Ind Vs SA: ಭಾರತದ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ: ವಿಶ್ವಕಪ್ ತಂಡದ ನಾಯಕನಿಗೆ ಇಲ್ಲ ಸ್ಥಾನ

ಡಿಸೆಂಬರ್ 10ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ವಿಶ್ವಕಪ್ ತಂಡದ ನಾಯಕನಾಗಿದ್ದ ತೆಂಬಾ ಬವುಮಾ ಅವರನ್ನೇ ತಂಡದಿಂದ ಕೈಬಿಡಲಾಗಿದ್ದು, ಏಡೆನ್ ಮಾರ್ಕ್ರಾಮ್ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

ಏಡೆನ್ ಮಾರ್ಕ್ರಾಮ್ ಟಿ20 ಸರಣಿಯಲ್ಲಿ ಕೂಡ ದಕ್ಷಿಣ ಆಫ್ರಿಕಾ ತಂಡ ನಾಯಕತ್ವ ವಹಿಸಿಕೊಂಡಿದ್ದಾರೆ. ಬವುಮಾ ಟೆಸ್ಟ್ ಸರಣಿಯಲ್ಲಿ ಮಾತ್ರ ಆಡಲಿದ್ದು, ಟೆಸ್ಟ್ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ. ಭಾರತ ದಕ್ಷಿಣ ಆಫ್ರಿಕಾ ಟಿ20 ಸರಣಿ ಡಿಸೆಂಬರ್ 10ರಿಂದ ಆರಂಭವಾಗಲಿದೆ.

IND vs SA : Temba Bavuma Excluded from ODI Squad Following World Cup Setback

ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಬೌಲರ್ ಕಗಿಸೊ ರಬಾಡ ಕೂಡ ಏಕದಿನ ಸರಣಿಯಲ್ಲಿ ವಿಶ್ರಾಂತಿ ಪಡೆಯಲಿದ್ದು, ಟೆಸ್ಟ್ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತ ದಕ್ಷಿಣ ಆಫ್ರಿಕಾ ಮೊದಲು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಡಿಸೆಂಬರ್ 10ರಂದು ಮೊದಲ ಟಿ20 ಪಂದ್ಯ ನಡೆಯಲಿದ್ದು, ಡಿಸೆಂಬರ್ 12 ಮತ್ತು 14ರಂದು ಕ್ರಮವಾಗಿ ಎರಡು ಮತ್ತು ಮೂರನೇ ಟಿ20 ಪಂದ್ಯ ನಡೆಯಲಿದೆ. ಡಿಸೆಂಬರ್ 17ರಂದು ಏಕದಿನ ಸರಣಿಯ ಮೊದಲ ಪಂದ್ಯ ನಡೆದರೆ, ಎರಡು ಮೂರನೇ ಏಕದಿನ ಪಂದ್ಯ ಡಿಸೆಂಬರ್ 19 ಮತ್ತು 21ರಂದು ನಡೆಯಲಿದೆ.

ಡಿಸೆಂಬರ್ 26-30 ರವರೆಗೆ ಮೊದಲ ಟೆಸ್ಟ್ ಪಂದ್ಯ ಆಡಲಾಗುತ್ತದೆ. ಬಳಿಕ ಟೆಸ್ಟ್ ಸರಣಿಯ ಕೊನೆಯ ಪಂದ್ಯ 2024ರ ಜನವರಿ 3 ರಿಂದ 7ರ ವರೆಗೆ ಆಡಲಾಗುತ್ತದೆ.

ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ

ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ (1ನೇ ಮತ್ತು 2ನೇ ಟಿ20 ಪಂದ್ಯ), ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್ (1ನೇ ಮತ್ತು 2ನೇ ಟಿ20 ಪಂದ್ಯ), ಡೇವಿಡ್, ಕೆಲಾಸೆನ್, ಕೆಲಾಸೆನ್, ಕೆಲಾಸೆನ್ ಮಿಲ್ಲರ್, ಲುಂಗಿ ಎನ್‌ಗಿಡಿ (1ನೇ ಮತ್ತು 2ನೇ ಟಿ20 ಪಂದ್ಯ), ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್.

ದಕ್ಷಿಣ ಆಫ್ರಿಕಾದ ಏಕದಿನ ತಂಡ

ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ನಾಂಡ್ರೆ ಬರ್ಗರ್, ಟೋನಿ ಡಿ ಜೊರ್ಜಿ, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಕೈಲ್ ವೆರ್ರೆನ್ನೆ ಮತ್ತು ಲಿಜಾಡ್ ವಿಲಿಯಮ್ಸ್.

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ

ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಕೀಗನ್ ಪೀಟರ್‌ಸನ್, ಕಗಿಸೊ ಸೇಂಟ್ ರಬಾಡಾ, ಮತ್ತು ಕೈಲ್ ವೆರ್ರೆನ್ನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+