Ind vs Eng: ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವು; ಭಾರತ ಬರೆದ ದಾಖಲೆಗಳಿವು
ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ದಾಖಲೆಯ 434 ರನ್‌ಗಳ ಗೆಲುವು ಸಾಧಿಸಿದೆ. ರಾಜ್‌ಕೋಟ್ ಅಂಗಳದಲ್ಲಿ ಹಲವು ದಾಖಲೆ ಬರೆದಿರುವ ಭಾರತ ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದ ಅತಿ ದೊಡ್ಡ ಗೆಲುವು ದಾಖಲಿಸಿದೆ.
ಇಂಗ್ಲೆಂಡ್‌ಗೆ 557 ರನ್‌ಗಳ ಬೃಹತ್ ಗುರಿ ನೀಡಿದ್ದ ಭಾರತ, ಇಂಗ್ಲೆಂಡ್ ತಂಡವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 122 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಈ ಬೃಹತ್ ಗೆಲುವು ಸಾಧಿಸಿತು. ರವೀಂದ್ರ ಜಡೇಜಾ 5 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಸಹಕಾರಿಯಾದರು. 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಪಡೆದುಕೊಂಡಿದೆ.

ಭಾರತ ಟೆಸ್ಟ್‌ನಲ್ಲಿ 400ಕ್ಕೂ ಹೆಚ್ಚು ರನ್‌ಗಳ ಜಯ ಸಾಧಿಸಿದ್ದು ಇದೇ ಮೊದಲು. ಇದು ಅವರ 577 ಟೆಸ್ಟ್ ಇತಿಹಾಸದಲ್ಲಿ ರನ್‌ಗಳ ವಿಚಾರದಲ್ಲಿ ಭಾರತಕ್ಕೆ ಇದು ದೊಡ್ಡ ಗೆಲುವಾಗಿದೆ.
ಇದು 2021 ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಹಿಂದಿನ 372 ರನ್‌ಗಳ ಅಂತರದಲ್ಲಿ ಗೆದ್ದಿದ್ದು ದೊಡ್ಡ ಗೆಲುವಾಗಿತ್ತು. ಈಗ ಆ ದಾಖಲೆಯನ್ನು ಮತ್ತಷ್ಟು ಉತ್ತಮ ಗೊಳಿಸಿದೆ.
ಇಂಗ್ಲೆಂಡ್‌ಗೆ ಎರಡನೇ ಸೋಲು
1934 ರ ಬಳಿಕ ಇಂಗ್ಲೆಂಡ್ ತಂಡ ಎರಡನೇ ಅತಿ ದೊಡ್ಡ ಸೋಲಾಗಿದೆ. 1934ರಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ 562 ರನ್‌ಗಳ ಅಂತರದಲ್ಲಿ ಸೋತಿದ್ದು ದೊಡ್ಡ ಸೋಲಾಗಿದೆ. 1976ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ 425 ರನ್‌ಗಳಿಂದ ಸೋತಿದ್ದ ಇಂಗ್ಲೆಂಡ್, ಈಗ 434 ರನ್‌ಗಳಿಂದ ಸೋಲನುಭವಿಸಿದೆ. ಈ ಮೂಲಕ ಟೆಸ್ಟ್ ಇಂಗ್ಲೆಂಡ್ ಟೆಸ್ಟ್ ಇತಿಹಾಸದಲ್ಲಿ ಎರಡನೇ ದೊಡ್ಡ ಸೋಲು ಕಂಡಿದೆ. ಇಂಗ್ಲೆಂಡ್ ಬಾಜ್‌ಬಾಲ್ ಆಟವನ್ನು ಅಳವಡಿಸಿಕೊಂಡ ಬಳಿಕ ಬೆನ್ ಸ್ಟೋಕ್ಸ್ ಮೊದಲ ಬಾರಿಗೆ ಸತತ ಎರಡು ಟೆಸ್ಟ್ ಪಂದ್ಯಗಳನ್ನು ಸೋತಿದೆ.
ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಜೈಸ್ವಾಲ್
ರಾಜ್‌ಕೋಟ್‌ನಲ್ಲಿ ಅಜೇಯ 214 ರನ್ ಗಳಿಸಿದ ಜೈಸ್ವಾಲ್, 12 ಸಿಕ್ಸರ್ ಬಾರಿಸುವ ಮೂಲಕ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ವಾಸಿಂ ಅಕ್ರಂ ಅವರ ದಾಖಲೆಯನ್ನು ಸರಿಗಟ್ಟಿದರು.
ಜೈಸ್ವಾಲ್ ತನ್ನ ಮೊದಲ ಮೂರು ಟೆಸ್ಟ್ ಶತಕಗಳನ್ನು 150 ಕ್ಕೂ ಅಧಿಕ ಸ್ಕೋರ್‌ಗಳಾಗಿ ಪರಿವರ್ತಿಸಿದ (171, 209 ಮತ್ತು 214*) ಮೊದಲ ಭಾರತೀಯ ಬ್ಯಾಟರ್, ಮತ್ತು ಒಟ್ಟಾರೆ ಏಳನೇ ಬ್ಯಾಟರ್ ಆಗಿದ್ದಾರೆ.
ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಬಾರಿಸಿದ ಸಿಕ್ಸರ್‌ಗಳ ಸಂಖ್ಯೆ 28, ಟೆಸ್ಟ್ ಪಂದ್ಯವೊಂದರಲ್ಲಿ ಯಾವುದೇ ತಂಡ ಬಾರಿಸಿದ ಅತಿ ಹೆಚ್ಚು ಸಿಕ್ಸರ್ ಆಗಿವೆ. ಅವರು 2019 ರ ವೈಜಾಗ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 27 ಸಿಕ್ಸರ್‌ಗಳ ದಾಖಲೆಯನ್ನು ಮುರಿದರು.
ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಭಾರತ ಇದುವರೆಗೆ 48 ಸಿಕ್ಸರ್‌ಗಳು ಸಿಡಿಸಿದೆ, ಸರಣಿಯಲ್ಲಿ ಯಾವುದೇ ತಂಡ ಅತಿ ಹೆಚ್ಚು ಸಿಕ್ಸರ್ ಗಳಿಸಿದ ದಾಖಲೆ ಮಾಡಿದೆ. ಜೈಸ್ವಾಲ್ ಇದರಲ್ಲಿ 22 ಸಿಕ್ಸರ್ ಬಾರಿಸಿ, ರೋಹಿತ್ ಅವರ ದಾಖಲೆ ಮುರಿದರು.












Click it and Unblock the Notifications