ಕೊಹ್ಲಿ ಹುಡುಗರು ಕೊಟ್ಟ ಕಾಟಕ್ಕೆ ಆಸ್ಟ್ರೇಲಿಯಾ ಹರೋಹರ! India VS Australia

ವಿರಾಟ್ ಕೊಹ್ಲಿ ವಿರುದ್ಧ ಕುತಂತ್ರ ಮಾಡುತ್ತಾ, ಭಾರತೀಯ ಆಟಗಾರರ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಾ, ಕ್ರಿಕೆಟ್ ಲೋಕದ ನಿಯಮಗಳನ್ನು ಮೀರುತ್ತಾ ಆಸ್ಟ್ರೇಲಿಯಾ ತಂಡ ಭಾರಿ ದೊಡ್ಡ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರ ಭಾರಿ ದೊಡ್ಡ ಚರ್ಚೆಗೆ ಕೂಡ ವೇದಿಕೆ ಒದಗಿಸಿತ್ತು. ಇಂತಹ ಸಮಯದಲ್ಲೇ, ಕೊಹ್ಲಿ ಹುಡುಗರು ಕೊಟ್ಟ ಕಾಟಕ್ಕೆ ಆಸ್ಟ್ರೇಲಿಯಾ ಹರೋಹರ ಎಂಬಂತಾಗಿದೆ!

ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಭೀಕರ ಆಘಾತ ಎದುರಾಗಿದೆ. ಬಾರ್ಡರ್ & ಗವಾಸ್ಕರ್ ಟ್ರೋಫಿಯ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ ಆಡುವಾಗ ಕೇವಲ 185 ರನ್ ಗಳಿಸಿತ್ತು. ಹೀಗೆ 185 ರನ್ ಸುಲಭದ ಗುರಿ ಬೆನ್ನುಹತ್ತಿ, ಭಾರತದ ವಿರುದ್ಧ ಲೀಡ್ ಸಂಪಾದಿಸಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರಿಗೆ ಆಘಾತ ನೀಡಿದ್ದಾರೆ ವಿರಾಟ್ ಕೊಹ್ಲಿ ಹುಡುಗರು. ಭಾರತದ ಭೀಕರ ಬೌಲಿಂಗ್ ದಾಳಿ ಎದುರು ಕಕ್ಕಾಬಿಕ್ಕಿ ಆಗೋದ ಆಸ್ಟ್ರೇಲಿಯಾ ತಂಡ ಕೊನೆಗೆ ಎಂತಹ ಪರಿಸ್ಥಿತಿಗೆ ಬಂದಿದೆ ಗೊತ್ತಾ?

India And Australia 5th Test Match Got Big Turning Point

181 ರನ್‌ಗೆ ದಬ್ಬಾಕ್ಕೊಂಡ ಆಸ್ಟ್ರೇಲಿಯಾ!

ಭಾರತ ಕ್ರಿಕೆಟ್ ತಂಡವನ್ನು ಎದುರು ಹಾಕಿಕೊಂಡು ಯಾವುದೇ ತಂಡ ಬದಕಲು ಆಗೋಲ್ಲ ಅನ್ನೋದು ಮತ್ತೆ, ಮತ್ತೆ ಪ್ರೂವ್ ಆಗುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾ ತಂಡ ಭಾರತ ಟೀಂನ ಸಾಕಷ್ಟು ಹೀಯಾಳಿಸಿದೆ, ಆಸ್ಟ್ರೇಲಿಯಾ ಆಟಗಾರರು ಇತ್ತೀಚೆಗೆ ಭಾರತ ತಂಡದ ಪ್ಲೇಯರ್ಸ್ ಜೊತೆಗೆ ಸುಮ್ ಸುಮ್ನೆ ಕಿರಿಕ್ ಕೂಡ ಮಾಡಿದ್ದಾರೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಈಗ ತಮ್ಮ ಹುಡುಗರ ಜೊತೆಗೆ ಸೇರಿಕೊಂಡು ಆಸಿಸ್ ಪಡೆಗೆ ಬುದ್ಧಿ ಕಲಿಸಿದ್ದಾರೆ.

ಬಾರ್ಡರ್ & ಗವಾಸ್ಕರ್ ಟ್ರೋಫಿಯ 5ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಸಖತ್ ಮಜವಾಗಿ ಇತ್ತು. ಭಾರತದ ಬೌಲಿಂಗ್ ದಾಳಿ ಎದುರಿಸಲು ನಲುಗಿ ಹೋದ ಆಸ್ಟ್ರೇಲಿಯಾ ಆಟಗಾರರು ಕಕ್ಕಾಬಿಕ್ಕಿ ಆಗಿದ್ದರು. ಅದರಲ್ಲೂ ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ ತಲಾ 3 ವಿಕೆಟ್ ಪಡೆದು ಮಿಂಚಿದರು. ಹಾಗೆಯೇ, ಜಸ್ಪ್ರಿತ್ ಬುಮ್ರಾ 2 ವಿಕೆಟ್ & ನಿತೀಶ್ ರೆಡ್ಡಿ 2 ವಿಕೆಟ್ ಉರುಳಿಸಿ ಭರ್ಜರಿಯಾಗಿ ಮಿಂಚಿದರು. ಈ ಮೂಲಕ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪಡೆಯನ್ನು ಉರುಳಿಸಿ 181 ರನ್‌ಗೆ ಆಲೌಟ್ ಮಾಡಿ ಬಿಸಾಡಿದೆ.

ಮ್ಯಾಚ್ ಅಲ್ಲ ಇದು ಮಹಾಯುದ್ಧ!

ಒಟ್ನಲ್ಲಿ, ಭಾರತ & ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್ & ಗವಾಸ್ಕರ್ ಟೋರ್ನಿಯ 5ನೇ ಟೆಸ್ಟ್ ಮ್ಯಾಚ್ ಇದೀಗ ಭರ್ಜರಿ ಹಂತಕ್ಕೆ ತಲುಪುತ್ತಿದೆ. ಭಾರತ & ಆಸ್ಟ್ರೇಲಿಯಾ ಟೀಂ ನಡುವೆ ಮಹಾಯುದ್ಧ ನಡೆಯುತ್ತಿರುವ ರೀತಿ ಕ್ರೀಡಾಂಗಣ ತುಂಬಿ ತುಳುಕುತ್ತಿದ್ದು, ಭಾರತ ಈ ಪಂದ್ಯದಲ್ಲಿ ಇದೀಗ ಮೇಲುಗೈ ಸಾಧಿಸಿದೆ. ಇದರ ಜೊತೆಗೆ ಮ್ಯಾಚ್ ಗೆಲ್ಲುವ ಮುನ್ಸೂಚನೆ ಕೂಡ ಇದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+