India vs Bangladesh: ಬಾಂಗ್ಲಾ ಹುಲಿಗಳಿಗೆ ಭಾರತ ತಂಡದಿಂದ ಒಂದೇ ಪಂಚ್, ಓಟ ಕಿತ್ತ ಇಲಿಗಳು!

ಭಾರತ ತಂಡ ಮತ್ತೊಮ್ಮೆ ಕ್ರಿಕೆಟ್ ಪ್ರಪಂಚದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ, ಈ ಮೂಲಕ ಭಾರತದ ಎದುರು ಜಾಸ್ತಿ ಕೆಮ್ಮುತ್ತಿದ್ದ ಬಾಂಗ್ಲಾದೇಶ ಹುಲಿಗಳಿಗೆ ಸರಿಯಾದ ಪಾಠವನ್ನ ಕೂಡ ಕಲಿಸಿದೆ. ಮಳೆಯ ಕಾರಣ ಭಾರತ & ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಇನ್ನೇನು ಡ್ರಾ ಆಗಿ ಹೋಗಲಿದೆ ಅಂತಾ ಅಂದುಕೊಳ್ಳುವ ಸಮಯದಲ್ಲೇ, ಭಾರತ ತಂಡ ಅದ್ಭುತವಾದ ಗೆಲುವು ದಾಖಲಿಸಿದೆ. ಹಾಗಿದ್ರೆ, ಬಾಂಗ್ಲಾದೇಶ ಹುಲಿಗಳಿಗೆ ಬಗಣಿ ಗೂಟ, ಭಾರತಕ್ಕೆ ಭರ್ಜರಿ..

ಬಾಂಗ್ಲಾದೇಶ ಕ್ರಿಕೆಟ್ ತಂಡ ಇಲಿಗಳಂತೆ ಆಡುತ್ತಿದ್ದರೂ ಹೆಸರಿಗೆ ಮಾತ್ರ ಹುಲಿಗಳು ಎಂಬ ಬಿಲ್ಡಪ್ ಕೊಡುತ್ತದೆ. ಭಾರತ ಒಂದು ಬಾರಿ ಸರಿಯಾಗಿ ಬಾಂಗ್ಲಾಗೆ ಪಾಠ ಕಲಿಸುತ್ತೆ ಅಂತಾ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದರು. ಅದರಲ್ಲೂ ಟಿ20 ವಿಶ್ವಕಪ್ ಸಮಯದಲ್ಲಿ ಭಾರತ ತಂಡದ ಬಗ್ಗೆ ಬಾಂಗ್ಲಾದೇಶ ಅಭಿಮಾನಿಗಳು ದ್ವೇಷ ಕಾರಿದ ನಂತರ ಈ ಕೋಪ ಹೆಚ್ಚಾಗಿತ್ತು. ಭಾರತ ಕ್ರಿಕೆಟ್ ತಂಡ ಜಗತ್ತಿನ ಅತ್ಯುತ್ತಮ ಸಾಧನೆಗಳನ್ನ ತನ್ನ ಹೆಸರಿನಲ್ಲೇ ಬರೆದುಕೊಂಡು ಮಿರಿಮಿರ ಮಿಂಚಿದೆ. ಅದರಲ್ಲೂ ಭಾರತದ ಸಾಧನೆಯ ಪಟ್ಟಿಗೆ ನೂರಾರು ದಾಖಲೆಗಳು & ಹೆಸರುಗಳು ಸೇರಿಕೊಂಡಿವೆ. ಹೀಗಿದ್ದಾಗ ಇಂದು ಬಾಂಗ್ಲಾ ಇಲಿಗಳಿಗೆ ಥೋ ಅಲ್ಲಲ್ಲ ಬಾಂಗ್ಲಾದ ಹುಲಿಗಳಿಗೆ ಭಾರತದ ರಿಯಲ್ ಟೈಗರ್ಸ್ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟಿದ್ದಾರೆ!

India And Bangladesh 2nd Test Cricket Match Become History And Indian Team Records A Victory

121 ಓವರ್ ಆಡಲು ಆಗದ ಹುಲಿಗಳು!

ಭಾರತ ತಂಡ ಇಂದು ಬಾಂಗ್ಲಾದೇಶ ತಂಡದ ವಿರುದ್ಧ ಭರ್ಜರಿಯಾಗಿ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದೆ. ಆದರೆ ಮ್ಯಾಟರ್ ಇದಲ್ಲ, ಯಾಕಂದ್ರೆ ಭಾರತ ತಂಡ ಈವರೆಗೆ ನೂರಾರು ಟೆಸ್ಟ್ ಮ್ಯಾಚ್ ಗೆದ್ದು ಬೀಗಿದೆ. ಆದರೆ ಇಂದು ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಗೆದ್ದ ಮ್ಯಾಚ್ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯಲಿದೆ. ಯಾಕೆ ಈ ಮಾತು ಅಂದ್ರೆ ಕೇವಲ 2 ದಿನ ಆಟವಾಡಿ, 121 ಓವರ್ ಬೌಲಿಂಗ್ ಮಾಡಿದ್ದ ಭಾರತ ತಂಡ ಇಂದು ಭರ್ಜರಿಯಾಗಿ ಬಾಂಗ್ಲಾದೇಶದ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಈಗ ಭಾರತ ತಂಡ ಭರ್ಜರಿ 7 ವಿಕೆಟ್ ಗೆಲುವು ಕಂಡಿದೆ!

146 ರನ್‌ಗಳಿಗೆ ಬಾಂಗ್ಲಾ ಆಲೌಟ್!

2ನೇ ಟೆಸ್ಟ್ ಪಂದ್ಯದ 4ನೇ ದಿನದ ಮೊದಲನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ 233 ರನ್‌ಗೆ ಆಲೌಟ್ ಮಾಡಿತ್ತು. ಯಾಕಂದ್ರೆ ಈ ಮ್ಯಾಚ್ ಆರಂಭವಾದ ಮೊದಲ ದಿನದಿಂದ ಕೂಡ ಮಳೆರಾಯ ಕಿರಿಕ್ ಮಾಡುತ್ತಲೇ ಇದ್ದ. ಹೀಗಿದ್ದಾಗ ನಿನ್ನೆ ಅಂದ್ರೆ 2ನೇ ಟೆಸ್ಟ್ ಪಂದ್ಯದ 4ನೇ ದಿನ ದಿಢೀರ್ ಮಳೆ ನಿಂತು ಹೋಗಿತ್ತು. ತಕ್ಷಣ ಅಲರ್ಟ್ ಆದ ಭಾರತ ಬಾಂಗ್ಲಾದೇಶ ತಂಡವನ್ನು 233 ರನ್‌ಗೆ ಆಲೌಟ್ ಮಾಡಿತ್ತು. ಆ ನಂತರ ಮತ್ತೊಂದು ಭರ್ಜರಿ ಪ್ಲಾನ್ ಮಾಡಿ ಕೇವಲ 34.4 ರನ್‌ಗಳಿಗೆ ಬರೋಬ್ಬರಿ 285 ರನ್ ಗಳಿಸಿತ್ತು ಭಾರತ. ಆ ನಂತರ ಡಿಕ್ಲೇರ್ ಮಾಡಿ, ಬಾಂಗ್ಲಾದೇಶ ತಂಡವನ್ನು ಕೇವಲ 146 ರನ್‌ಗಳಿಗೆ ಆಲೌಟ್ ಮಾಡಿತ್ತು ಭಾರತ.

ಭಾರತ ತಂಡಕ್ಕೆ ಬಾಂಗ್ಲಾದೇಶ ಕೇವಲ 95 ರನ್‌ಗಳ ಗುರಿ ನೀಡಿತ್ತು. ಹೀಗೆ ಬಾಂಗ್ಲಾದೇಶವು ನೀಡಿದ್ದ ಕೇವಲ 95 ರನ್‌ಗಳ ಗುರಿಯನ್ನ ಭಾರತ ತಂಡ 17.2 ಓವರ್‌ಗೆ ಚಚ್ಚಿ ಬಿಸಾಡಿದೆ. ಭಾರತದ ಪರ 2ನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 45 ಬಾಲ್ ಆಡಿ 51 ರನ್ ಗಳಿಸಿದರೆ ಮತ್ತೊಂದು ಕಡೆ 37 ಬಾಲ್ ಆಡಿದ ಕನ್ನಡಿಗರ ನೆಚ್ಚಿನ ವಿರಾಟ್ ಕೊಹ್ಲಿ 29 ರನ್‌ಗಳನ್ನು ಚಚ್ಚಿ ಬಿಸಾಡಿದರು. ಈ ಮೂಲಕ ಭಾರತ ತಂಡವು 7 ವಿಕೆಟ್ ಅಂತರದ ಗೆಲುವು ಕಂಡು, ಬಾಂಗ್ಲಾ ಹುಲಿಗಳನ್ನ ಇಲಿಗಳ ರೀತಿ ಬಿಲಕ್ಕೆ ಕಳುಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+