಿನ ಸಾಧ್ಯತೆ

"ವಿಶ್ವಕಪ್ ಟಿ-20 ಕ್ರಿಕೆಟ್‌ನಲ್ಲಿ ಭಾರತವು ಒಂದು ಪಂದ್ಯವನ್ನು ಗೆದ್ದರೆ, ಇನ್ನೊಂದು ಪಂದ್ಯವನ್ನು ಸೋಲುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತವು ವಿಶ್ವಕಪ್ ಗೆಲ್ಲುವ ಸಾಧ್ಯತೆಗಳ ಬಗ್ಗೆ ಮಾತನಾಡುವುದು ತುಂಬಾ ಕಷ್ಟ. ಮುಖ್ಯ ಸಮಸ್ಯೆಯೆಂದರೆ ಅವರು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬಹುದೇ? ಎಂಬುದರ ಬಗ್ಗೆ ನನಗೆ ಕಾಳಜಿಯಿದೆ. ಆ ಮೊದಲ ನಾಲ್ಕು ಸ್ಥಾನಗಳಿಗೆ ತಲುಪುವ ಬಗ್ಗೆ ಹೇಳಲಾಗದು. ಭಾರತವು ಟಾಪ್-4 ತಂಡಗಳ ಪಟ್ಟಿಗೆ ಸೇರುವ ಸಾಧ್ಯತೆಯು ಶೇ.30ರಷ್ಟಿದೆ ಎಂದು ನನಗೆ ಅನ್ನಿಸುತ್ತದೆ," ಎಂದು ಕಪಿಲ್ ದೇವ್ ಹೇಳಿದ್ದಾರೆ.

ಆಲ್ ರೌಂಡರ್‌ಗಳ ಪ್ರಾಮುಖ್ಯತೆ ಕುರಿತು ಕಪಿಲ್ ದೇವ್ ಮಾತು

ಆಲ್ ರೌಂಡರ್‌ಗಳ ಪ್ರಾಮುಖ್ಯತೆ ಕುರಿತು ಕಪಿಲ್ ದೇವ್ ಮಾತು

ಭಾರತದ ತಂಡದಲ್ಲಿ ಆಲ್ ರೌಂಡರ್‌ಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಕ್ರಿಕೆಟಿಗ ಕಪಿಲ್ ದೇವ್, ಹಾರ್ದಿಕ್ ಪಾಂಡ್ಯರನ್ನು ಶ್ಲಾಘಿಸಿದರು. ಅದೇ ರೀತಿ ಆಲ್ ರೌಂಡರ್‌ಗಳು ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡಕ್ಕೆ 'ಉಪಯುಕ್ತ' ಎಂದರು. ವಿಶ್ವಕಪ್‌ನಲ್ಲಿ ಮಾತ್ರವಲ್ಲದೆ ಇತರ ಎಲ್ಲಾ ಪಂದ್ಯಗಳು ಅಥವಾ ಈವೆಂಟ್‌ಗಳಲ್ಲಿ ಒಂದು ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲುವ ಆಲ್‌ರೌಂಡರ್‌ಗಳನ್ನು ಹೊಂದಿರುವುದಕ್ಕಿಂತ ಬೇರೆ ಏನು ಬೇಕು?, ಹಾರ್ದಿಕ್ ಪಾಂಡ್ಯ ಅವರಂತಹ ಕ್ರಿಕೆಟಿಗ ಭಾರತಕ್ಕೆ ಸಾಕಷ್ಟು ಉಪಯುಕ್ತ ಎಂದರು.

ಟೀಮ್ ಇಂಡಿಯಾಗೆ ಆಲ್‌ರೌಂಡರ್‌ಗಳೇ ಶಕ್ತಿ

ಟೀಮ್ ಇಂಡಿಯಾಗೆ ಆಲ್‌ರೌಂಡರ್‌ಗಳೇ ಶಕ್ತಿ

"ಟೀಮ್ ಇಂಡಿಯಾ ಸೇರಿದಂತೆ ಎಲ್ಲ ತಂಡಗಳಿಗೆ ಆಲ್‌ರೌಂಡರ್‌ಗಳು ಮತ್ತು ಪ್ರಮುಖ ಆಟಗಾರರೇ ಶಕ್ತಿ ಆಗಿರುತ್ತಾರೆ. ಹಾರ್ದಿಕ್‌ನಂತಹ ಆಲ್‌ರೌಂಡರ್ ರೋಹಿತ್ ಶರ್ಮಾಗೆ ಪಂದ್ಯದಲ್ಲಿ ಆರನೇ ಬೌಲರ್ ಅನ್ನು ಬಳಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತಾರೆ. ಅವರು ಉತ್ತಮ ಬ್ಯಾಟ್ಸ್ ಮನ್ ಮತ್ತು ಬೌಲರ್ ಮತ್ತು ಫೀಲ್ಡರ್ ಕೂಡ ಆಗಿದ್ದಾರೆ. ರವೀಂದ್ರ ಜಡೇಜಾ ಕೂಡ ಭಾರತಕ್ಕೆ ಪರಿಪೂರ್ಣ ಆಲ್ ರೌಂಡರ್ ಎಂದು ಕಪಿಲ್ ದೇವ್ ಶ್ಲಾಘಿಸಿದ್ದಾರೆ. ನಮ್ಮ ಕಾಲದಲ್ಲಿಯೂ ಭಾರತ ತಂಡದಲ್ಲಿ ಸಾಕಷ್ಟು ಆಲ್‌ರೌಂಡರ್‌ಗಳಿದ್ದರು ಎಂದು ಸ್ಮರಿಸಿಕೊಂಡರು.

ಟೀಮ್ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಶ್ಲಾಘನೆ

ಟೀಮ್ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಶ್ಲಾಘನೆ

ಟಿ-20 ವಿಶ್ವಕಪ್‌ನಲ್ಲಿ ಭಾರತವು ಸೆಮಿಫೈನಲ್ ತಲುಪುವುದರ ಬಗ್ಗೆ ವಿಶ್ವಾಸ ತೋರಿಸದಿದ್ದರೂ, ಭಾರತೀಯ ಬ್ಯಾಟಿಂಗ್ ಕ್ರಮಾಂಕವನ್ನು ಕಪಿಲ್ ದೇವ್ ಶ್ಲಾಘಿಸಿದ್ದಾರೆ. ವಾಸ್ತವದಲ್ಲಿ ಅಥವಾ ಭವಿಷ್ಯದಲ್ಲಿ ಪ್ರಭಾವಿ ಆಟಗಾರನಾಗುವ ಬಗ್ಗೆ ಯಾರೂ ಯೋಚಿಸಿರಲಿಲ್ಲ, ಆದರೆ ಸೂರ್ಯಕುಮಾರ್ ಯಾದವ್ ತಮ್ಮ ಬ್ಯಾಟಿಂಗ್‌ನಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಅವರ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ. ಈಗ, ಅವರಿಲ್ಲದೆ ನಾವು ಭಾರತದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಅಂತಹ ಬ್ಯಾಟರ್ ಹೊಂದಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ತಂಡದಲ್ಲಿ ಸೂರ್ಯಕುಮಾರ್ ಕೂಡ ಪ್ರಭಾವಿ ಆಟಗಾರರಾಗಿ ಹೊರ ಹೊಮ್ಮಿದ್ದಾರೆ ಎಂದರು.

English summary
India have just 30 percent chance to reach semi-finals in T20 World Cup 2022, says Cricketer Kapil Dev.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X