Ind vs Pak: ಅಹಮದಾಬಾದ್ ಹೋಟೆಲ್ ದರ ದುಬಾರಿ, ಆಸ್ಪತ್ರೆ ಬೆಡ್ ಬುಕ್ ಮಾಡಿದ ಫ್ಯಾನ್ಸ್: ವಿಮಾನ ಟಿಕೆಟ್ ದರ ಭಾರಿ ಏರಿಕೆ
ಭಾರತ - ಪಾಕಿಸ್ತಾನ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯವನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ.
ಆದರೆ, ಭಾರತ ಪಾಕಿಸ್ತಾನ ಪಂದ್ಯ ನೋಡಬೇಕೆಂದರೆ ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಭಾರತ ಪಾಕಿಸ್ತಾನ ಪಂದ್ಯದ ದಿನಾಂಕ ನಿಗದಿಯಾಗುತ್ತಿದ್ದಂತೆ ಅಹಮದಾಬಾದ್‌ನಲ್ಲಿ ಹೋಟೆಲ್ ರೂಂ ಬಾಡಿಗೆ ದರ ಗಗನಕ್ಕೇರಿದೆ. ಐಷಾರಾಮಿ ಹೋಟೆಲ್‌ಗಳಲ್ಲಿ 40-50 ಸಾವಿರ ರೂಪಾಯಿ ಬಾಡಿಗೆ ಇದೆ.

ದುಬಾರಿ ಹೋಟೆಲ್ ಬಾಡಿಗೆ ಇದ್ದರೂ ರೂಮ್‌ಗಳು ಸಿಗದೆ ಕೆಲವು ಅಭಿಮಾನಿಗಳು ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡಿರುವ ವರದಿಯಾಗಿದೆ. ಇನ್ನು ಪಂದ್ಯದ ದಿನ ಕೂಡ ವಿಮಾನ ಟಿಕೆಟ್ ದರ ಗಗನಕ್ಕೇರಿದೆ. ದೆಹಲಿಯಿಂದ ಅಹಮದಾಬಾದ್‌ಗೆ ವಿಮಾನ ಟಿಕೆಟ್ ದರ ಸಾಮಾನ್ಯವಾಗಿ 3000 ರೂಪಾಯಿ ಇದ್ದರೆ, ಭಾರತ ಪಾಕಿಸ್ತಾನ ಪಂದ್ಯದ ದಿನ ದೆಹಲಿಯಿಂದ ಅಹದಾಬಾದ್‌ಗೆ ಪ್ರಯಾಣಿಸಲು 10 ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿದೆ.
ಟಿಕೆಟ್‌ಗೆ ಭಾರಿ ಬೇಡಿಕೆ
ಒಂದು ತಿಂಗಳ ಹಿಂದೆ ಟಿಕೆಟ್ ಮಾರಾಟಕ್ಕೆ ಪಟ್ಟಿ ಮಾಡಿದಾಗ ಕೆಲವು ಅಭಿಮಾನಿಗಳಿಗೆ ಟಿಕೆಟ್ ಪಡೆಯುವ ಅದೃಷ್ಟ ಇರಲಿಲ್ಲ. ತದನಂತರ ಬಿಸಿಸಿಐ 14,000 ಹೆಚ್ಚಿನ ಟಿಕೆಟ್‌ಗಳನ್ನು ಮಾರಾಟಕ್ಕೆ ಬಿಟ್ಟಾಗ ರಶ್ ತುಂಬಾ ಹೆಚ್ಚಾಗಿತ್ತು, ಅನೇಕರು ಟಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಬಿಸಿಸಿಐ ಹೆಚ್ಚಿನ ಟಿಕೆಟ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಕೆಲವರು ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಾಗಿ ಅಹಮದಾಬಾದ್‌ಗೆ ಪ್ರಯಾಣಿಸಲು ಯೋಜಿಸುತ್ತಿದ್ದಾರೆ.
ದುಬಾರಿ ಹೋಟೆಲ್ ಬಾಡಿಗೆ ಉಳಿತಾಯ ಮಾಡಲು ನೀವು ಪಂದ್ಯದ ದಿನದಂದು ಹೋಗಲು ಯೋಜಿಸುತ್ತಿದ್ದರೆ ಮೇಕ್‌ಮೈಟ್ರಿಪ್‌ನಲ್ಲಿ ದೆಹಲಿಯಿಂದ ಅಹಮದಾಬಾದ್‌ಗೆ ಸಾಮಾನ್ಯವಾಗಿ ರೂ. 3,000 ದರದ ವಿಮಾನಗಳು ಈಗ 10,000 ರಿಂದ 12,000 ಆಗಿದೆ.
ಅಹಮದಾಬಾದ್‌ನಲ್ಲಿ ಎರಡು ರಾತ್ರಿಗಳ ಮೂರು-ಸ್ಟಾರ್ ಹೋಟೆಲ್‌ಗಳು ರೂ. 40,000 ಕ್ಕೂ ಹೆಚ್ಚು ಶುಲ್ಕ ವಿಧಿಸುತ್ತಿವೆ. Booking.com ನಲ್ಲಿ ನೋಡಿದಾಗ ಅಕ್ಟೋಬರ್ 13 ರಿಂದ ಅಕ್ಟೋಬರ್ 15 ರವರೆಗೆ ಪ್ರತಿ ರಾತ್ರಿಗೆ 6,000 ರಿಂದ 24,000 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.
ಭಾರತ ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕೆಲವು ಟಿಕೆಟ್‌ಗಳು 15 ಲಕ್ಷ ರೂಪಾಯಿಗೆ ಮಾರಾಟವಾಗಿವೆ ಎಂದು ವರದಿಯಾಗಿದೆ.












Click it and Unblock the Notifications