Get Updates
Get notified of breaking news, exclusive insights, and must-see stories!

Ind vs NZ: ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ : ಕೊಹ್ಲಿ ಶತಕ ನೋಡೊಕೆ ಕಾದ ವೀಕ್ಷಕರ ಸಂಖ್ಯೆ ಎಷ್ಟು?

ಅಕ್ಟೋಬರ್ 22 ರಂದು ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾರತ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ. ಆಟಗಾರರು ಮಾತ್ರವಲ್ಲ ಡಿಸ್ನಿ + ಹಾಟ್‌ಸ್ಟಾರ್ ಕೂಡ ದಾಖಲೆ ಬರೆದಿದೆ.

ವಿರಾಟ್ ಕೊಹ್ಲಿ ಶತಕವನ್ನು ಗಳಿಸುವ ಸಮೀಪದಲ್ಲಿದ್ದಾಗ, ವೀಕ್ಷಕರ ಸಂಖ್ಯೆ 4 ಕೋಟಿಯನ್ನು ದಾಟಿತು. ರವೀಂದ್ರ ಜಡೇಜಾ ಬೌಂಡರಿ ಬಾರಿಸಿ ಭಾರತಕ್ಕೆ ಜಯ ತಂದುಕೊಟ್ಟಾಗ ವೀಕ್ಷಕರ ಸಂಖ್ಯೆಯು 4.3 ಕೋಟಿಗೆ ಏರಿತು, 2003 ರ ನಂತರ ಐಸಿಸಿ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಮೊದಲ ಬಾರಿಗೆ ಗೆದ್ದು ಬೀಗಿತು.

 Ind vs NZ: Virat Kohlis Milestone Ties Sachin, Attracts 4.3 Cr Viewers on Disney+ Hotstar

ವೀಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆ

ಡಿಸ್ನಿ+ ಹಾಟ್‌ಸ್ಟಾರ್ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಕ್ಷಕರ ಸಂಖ್ಯೆಯನ್ನು ಹಂಚಿಕೊಂಡಿದ್ದು, ದಾಖಲೆ ಬಗ್ಗೆ ಮಾಹಿತಿ ನೀಡಿದೆ. "ದೇಹಾವೂ! ನಮ್ಮೆಲ್ಲರಿಂದ ಮತ್ತೊಂದು ದಾಖಲೆ ಮುರಿಯುವ ಪ್ರದರ್ಶನ! ಹ್ಯಾಟ್ರಿಕ್‌ಗೆ ಸಮಯವೇ?" ಎಂದು ಟ್ವೀಟ್ ಮಾಡಿದ್ದು, ಭಾರತ ನ್ಯೂಜಿಲೆಂಡ್ ಪಂದ್ಯದ ಸಮಯದಲ್ಲಿ ವೀಕ್ಷಕರ ಸಂಖ್ಯೆ ವಿಶ್ವದಾಖಲೆಯ 4.3 ಕೋಟಿ ಇತ್ತು ಎಂದು ಹೇಳಿದೆ

ಫಿಫಾ ವಿಶ್ವಕಪ್ ಫೈನಲ್ ದಾಖಲೆ ಎಷ್ಟಿತ್ತು?

ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫಿಫಾ ವಿಶ್ವಕಪ್ 2022 ಫೈನಲ್ ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಭಾರತದಲ್ಲಿ ವೀಕ್ಷಕರ ಸಂಖ್ಯೆ 3.2 ಕೋಟಿ ಮುಟ್ಟಿತ್ತು. 1986 ರ ನಂತರ ಅರ್ಜೆಂಟೀನಾ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಕ್ರಿಕೆಟ್ ಪಂದ್ಯದ ಅಂಕಿಅಂಶಗಳು ಭಾರತದಲ್ಲಿ ಕ್ರೀಡೆಯ ವೀಕ್ಷಕರಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತವೆ.

ಭಾರತ ತಂಡವು ಎರಡು ಓವರ್‌ಗಳು ಬಾಕಿ ಇರುವಂತೆಯೇ ಪಂದ್ಯವನ್ನು ಮುಗಿಸುವ ಮೂಲಕ 4 ವಿಕೆಟ್‌ಗಳಿಂದ ಜಯ ಸಾಧಿಸಿತು. ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದಾಗ ವೀಕ್ಷಕರ ಸಂಖ್ಯೆ 3.5 ಕೋಟಿ ಮುಟ್ಟಿತ್ತು, ಈಗ ಅದನ್ನೂ ಮೀರಿ ಹೊಸ ದಾಖಲೆ ಬರೆದಿದೆ.

ಭಾರತ ತಂಡ ಏಕದಿನ ವಿಶ್ವಕಪ್ ಫೈನಲ್‌ಗೆ ತಲುಪಿದರೆ, ವೀಕ್ಷಕರ ಸಂಖ್ಯೆ 5 ಕೋಟಿ ಗಡಿಯನ್ನು ದಾಟುವ ಸಾಧ್ಯತೆ ಇದೆ ಎಂದು ಟ್ವಿಟರ್ ಬಳಕೆದಾರರಲ್ಲಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

100 ರನ್‌ಗಳ ಗಡಿಯನ್ನು ತಲುಪುವುದರೊಂದಿಗೆ ಭಾರತದ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಿಕ್ಸರ್ ಹೊಡೆಯಲು ಪ್ರಯತ್ನಿಸಿದಾಗ ಕೊಹ್ಲಿ ಔಟಾಗುವ ಮೂಲಕ ಕೇವಲ ಐದು ರನ್‌ಗಳ ಅಂತರದಲ್ಲಿ ಶತಕದಿಂದ ವಂಚಿತರಾದರೂ, ರವೀಂದ್ರ ಜಡೇಜಾ ಬೌಂಡರಿ ಬಾರಿಸುವ ಮೂಲಕ ಭಾರತದ ಜಯವನ್ನು ಖಚಿತಪಡಿಸಿದರು.

ಐಪಿಎಲ್ ನೇರಪ್ರಸಾರದ ಹಕ್ಕನ್ನು ಜಿಯೋಸಿನಿಮಾ ಪಡೆದುಕೊಂಡ ನಂತರ ಡಿಸ್ನಿ + ಹಾಟ್‌ಸ್ಟಾರ್ ಭಾರಿ ಹಿನ್ನಡೆ ಅನುಭವಿಸುತ್ತಿದೆ. ಚಂದಾದಾರರನ್ನು ಸೆಳೆಯುವ ದೃಷ್ಟಿಯಿಂದ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+