Virat Kohli: ಸೈಡಿಗ್ ಹೋಗು.. ಸೈಡಿಗ್ ಹೋಗು.. ವಿರಾಟ್ ಕೊಹ್ಲಿ ಬರ್ತಾವ್ನೆ!
ವಿರಾಟ್ ಕೊಹ್ಲಿ.. ಈ ಹೆಸರು ಕೇಳಿದರೆ ಸಾಕು ಒಂದು ಕ್ಷಣ ಕ್ರಿಕೆಟ್ ಮೈದಾನ ಹುಚ್ಚೆದ್ದು ಕುಣಿದುಬಿಡುತ್ತೆ. ಯಾಕಂದ್ರೆ ವಿರಾಟ್ ಕೊಹ್ಲಿ ಅನ್ನೋ ಹೆಸರಿಗೆ ಇರುವ ಕೆಪಾಸಿಟಿ & ತಾಕತ್ ಅಂತಹದ್ದು. ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನ, ಯಾಕಂದ್ರೆ ಕೊಹ್ಲಿ ಆಟವೇ ಚೆನ್ನ. ಹೀಗಿದ್ದರೂ ಕಳೆದ ಕೆಲವು ಪಂದ್ಯಗಳಿಂದ ವಿರಾಟ್ ಕೊಹ್ಲಿ ಸಾಲು ಸಾಲು ವೈಫಲ್ಯ ಎದುರಿಸಿ ಸುಸ್ತಾಗಿಬಿಟ್ಟರು. ಆದರೆ ಇದೀಗ ಬ್ರೇಕಿಂಗ್ ನ್ಯೂಸ್ ಮೂಲಕ ಭರ್ಜರಿಯಾಗಿ ವಿರಾಟ್ ಕೊಹ್ಲಿ ಕಂಬ್ಯಾಕ್ ಮಾಡಿದ್ದು, ಕೊಹ್ಲಿ ಅಬ್ಬರಕ್ಕೆ ಶತ್ರುಗಳು ಬಾಯಿ ಮೇಲೆ ಬ್ಯಾಟ್ ಇಟ್ಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಹಲವು ದಿನಗಳಿಂದ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದು, ಸರಿಯಾಗಿ ಆಟ ಆಡದೆ ಒದ್ದಾಡುತ್ತಿದ್ದರು. ಅದರಲ್ಲೂ ಬಾಂಗ್ಲಾದೇಶ ಎದುರು ಸತತವಾಗಿ ವಿರಾಟ್ ಕೊಹ್ಲಿ ಒಂದಕ್ಕಿ, ಎರಡಂಕಿ ಸುತ್ತುತ್ತಾ ಔಟಾಗಿ ಪೆವಿಲಿಯನ್ ಸೇರುತ್ತಿದ್ದರು. ಹೀಗಿದ್ದಾಗ ಇಂದು, ಬಾಂಗ್ಲಾ ಹುಲಿಗಳ ವಿರುದ್ಧ ನಿಜವಾದ ಹುಲಿ ರೀತಿ ಘರ್ಜಿಸಿದ ವಿರಾಟ್ ಕೊಹ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ತಮ್ಮ ಬಗ್ಗೆ ಮಾತನಾಡುತ್ತಾ, ಆ ರೀತಿ & ಈ ರೀತಿ ಅಂತಾ ಗೊಣಗುತ್ತಿದ್ದ ಶತ್ರುಗಳಿಗೆ ತಕ್ಕ ಉತ್ತರ ನೀಡಿದ್ದಾರೆ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಆಟವೇ ಮುಗಿದು ಹೋಯಿತು ಅಂತಿದ್ದವರು ಈಗ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ.

ವಿರಾಟ್ ಕೊಹ್ಲಿ ವೀರಾವೇಶ ಜೋರು!
ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 35 ಬಾಲ್ ಆಡಿದ್ದರು ವಿರಾಟ್ ಕೊಹ್ಲಿ. ಹೀಗೆ ವಿರಾಟ್ ಕೊಹ್ಲಿ ಕೇವಲ 35 ಬಾಲ್ ಆಡಿ ಭರ್ಜರಿಯಾಗಿ ಒಂದು ಸಿಕ್ಸರ್ & 4 ಬೌಂಡರಿ ಬಾರಿಸಿ ತಮ್ಮ ಬಲ ಪ್ರದರ್ಶನ ಮಾಡಿದರು. ಹಾಗೇ ಇದರ ಜೊತೆ, 2ನೇ ಇನ್ನಿಂಗ್ಸ್‌ನಲ್ಲಿ 37 ಬಾಲ್ ಆಡಿ 29 ರನ್ ಚಚ್ಚಿದ್ದಾರೆ. 4 ಬೌಂಡರಿ ಬಾರಿಸುವ ಮೂಲಕ 2ನೇ ಇನ್ನಿಂಗ್ಸ್‌ನಲ್ಲಿ ಕೂಡ ವಿರಾಟ್ ಕೊಹ್ಲಿ ತಮ್ಮ ಆಟದ ತಾಕತ್ ತೋರಿಸಿದ್ದಾರೆ. ಹೀಗಾಗಿ ಇದೀಗ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
146 ರನ್‌ಗಳಿಗೆ ಬಾಂಗ್ಲಾ ಆಲೌಟ್!
2ನೇ ಟೆಸ್ಟ್ ಪಂದ್ಯದ 4ನೇ ದಿನದ ಮೊದಲನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ 233 ರನ್‌ಗೆ ಆಲೌಟ್ ಮಾಡಿತ್ತು. ಯಾಕಂದ್ರೆ ಈ ಮ್ಯಾಚ್ ಆರಂಭವಾದ ಮೊದಲ ದಿನದಿಂದ ಕೂಡ ಮಳೆರಾಯ ಕಿರಿಕ್ ಮಾಡುತ್ತಲೇ ಇದ್ದ. ಹೀಗಿದ್ದಾಗ ನಿನ್ನೆ ಅಂದ್ರೆ 2ನೇ ಟೆಸ್ಟ್ ಪಂದ್ಯದ 4ನೇ ದಿನ ದಿಢೀರ್ ಮಳೆ ನಿಂತು ಹೋಗಿತ್ತು. ತಕ್ಷಣ ಅಲರ್ಟ್ ಆದ ಭಾರತ ಬಾಂಗ್ಲಾದೇಶ ತಂಡವನ್ನು 233 ರನ್‌ಗೆ ಆಲೌಟ್ ಮಾಡಿತ್ತು. ಆ ನಂತರ ಮತ್ತೊಂದು ಭರ್ಜರಿ ಪ್ಲಾನ್ ಮಾಡಿ ಕೇವಲ 34.4 ಓವರ್‌ಗಳಿಗೆ ಬರೋಬ್ಬರಿ 285 ರನ್ ಗಳಿಸಿತ್ತು ಭಾರತ. ಆ ಬಳಿಕ ಡಿಕ್ಲೇರ್ ಮಾಡಿ ಬಾಂಗ್ಲಾದೇಶ ತಂಡವನ್ನು ಕೇವಲ 146 ರನ್‌ಗಳಿಗೆ ಆಲೌಟ್ ಮಾಡಿತ್ತು ಟೀಂ ಇಂಡಿಯಾ.
ಭಾರತ ತಂಡಕ್ಕೆ ಬಾಂಗ್ಲಾದೇಶ ಕೇವಲ 95 ರನ್‌ಗಳ ಗುರಿ ನೀಡಿತ್ತು. ಹೀಗೆ ಬಾಂಗ್ಲಾದೇಶವು ನೀಡಿದ್ದ ಕೇವಲ 95 ರನ್‌ಗಳ ಗುರಿಯನ್ನ ಭಾರತ ತಂಡ 17.2 ಓವರ್‌ಗೆ ಚಚ್ಚಿ ಬಿಸಾಡಿದೆ. ಭಾರತದ ಪರ 2ನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 45 ಬಾಲ್ ಆಡಿ 51 ರನ್ ಗಳಿಸಿದರೆ ಮತ್ತೊಂದು ಕಡೆ 37 ಬಾಲ್ ಆಡಿದ ಕನ್ನಡಿಗರ ನೆಚ್ಚಿನ ವಿರಾಟ್ ಕೊಹ್ಲಿ 29 ರನ್‌ಗಳನ್ನು ಚಚ್ಚಿ ಬಿಸಾಡಿದರು. ಇದು ವಿರಾಟ್ ಕೊಹ್ಲಿ ಅವರ ಕಂಬ್ಯಾಕ್ ಅಂತಿದ್ದಾರೆ ಫ್ಯಾನ್ಸ್!












Click it and Unblock the Notifications