IND vs SA 5th T20: ವರುಣ್ ಚಕ್ರವರ್ತಿ, ಬುಮ್ರಾ ಬೌಲಿಂಗ್ ದಾಳಿಗೆ ಪತರಗುಟ್ಟಿದ ದಕ್ಷಿಣ ಆಫ್ರಿಕಾ: ಭಾರತಕ್ಕೆ 30 ರನ್‌ಗಳ ಜಯ
IND vs SA 5th T20: ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (ಡಿಸೆಂಬರ್ 19) ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ 5ನೇ ಟಿ-20 ಪಂದ್ಯ ನಡೆಯಿತು. ಈ ವೇಳೆ ಟೀಂ ಇಂಡಿಯಾ 30 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 3-1 ಅಂತರದಿಂದ ಸರಣಿ ಗೆದ್ದುಕೊಂಡಿತು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 231 ರನ್‌ಗಳನ್ನು ಕಲೆಹಾಕುವ ಮೂಲಕ ಆಫ್ರಿಕಾ ತಂಡಕ್ಕೆ 232 ಬೃಹತ್ ರನ್‌ಗಳ ಗುರಿ ನೀಡಿತು. ಆದರೆ, ಈ ಗುರಿಯನ್ನು ತಲುಪಲಾಗದೇ ದಕ್ಷಿಣ ಆಫ್ರಿಕಾ ಪಡೆ ಕೊನೆಗೂ ಸೋಲನುಭವಿಸಿತು.

ಭಾರತದ ಪರ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದ ಸಂಜು ಸ್ಯಾಮ್ಸನ್ 22 ಎಸೆತಗಳಲ್ಲಿ 37 ರನ್, ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 34 ರನ್ ಗಳಿಸಿದ್ರೆ, ತಿಲಕ್ ವರ್ಮಾ 73 (42) ಹಾಗೂ ಹಾರ್ದಿಕ್ ಪಾಂಡ್ಯ 25 ಎಸೆತಗಳಲ್ಲಿ 63 ರನ್ ಬಾರಿಸುವ ತಂಡದ ಮೊತ್ತವನ್ನು 231 ರನ್‌ಗಳಿಗೆ ಕೊಂಡೊಯ್ದರು. ಈ ಮೂಲಕ ದಕ್ಷಿಣ ಆಫ್ರಿಕಾಕ್ಕೆ 232 ಬೃಹತ್ ರನ್‌ಗಳ ಗುರಿ ನೀಡಿತು.
ಬೃಹತ್ ರನ್‌ಗಳನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ, 20 ಒವರ್‌ಗಳಿಗೆ 8 ವಿಕೆಟ್ ನಷ್ಠಕ್ಕೆ 201 ರನ್ ಗಳಿಸಿ 30 ರನ್‌ಗಳಿಂದ ಸೋಲು ಕಂಡಿತು. ಅಷ್ಟರ ಮಟ್ಟಿಗೆ ಟೀಂ ಇಂಡಿಯಾ ಬೌಲರ್‌ಗಳು ಎದುರಾಳಿ ತಂಡದ ಬ್ಯಾಟರ್‌ಗಳನ್ನು ಕಡಿಮೆ ರನ್‌ಗಳಿಗೆ ಕಟ್ಟಿಹಾಕುವುದಲ್ಲದೆ, ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ವರುಣ್ ಚಕ್ರವರ್ತಿ 4 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಉಳಿದಂತೆ ಅರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು. ಹೀಗೆ ಉತ್ತಮ ಬೌಲಿಂಗ್ ದಾಳಿ ಮಾಡುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.
ಬ್ಯಾಟಿಂಗ್‌ನಲ್ಲಿ ಭಾರತ ಅಬ್ಬರ: ಟೀಂ ಇಂಡಿಯಾ ಪರ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧ ಶತಕ ಬಾರಿಸಿದರು. ತಿಲಕ್ ವರ್ಮಾ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಚೆಂಡಾಡುವ ಮೂಲಕ 10 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ 73 (42) ರನ್ ಕಲೆಹಾಕಿದರು. ಹಾರ್ದಿಕ್ ಪಾಂಡ್ಯ ಅವರು 5 ಬೌಂಡರಿ, 5 ಸಿಕ್ಸ್ ಸಿಡಿಸುವ ಮೂಲಕ ಸಹಿತ 63 (25) ರನ್‌ಗಳನ್ನು ಕಲೆಹಾಕಿದರು.
ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನ ಅತಿ ವೇಗದ ಅರ್ಧಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹಗ್ಗೆಳಿಕೆಗೆ ಪಾತ್ರರಾದರು. ಸಂಜು ಸ್ಯಾಮ್ಸನ್ 37 ಮತ್ತು ಅಭಿಷೇಕ್ ಶರ್ಮಾ 34 ರನ್‌ಗಳನ್ನು ಬಾರಿಸಿದರು. ಇನ್ನೂ ನಾಯಕ ಸೂರ್ಯಕುಮಾರ್ ಯಾದವ್ ಅವರು ಕಳಪೆ ಪ್ರದರ್ಶನ ತೋರಿದರು. ಅವರು 7 ಬಾಲ್‌ಗಳಿಗೆ ಕೇವಲ 5 ರನ್‌ಗಳನ್ನು ಮಾತ್ರ ಕಲೆಹಾಕಿದರು.
ದಕ್ಷಿಣ ಆಫ್ರಿಕಾವು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 201 ರನ್ ಗಳಿಸುವಲ್ಲೇ ಸುಸ್ತು ಹೊಡೆದಿತು. ಕ್ವಿಂಟನ್ ಡಿ ಕಾಕ್ ಅವರು 65 (35) ರನ್ ಗಳಿಸಿದರೆ, ಉಳಿದ ಆಟಗಾರರಿಂದ ಅಂದುಕೊಂಡಷ್ಟು ಪ್ರದರ್ಶನ ಕಂಡುಬರಲಿಲ್ಲ. ಇದೇ ದಕ್ಷಿಣ ಆಫ್ರಿಕಾಗೆ ಮುಳುವಾಗಿದ್ದು ಎಂದರೆ ತಪ್ಪಾಗಲಾರದು.












Click it and Unblock the Notifications