ಸೋಲಿನ ಸುಳಿಯಲ್ಲಿ ಭಾರತ: ಆಸ್ಟ್ರೇಲಿಯಾ ಬ್ಯಾಟಿಂಗ್ ಲೈನ್ ಉಡಾಯಿಸುವುದು ಯಾರು? India vs Australia

ಭಾರತ & ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮಹತ್ವದ 5ನೇ ಟೆಸ್ಟ್ ಪಂದ್ಯ ಈಗ ಭಾರಿ ಕುತೂಹಲದ ಹಂತ ತಲುಪಿದೆ. ಬಾರ್ಡರ್ & ಗವಾಸ್ಕರ್ ಟ್ರೋಫಿ 5ನೇ ಟೆಸ್ಟ್ ಮ್ಯಾಚ್ ಈ ಮೂಲಕ ಕ್ಷಣಕ್ಷಣಕ್ಕೂ ಕುತೂಹಲ ಕೆರಳುವಂತೆ ಮಾಡುತ್ತಿದೆ. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 185 ರನ್ ಗಳಿಸಿದ್ದರೂ ಆಸ್ಟ್ರೇಲಿಯಾ ತಂಡವನ್ನು 1ನೇ ಇನ್ನಿಂಗ್ಸ್‌ನಲ್ಲಿ ಕೇವಲ 181 ರನ್‌ಗೆ ಆಲೌಟ್ ಮಾಡಿತ್ತು.

ಭಾರತ ತಂಡ ಇನ್ನೇನು ಕಂಬ್ಯಾಕ್ ಮಾಡಿದೆ ಅಂತಾ ಹೇಳುವಾಗಲೇ ಮತ್ತೆ ಹಾವು & ಏಣಿ ಆಟ ಶುರುವಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ಲೈನ್ ಕೈಕೊಟ್ಟ ಕಾರಣಕ್ಕೆ ಮತ್ತೆ ಕೇವಲ 157 ರನ್‌ಗೆ ಭಾರತ ತಂಡ ಆಲೌಟ್ ಆಗಿತ್ತು. ಈ ಮೂಲಕ ಆಸ್ಟ್ರೇಲಿಯಾಗೆ 162 ರನ್‌ಗಳ ಗುರಿಯನ್ನ ನೀಡಿದೆ. ಹೀಗೆ ಇಂದು ಬೆಳಗ್ಗೆಯೇ ಬ್ಯಾಟಿಂಗ್ ಶುರು ಮಾಡಿರುವ ಆಸ್ಟ್ರೇಲಿಯಾ ದಾಂಡಿಗರು ಆರಂಭದಲ್ಲಿ ಭಾರತದ ಬೌಲಿಂಗ್ ದಾಳಿಗೆ ಬೆಚ್ಚಿ ಬಿದ್ದಿದ್ದರು. ಈ ಸಮಯದಲ್ಲೇ...

India And Australia 5th Test Match Is Reached Final Stage On Day 3

ಆಸ್ಟ್ರೇಲಿಯಾ ಸೋಲುವ ಹಂತದಲ್ಲೇ ಗೆದ್ದಿತ್ತು!

ಅಂದಹಾಗೆ ಭಾರತದ ಮೊದಲ ಇನ್ನಿಂಗ್ಸ್ ಹೀನಾಯವಾಗಿ ಮುಗಿದ ನಂತರ ವಿರಾಟ್ ಕೊಹ್ಲಿ ಅವರು ಪಕ್ಕಾ ಪ್ಲಾನ್ ಮಾಡಿದ್ದರು. ಆಸ್ಟ್ರೇಲಿಯಾ ಆಟಗಾರರಿಗೆ ಖೆಡ್ಡಾ ತೋಡಿ ಮೊದಲ ಇನ್ನಿಂಗ್ಸ್‌ನಲ್ಲಿ ದಾಳ ಉರುಳಿಸಿದ್ದರು. 2ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡದ ದಾಂಡಿಗರು ತರಗೆಲೆ ರೀತಿ ಹಾರಿ ಹೋದ್ರು.

ಭಾರತ ಬೌಲಿಂಗ್ ದಾಳಿ ಎದುರಿಸಲು ನಲುಗಿ ಆಸಿಸ್ ದಾಂಡಿಗರು ಕಕ್ಕಾಬಿಕ್ಕಿ ಆಗಿದ್ದರು. ಇದೇ ಕಾರಣಕ್ಕೆ 181 ರನ್‌ಗೆ ಆಲೌಟ್ ಆಗಿತ್ತು ಆಸ್ಟ್ರೇಲಿಯಾ. ಇದೇ ರೀತಿ 2ನೇ ಇನ್ನಿಂಗ್ಸ್ ಆರಂಭದಲ್ಲಿ ಕೂಡ ಆಸ್ಟ್ರೇಲಿಯಾ ಪಡೆ ಸಾಲು ಸಾಲು ವಿಕೆಟ್ ಹೋದ ಕಾರಣ ಚಿಂತೆಯಲ್ಲಿ ಮುಳುಗಿತ್ತು. ಇಷ್ಟೆಲ್ಲದರ ನಡುವೆ ಕಾಂಗರೂ ಪಡೆಯಲ್ಲಿ ಮ್ಯಾಜಿಕ್ ಶುರುವಾಗಿತ್ತು.

162 ರನ್‌ ಚಚ್ಚಿ ಬಿಸಾಡಿದ ಆಸ್ಟ್ರೇಲಿಯಾ

ಹೌದು, ಆಸ್ಟ್ರೇಲಿಯಾ ತಂಡ ಇನ್ನೇನು ಸೋತು ಸುಣ್ಣವಾಗಲಿದೆ ಅನ್ನುವಾಗಲೇ ಟ್ರಾವಿಸ್ ಹೆಡ್ & ವೆಬ್‌ಸ್ಟೆರ್ ಭಾರತದ ಬೌಲಿಂಗ್ ಪಡೆಯನ್ನ ಮೀರಿ 39 ರನ್ & 34 ರನ್ ಚಚ್ಚಿದರು. ಈ ಮೂಲಕ ಆಸ್ಟ್ರೇಲಿಯಾ ತಂಡ 5ನೇ ಟೆಸ್ಟ್ ಮ್ಯಾಚ್ ಗೆದ್ದು ಬೀಗಿದೆ. ಬಾರ್ಡರ್ & ಗವಾಸ್ಕರ್ ಟ್ರೋಫಿಗೂ ಮುತ್ತಿಟ್ಟಿದೆ. ಭಾರತದ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮೂಲಕ ಆಕ್ರೋಶ ಹೊರ ಹಾಕ್ತಿದ್ದಾರೆ. 162 ರನ್‌ ಚಚ್ಚಿ ಬಿಸಾಡುವ ಮೂಲಕ ಆಸ್ಟ್ರೇಲಿಯಾ ಗೆದ್ದಿದೆ. ಆದರೆ ಭಾರತ ತಂಡದ ಆಟಗಾರರ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳು ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+