Ind Vs Ned: ಚಿನ್ನಸ್ವಾಮಿ ಅಂಗಳದಲ್ಲಿ ರಾಹುಲ್, ಅಯ್ಯರ್ ಅಬ್ಬರ: ಹಲವು ದಾಖಲೆಗಳ ನಿರ್ಮಾಣ!

ದೀಪಾವಳಿ ಹಬ್ಬದ ದಿನ ಭಾರತ ತಂಡ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸಿದೆ. ಹಬ್ಬದ ಖಷಿಯಲ್ಲಿ ಪಂದ್ಯ ನೋಡುವ ಅಭಿಮಾನಿಗಳ ಖುಷಿ ಡಬಲ್ ಆಗಿದೆ. ಏಕದಿನ ವಿಶ್ವಕಪ್‌ನ ನೆದರ್ಲ್ಯಾಂಡ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಕಲೆ ಹಾಕಿದೆ.

ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 410 ರನ್ ಕಲೆ ಹಾಕಿದೆ. ದೀಪಾವಳಿಯಂದು ಚಿನ್ನಸ್ವಾಮಿ ಅಂಗಳದಲ್ಲಿ ಭಾರತ ಹಲವು ದಾಖಲೆಗಳನ್ನು ನಿರ್ಮಿಸಿದೆ.

 Ind vs Ned

ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಜೋಡಿ ಭಾರತಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 11.5 ಓವರ್ ಗಳಲ್ಲಿ 100 ರನ್‌ ಕಲೆ ಹಾಕಿದರು. ಶುಭಮನ್ ಗಿಲ್ 32 ಎಸೆತಗಳಲ್ಲಿ 51 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮಾ ಕೂಡ ಅರ್ಧಶತಕ ಗಳಿಸಿ ಮಿಂಚಿದರು. 54 ಎಸೆತಗಳಲ್ಲಿ 61 ಗಳಿಸಿದರು.

ವಿರಾಟ್ ಕೊಹ್ಲಿ 56 ಎಸೆತಗಳಲ್ಲಿ 51 ರನ್ ಗಳಿಸಿ ಬೌಲ್ಡ್ ಆದರು. ನಂತರ ಬಂದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಆರಂಭದಲ್ಲಿ ನಿಧಾನಗತಿಯಲ್ಲೇ ಇನ್ನಿಂಗ್ಸ್ ಆರಂಭಿಸಿದರು ನಂತರ ಸಿಡಿಯಲು ಆರಂಭಿಸಿದರು.

ವೇಗದ ಶತಕ ಸಿಡಿಸಿದ ರಾಹುಲ್

ಕೆಎಲ್ ರಾಹುಲ್ ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದರು ನಂತರ ಬೌಂಡರಿಗಳ ಸುರಿಮಳೆಗೈದರು. ಕೇವಲ 62 ಎಸೆತಗಳಲ್ಲಿ 11 ಬೌಂಡರಿ 4 ಸಿಕ್ಸರ್ ಸಹಿತ 102 ರನ್ ಗಳಿಸಿ ಔಟಾದರು. ಇದು ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟಿಗನ ವೇಗದ ಶತಕವಾಗಿದೆ. ಈ ಮೊದಲು ರೋಹಿತ್ ಶರ್ಮಾ 63 ಎಸೆತಗಳಲ್ಲಿ ಶತಕ ಬಾರಿಸಿದ್ದು ದಾಖಲೆಯಾಗಿತ್ತು.

ಶ್ರೇಯಸ್ ಅಯ್ಯರ್ ಕೂಡ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. 94 ಎಸೆತಗಳಲ್ಲಿ 10 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 128 ರನ್ ಗಳಿಸಿದರು.

ನಿರ್ಮಾಣವಾದ ದಾಖಲೆಗಳಿವು

ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಮಾಡಿದರು. ಎಬಿ ಡಿವಿಲಿಯರ್ಸ್ 2015 ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 58 ಸಿಕ್ಸರ್‌ಗಳನ್ನು ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ರೋಹಿತ್ 2023ರಲ್ಲಿ 59 ಏಕದಿನ ಸಿಕ್ಸರ್‌ಗಳನ್ನು ಸಿಡಿಸಿದರು.

ರೋಹಿತ್ ಸತತ ಎರಡು ವಿಶ್ವಕಪ್‌ಗಳಲ್ಲಿ 500 ಪ್ಲಸ್ ರನ್ ದಾಖಲಿಸಿದ ಮೊದಲ ಆಟಗಾರ ಎನಿಸಿಕೊಂಡರು. 2019 ಮತ್ತು 2023ರ ವಿಶ್ವಕಪ್‌ನಲ್ಲಿ ಅವರು ಸತತವಾಗಿ 500 ಕ್ಕೂ ಹೆಚ್ಚು ರನ್ ಗಳಿಸಿದರು. ಸಚಿನ್ ತೆಂಡೂಲ್ಕರ್ 1996ರ ವಿಶ್ವಕಪ್‌ನಲ್ಲಿ 523 ರನ್ ಮತ್ತು 2003 ವಿಶ್ವಕಪ್‌ನಲ್ಲಿ 673 ರನ್ ಗಳಿಸಿದ್ದರು, ಈ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದರ ಅಗ್ರ ಐದು ಆಟಗಾರರು ಅರ್ಧಶತಕ ಗಳಿಸಿ ದಾಖಲೆ ಬರೆದರು. ಯಾವ ತಂಡ ಕೂಡ ಇದುವರೆಗೂ ಈ ಸಾಧನೆ ಮಾಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+