KL Rahul: ನಾನು ಅವತ್ತೇ ಹೇಳಿರ್ಲಿಲ್ವಾ? ನಮ್ಮ ಹುಡ್ಗ ಟಾಪ್ ಆಗಿ ಬರ್ತಾನೆ ಅಂತ!
ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲೌಟ್ ಆಗಿದೆ. ಅಗ್ರ ಕ್ರಮಾಂಕದ ಬ್ಯಾಟಿಂಗ್ ಪಡೆ ವಿಫಲವಾದ ನಂತರ ಏಕಾಂಗಿ ಹೋರಾಟ ನಡೆಸಿದ ಕೆಎಲ್ ರಾಹುಲ್ ಶತಕ ಗಳಿಸುವ ಮೂಲಕ ಭಾರತ 245 ರನ್ ಗಳಿಸಲು ಕಾರಣವಾದರು.
ಕೆಎಲ್ ರಾಹುಲ್ ಶತಕದ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಹೊರತುಪಡಿಸಿ, ಸೆಂಚುರಿಯನ್ ಅಂಗಳದಲ್ಲಿ ಎರಡು ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಶತಕ ಸಿಡಿಸಿದ 4ನೇ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡೂಲ್ಕರ್ 5 ಶತಕ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಮೊಹಮ್ಮದ್ ಅಜರುದ್ದೀನ್, ವಿರಾಟ್ ಕೊಹ್ಲಿ ಎರಡು ಶತಕ ಗಳಿಸಿದ್ದರು, ಈಗ ಕೆಎಲ್ ರಾಹುಲ್ ಕೂಡ ಅಜರುದ್ದಿನ್ ಮತ್ತು ಕೊಹ್ಲಿ ಸಾಧನೆಯನ್ನು ಸರಿಗಟ್ಟಿದ್ದಾರೆ.
ನಾನು ಅವತ್ತೇ ಹೇಳಿರ್ಲಿಲ್ವಾ? ಈ ಜೇಷ್ಠ ಹೋಗಿ ಆಷಾಡ ಹೋಗಿ ಶ್ರಾವಣ ಬರ್ಲಿ ನಮ್ಮ ಹುಡ್ಗ @klrahul ಟಾಪ್ ಆಗ್ ಬರ್ತಾನೆ ಅಂತ. ಹೆಂಗೆ ನಮ್ಮ ಕರುನಾಡ ಕೂಸು? #SAvIND https://t.co/JdhyzINQYf
— Dodda Ganesh | ದೊಡ್ಡ ಗಣೇಶ್ (@doddaganesha) December 27, 2023
ರಾಹುಲ್ ಆಟಕ್ಕೆ ಮನಸೋತ ದೊಡ್ಡ ಗಣೇಶ್
ಕೆಎಲ್ ರಾಹುಲ್ ಆಟಕ್ಕೆ ಕರ್ನಾಟಕದ ಕ್ರಿಕೆಟಿಗ ದೊಡ್ಡ ಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಹಳೆಯ ಟ್ವೀಟ್ ಒಂದನ್ನು ಹಂಚಿಕೊಂಡಿರುವ ಅವರು, ನಮ್ಮ ಹುಡ್ಗ ಟಾಪ್ ಅಲ್ಲಿ ಬರ್ತಾನೆ ಅಂತಾ ಅವತ್ತೇ ಹೇಳಿದ್ದೆ ಎಂದಿದ್ದಾರೆ.
ಫೆಬ್ರವರಿ 22, 2023ರಲ್ಲಿ ಟ್ವೀಟ್ ಮಾಡಿದ್ದ ಅವರು, "ಈ ಜೇಷ್ಠ ಹೋಗಿ ಆಷಾಢ ಹೋಗಿ ಶ್ರಾವಣ ಬರ್ಲಿ, ನಮ್ಮ ಕೆಎಲ್ ರಾಹುಲ್ ಟಾಪ್ ಆಗ್ ಬರ್ತಾನೇ" ಎಂದು ಟ್ವೀಟ್ ಮಾಡಿದ್ದರು. ಈಗ ಅದೇ ಟ್ವೀಟ್ ಹಂಚಿಕೊಂಡಿದ್ದು, "ನಾನು ಅವತ್ತೇ ಹೇಳಿರ್ಲಿಲ್ವಾ, ಈ ಜೇಷ್ಠ ಹೋಗಿ ಆಷಾಢ ಹೋಗಿ ಶ್ರಾವಣ ಬರ್ಲಿ ನಮ್ಮ ಹುಡ್ಗ ಕೆಎಲ್ ರಾಹುಲ್ ಟಾಪ್ ಆಗ್ ಬರ್ತಾನೆ ಅಂತ. ಹೆಂಗೆ ನಮ್ಮ ಕರುನಾಡ ಕೂಸು?" ಎಂದು ಟ್ವೀಟ್ ಮಾಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ "ಕೆಎಲ್ ರಾಹುಲ್ ಎಂಟು ಟೆಸ್ಟ್ ಶತಕಗಳಲ್ಲಿ ಏಳನ್ನು ವಿದೇಶಗಳಲ್ಲಿ ಗಳಿಸಿದ್ದಾರೆ. ಅದಕ್ಕಾಗಿಯೇ ನಾನು ಯಾವಾಗಲೂ ಅವನು ವಿಶೇಷ ಪ್ರತಿಭೆ ಎಂದು ಹೇಳುತ್ತೇನೆ" ಎಂದಿದ್ದಾರೆ.
ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚುಗೆ
ಕೆಎಲ್ ರಾಹುಲ್ ಆಟಕ್ಕೆ ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಚೆನ್ನಾಗಿ ಆಡಿದೆ ಕೆಎಲ್ ರಾಹುಲ್, ಅವರ ಆಲೋಚನಾ ಸ್ಪಷ್ಟತೆ ನನ್ನನ್ನು ಪ್ರಭಾವಿತಗೊಳಿಸಿತು. ರಾಹುಲ್ ಫೂಟ್‌ವರ್ಕ್ ನಿಖರವಾಗಿ ಮತ್ತು ಖಚಿತವಾಗಿ ಕಾಣುತ್ತದೆ, ಮತ್ತು ಬ್ಯಾಟರ್ ಸರಿಯಾಗಿ ಯೋಚಿಸಿದಾಗ ಅದು ಸಂಭವಿಸುತ್ತದೆ. ಈ ಟೆಸ್ಟ್ ಪಂದ್ಯದಲ್ಲಿ ಈ ಶತಕ ನಿರ್ಣಾಯಕ. ನಿನ್ನೆ ತಂಡ ಒಂದು ಹಂತದಲ್ಲಿ ಎಲ್ಲಿತ್ತು ಎಂದು ಪರಿಗಣಿಸಿದರೆ ಭಾರತ 245 ಗಳಿಸಿದ್ದು ಸಂತೋಷದಾಯಕ" ಎಂದಿದ್ದಾರೆ.












Click it and Unblock the Notifications