‘ದನ ಕಾಯೋಕೆ ಕಳುಹಿಸಿ, ಕ್ರಿಕೆಟ್ ಬೇಡ...’ ಅಂತಾ ರೊಚ್ಚಿಗೆದ್ದ ಅಭಿಮಾನಿಗಳು! India vs Australia

ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ. ಈ ಸೋಲು ಭಾರತ ಕ್ರಿಕೆಟ್ ತಂಡದ 100 ಕೋಟಿ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸುವ ಜೊತೆಗೆ, ಆಕ್ರೋಶ ಮೊಳಗುವಂತೆ ಕೂಡ ಮಾಡಿದೆ. ಹೀನಾಯ ಅತಿ ಹೀನಾಯವಾಗಿ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ, ಬೌಲಿಂಗ್ ವಿಭಾಗದಲ್ಲಿ ಕೂಡ ಸೋತು ಸುಣ್ಣವಾಗಿದೆ. ಹೀಗಾಗಿ, ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ & ಕೋಪ ಸ್ಫೋಟಗೊಂಡಿದೆ.

ಬಾರ್ಡರ್ & ಗವಾಸ್ಕರ್ ಟ್ರೋಫಿ 5ನೇ ಟೆಸ್ಟ್ ಮ್ಯಾಚ್ ಗೆದ್ದೇ ಗೆಲ್ಲಬೇಕು ಅನ್ನೋ ನಿರೀಕ್ಷೆ & ಕನಸು ಹೊತ್ತುಕೊಂಡು ಭಾರತ ತಂಡದ ದಾಂಡಿಗರು ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರು. ಆದ್ರೆ ಫೀಲ್ಡ್‌ಗೆ ಬಂದಿದ್ದೇ ತಡ ಒಂದೇ ಸಮನೆ ಜೋರು ಮಳೆ ಬಂದು ನಿಂತಂತೆ 185 ರನ್‌ಗಳಿಗೆಲ್ಲ ತಮ್ಮ 1ನೇ ಇನ್ನಿಂಗ್ಸ್ ಆಟವನ್ನು ಮುಗಿಸಿದರು ಭಾರತದ ಆಟಗಾರರು. ಆ ನಂತರ ಆಸಿಸ್ ಪಡೆಗೆ ಭಾರತದ ಬೌಲಿಂಗ್ ಪಡೆ 1ನೇ ಇನ್ನಿಂಗ್ಸ್ ಆಟದಲ್ಲಿ ಆಘಾತ ನೀಡಿ 181 ರನ್‌ಗೆ ಕಟ್ಟಿ ಹಾಕಿದ್ದರೂ ಟೀಂ ಇಂಡಿಯಾದ ದಾಂಡಿಗರು ಮಾತ್ರ ಮತ್ತೆ ಸೋತು ಶರಣಾಗಿಬಿಟ್ಟರು.

India And Australia 5th Test Match Completed With Creating History

ಆಸ್ಟ್ರೇಲಿಯಾ ಆಟಗಾರರಿಗೆ ಖೆಡ್ಡಾ ತೋಡಿದ್ದರು!

ಅಂದಹಾಗೆ ಭಾರತದ ಮೊದಲ ಇನ್ನಿಂಗ್ಸ್ ಹೀನಾಯವಾಗಿ ಮುಗಿದ ನಂತರ ವಿರಾಟ್ ಕೊಹ್ಲಿ ಅವರು ಪಕ್ಕಾ ಪ್ಲಾನ್ ಮಾಡಿದ್ದರು. ಆಸ್ಟ್ರೇಲಿಯಾ ಆಟಗಾರರಿಗೆ ಖೆಡ್ಡಾ ತೋಡಿ ಮೊದಲ ಇನ್ನಿಂಗ್ಸ್‌ನಲ್ಲಿ ದಾಳ ಉರುಳಿಸಿದ್ದರು. 2ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡದ ದಾಂಡಿಗರು ತರಗೆಲೆ ರೀತಿ ಹಾರಿ ಹೋದ್ರು. ಭಾರತ ಬೌಲಿಂಗ್ ದಾಳಿ ಎದುರಿಸಲು ನಲುಗಿ ಆಸಿಸ್ ದಾಂಡಿಗರ ಪಡೆ ಕಕ್ಕಾಬಿಕ್ಕಿ ಆಗೋಗಿತ್ತು.

ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ ತಲಾ 3 ವಿಕೆಟ್ ಪಡೆದು ಮಿಂಚಿದರು. ಜಸ್ಪ್ರಿತ್ ಬುಮ್ರಾ 2 ವಿಕೆಟ್, ನಿತೀಶ್ ರೆಡ್ಡಿ 2 ವಿಕೆಟ್ ಉರುಳಿಸಿ ಭರ್ಜರಿಯಾಗಿ ಮಿಂಚಿದರು ಈ ಮೂಲಕ ಭಾರತ ತಂಡ ಆಸ್ಟ್ರೇಲಿಯಾ ಪಡೆಯನ್ನು ಉರುಳಿಸಿ 181 ರನ್‌ಗೆಲ್ಲ ಆಲೌಟ್ ಮಾಡಿತ್ತು. ಆದರೆ ಹೀಗೆ ಕೈಗೆ ಬಂದಿದ್ದ ತುತ್ತನ್ನು ಮತ್ತೆ ಭಾರತ ತಂಡದ ಬ್ಯಾಟಿಂಗ್ ಪಡೆ ನೆಲಕ್ಕೆ ಚೆಲ್ಲಿತ್ತು. ಭಾರತ ತಂಡದ ಬ್ಯಾಟಿಂಗ್ ಲೈನ್ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 157 ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ ಆಸ್ಟ್ರೇಲಿಯಾಗೆ ಕೇವಲ 162 ರನ್‌ಗಳ ಗುರಿ ನೀಡಲಾಗಿತ್ತು.

ಆಸ್ಟ್ರೇಲಿಯಾ ಎದುರು ಸೋತಿದ್ದು ಹೇಗೆ?

ಭಾರತ ತಂಡ ಇನ್ನೇನು ಕಂಬ್ಯಾಕ್ ಮಾಡಿದೆ ಅಂತಾ ಹೇಳುವಾಗಲೇ ಮತ್ತೆ ಹಾವು & ಏಣಿ ಆಟ ಶುರುವಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ಲೈನ್ ಕೈಕೊಟ್ಟ ಕಾರಣಕ್ಕೆ ಮತ್ತೆ ಕೇವಲ 157 ರನ್‌ಗೆ ಭಾರತ ತಂಡ ಆಲೌಟ್ ಆಗಿತ್ತು. ಈ ಮೂಲಕ ಆಸ್ಟ್ರೇಲಿಯಾಗೆ 162 ರನ್‌ಗಳ ಗುರಿ ನೀಡಿದ್ದ ಹಿನ್ನೆಲೆ ಭಯ ಕೂಡ ಆವರಿಸಿತ್ತು.

ಹೀಗೆ ಇಂದು ಬೆಳಗ್ಗೆಯೇ ಬ್ಯಾಟಿಂಗ್ ಶುರು ಮಾಡಿದ್ದ ಆಸ್ಟ್ರೇಲಿಯಾ ದಾಂಡಿಗರು ಆರಂಭದಲ್ಲಿ ಭಾರತದ ಬೌಲಿಂಗ್ ದಾಳಿಗೆ ಬೆಚ್ಚಿ ಬಿದ್ದಿದ್ದರು. ಈ ಸಮಯದಲ್ಲೇ, ಮತ್ತೆ ಟ್ರಾವಿಸ್ ಹೆಡ್ & ವೆಬ್‌ಸ್ಟೆರ್ ಭಾರತದ ಬೌಲಿಂಗ್ ಪಡೆಯ ಮೀರಿ 39 ರನ್ & 34 ರನ್ ಚಚ್ಚಿದರು. ಈ ಮೂಲಕ ಆಸ್ಟ್ರೇಲಿಯಾ ತಂಡ 5ನೇ ಟೆಸ್ಟ್ ಮ್ಯಾಚ್ ಗೆದ್ದು ಬೀಗಿದೆ. ಅಲ್ಲದೇ, ಬಾರ್ಡರ್ & ಗವಾಸ್ಕರ್ ಟ್ರೋಫಿಗೂ ಮುತ್ತಿಟ್ಟಿದೆ. ಭಾರತದ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+