ಐಸಿಸಿ ವಿಶ್ವಕಪ್: ಭಾರತವನ್ನು ಸೋಲಿಸುವುದು ಹೇಗೆ? ಎಂಬ ಬಗ್ಗೆ ಡಬ್ಬಾ ಐಡಿಯಾ ಕೊಟ್ಟ ಆಸ್ಟ್ರೇಲಿಯಾ ತಂಡದ ಮಾಜಿ ಲೆಜೆಂಡ್!
ಭಾರತ ಐಸಿಸಿ ಅಖಾಡದಲ್ಲಿ ಅಬ್ಬರಿಸುತ್ತಿದ್ದು, ಇನ್ನೇನು ಕೆಲವೇ ದಿನದಲ್ಲಿ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನೂ ಗೆದ್ದು ಫೈನಲ್‌ಗೆ ಪ್ರವೇಶಿಸಲು ಸಜ್ಜಾಗಿದೆ. ಈಗ ಭಾರತ ತಂಡವನ್ನು ಕಂಡರೆ ಇಡೀ ಜಾಗತಿಕ ಕ್ರಿಕೆಟ್ ಲೋಕ ವಾಹ್.. ವಾಹ್.. ಅಂತಿದೆ. ಹೀಗಾಗಿ, ಎದುರಾಳಿ ತಂಡದ ಆಟಗಾರರಿಗೆ ಭಯವೂ ಶುರುವಾಗಿದೆ. ಹೀಗಿದ್ದಾಗಲೇ ಭಾರತವನ್ನ ಸೋಲಿಸುವುದು ಹೇಗೆ? ಎಂಬ ಕುರಿತು ಟಿಪ್ಸ್ ಕೊಟ್ಟಿದ್ದಾನೆ ಆಸ್ಟ್ರೇಲಿಯಾ ತಂಡದ ಈ ಮಾಜಿ ಆಟಗಾರ.
ಹೌದು, ಭಾರತ 2023ರ ವಿಶ್ವಕಪ್ ಅಖಾಡದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರಲ್ಲೂ ಸಾಲು ಸಾಲು ಪಂದ್ಯ ಗೆದ್ದು ಬೀಗುತ್ತಿದೆ. 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅಖಾಡದಲ್ಲಿ ಒಟ್ಟಾರೆ 8 ಪಂದ್ಯ ಆಡಿರುವ ಭಾರತ, ಈವರೆಗೆ 8ಕ್ಕೆ 8 ಮ್ಯಾಚ್ ಗೆದ್ದಿದೆ. ಅಂಕಪಟ್ಟಿಯಲ್ಲಿ ಕೂಡ ಮೊದಲ ಸ್ಥಾನ ಪಡೆದಿದ್ದು, 16 ಅಂಕಗಳ ಗಳಿಸಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಪರಿಸ್ಥಿತಿ ಹೀಗಿದ್ದಾಗಲೇ, ಭಾರತವನ್ನು ಸೋಲಿಸುವುದು ಹೇಗೆ? ಎಂಬ ಚಿಂತೆ ನೆದರ್ಲ್ಯಾಂಡ್ಸ್ ಮತ್ತು ಸೆಮಿಫೈನಲ್‌ಗೆ ಆಯ್ಕೆ ಆಗುವ 4ನೇ ತಂಡ ಅಂದ್ರೆ ನ್ಯೂಜಿಲೆಂಡ್ ಅಥವಾ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ತಂಡಗಳಿಗೆ ಶುರುವಾಗಿದೆ. ಹೀಗಿದ್ದಾಗ ಆಸ್ಟ್ರೇಲಿಯಾದ ಮಾಜಿ ಆಟಗಾರ ಭಾರತವನ್ನ ಸೋಲಿಸುವ ಬಗ್ಗೆ ಟಿಪ್ಸ್ ಕೊಟ್ಟಿದ್ದಾನೆ.

ಭಾರತವನ್ನು ಸೋಲಿಸುವುದು ಹೇಗೆ?
ಅಂದಹಾಗೆ ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಆಟಗಾರ ಆ್ಯಡಂ ಗಿಲ್ಕ್ರಿಸ್ಟ್ ಸೆಮಿಫೈನಲ್‌ಗೆ ಆಯ್ಕೆಯಾಗುವ 4ನೇ ತಂಡಕ್ಕೆ ಟಿಪ್ಸ್ ಕೊಟ್ಟಿದ್ದಾರೆ. ಯಾಕಂದ್ರೆ ಐಸಿಸಿಯ ನಿಯಮದ ಪ್ರಕಾರ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವ ಭಾರತ, ನಾಲ್ಕನೇ ಸ್ಥಾನದಲ್ಲಿ ಇರುವ ತಂಡವನ್ನು ಎದುರಿಸಲಿದೆ. ಹಾಗೇ 2 ಮತ್ತು 3ನೇ ಸ್ಥಾನದಲ್ಲಿ ಇರುವ ತಂಡಗಳು ಫೈನಲ್ ಪ್ರವೇಶಕ್ಕೆ ಸೆಣೆಸಾಡಲಿವೆ. ಹೀಗಿದ್ದಾಗ ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಸೆಮಿಫೈನಲ್ ಸೆಣೆಸಾಟ ಬಹುತೇಕ ಫಿಕ್ಸ್ ಆಗಿದೆ. ಇದೀಗ ಭಾರತಕ್ಕೆ ಯಾರು ಎದುರಾಳಿ.? ಅನ್ನೋ ಪ್ರಶ್ನೆ ಕಾಡುವಾಗ ಆ್ಯಡಂ ಗಿಲ್ಕ್ರಿಸ್ಟ್ ಭಾರತವನ್ನು ಸೋಲಿಸುವ ಬಗ್ಗೆ ಟಿಪ್ಸ್ ಕೊಟ್ಟಿದ್ದಾರೆ.
ಆ್ಯಡಂ ಗಿಲ್ಕ್ರಿಸ್ಟ್ ಕೊಟ್ಟ ಟಿಪ್ಸ್ ಏನು?
ಇದೀಗ ಆಸಿಸ್ ಮಾಜಿ ಆಟಗಾರ ಆ್ಯಡಂ ಗಿಲ್ಕ್ರಿಸ್ಟ್ ಹೇಳಿರುವಂತೆ, ಸೆಮಿಫೈನಲ್‌ಗೆ ಎಂಟ್ರಿ ಕೊಡುವ ಮತ್ತು ಭಾರತದ ವಿರುದ್ಧ ಸೆಣೆಸಾಡುವ ತಂಡ ಟಾಸ್ ಗೆದ್ದ ತಕ್ಷಣ ಹಿಂದೆ-ಮುಂದೆ ಯೋಚನೆಯೇ ಮಾಡದೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು. ಆದರೆ, ಭಾರತ ಚೇಸಿಂಗ್ ಮಾಡುವಲ್ಲಿ ಕೂಡ ಎತ್ತಿದ ಕೈ. ಅದರಲ್ಲೂ ವಿರಾಟ್ ಕೊಹ್ಲಿ ಇರುವ ತನಕ ಭಾರತಕ್ಕೆ ಚೇಸಿಂಗ್ ಸಮಯದಲ್ಲಿ ಯಾವುದೇ ಸಮಸ್ಯೆ ಆಗಲಾರದು. ಬೆಟ್ಟದಂಥ ಸವಾಲು ಇದ್ದರೂ ಭಾರತ ಸುಲಭವಾಗಿ, ಕೊಹ್ಲಿಯ ಸಹಾಯದಿಂದ ಗುರಿ ಸಾಧಿಸುತ್ತದೆ. ಆದ್ರೂ ಗೆಲ್ಲಬೇಕು ಅಂದ್ರೆ ಮೊದಲು ಬ್ಯಾಟಿಂಗ್ ಮಾಡಿ ಅಂತಾ ಆ್ಯಡಂ ಗಿಲ್ಕ್ರಿಸ್ಟ್ ಸಲಹೆ ನೀಡುತ್ತಿದ್ದಾರೆ. ಯಾಕೆ ಗೊತ್ತಾ?
ಬೌಲಿಂಗ್‌ನಲ್ಲಿ ಭಾರತವೇ ಸ್ಟ್ರಾಂಗ್!
ಆ್ಯಡಂ ಗಿಲ್ಕ್ರಿಸ್ಟ್ ಈಗ ನೀಡಿರುವ ವಿವರಣೆ ಪ್ರಕಾರ, ಮೊದಲು ಬ್ಯಾಟಿಂಗ್ ಆಯ್ದುಕೊಂಡು ಭಾರತಕ್ಕೆ ಬೃಹತ್ ಮೊತ್ತದ ಗುರಿ ನೀಡಿದರೆ ಮಾತ್ರ ಗೆಲ್ಲಲು ಸಾಧ್ಯ ಎನ್ನುತ್ತಿದ್ದಾರೆ. ಯಾಕಂದ್ರೆ ಸಂಜೆಯ ವೇಳೆ ಭಾರತದ ಬೌಲಿಂಗ್ ಲೈನ್ ಮತ್ತಷ್ಟು ಅಲರ್ಟ್ ಆಗುತ್ತಿದೆ. ಎದುರಾಳಿ ಟೀಂನ ಆಟಗಾರರು ಭಾರತ ತಂಡದ ಬೌಲಿಂಗ್ ದಾಳಿಯ ರಾತ್ರಿ ವೇಳೆ ಎದುರಿಸುವುದು ತುಂಬಾ ಕಷ್ಟವಾಗುತ್ತಿದೆ. ಇದೇ ಕಾರಣ ಮೊದಲು ಬ್ಯಾಟಿಂಗ್ ಮಾಡಬೇಕು ಅಂತಿದ್ದಾರೆ ಆ್ಯಡಂ ಗಿಲ್ಕ್ರಿಸ್ಟ್.

ನೋಡಿ ನೋಡಿ ಹೇಗಿದೆ ಡಬ್ಬಾ ಪ್ಲ್ಯಾನ್!
ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ ರೀತಿಯ ತ್ರಿಮೂರ್ತಿ ಬೌಲರ್ಸ್ ಬಗ್ಗೆ ಗಿಲ್ ಭಲೇ ಭಲೇ ಅಂತಿದ್ದಾರೆ. ಹೀಗಾಗಿಯೆ ಹಗಲು ಸಮಯದಲ್ಲಿ ಇವರ ಭೀಕರ ಬೌಲಿಂಗ್ ದಾಳಿ ಎದುರಿಸುವುದು ಸುಲಭ ಎಂಬ ಮಾತನ್ನು ಗಿಲ್ಲಿ ಹೇಳುತ್ತಿದ್ದಾರೆ. ರಾತ್ರಿ ವೇಳೆ ಭಾರತೀಯ ಬೌಲರ್ಸ್ ಎಸೆತ ಮಾರಕವಾಗಿರುತ್ತದೆ. ಇದೇ ಕಾರಣಕ್ಕೆ ಭಾರತದ ಬೌಲಿಂಗ್ ದಾಳಿ ಎದುರಿಸುವುದು ರಾತ್ರಿಯ ವೇಳೆ ತುಂಬಾ ಕಷ್ಟ, ಹೀಗಾಗಿ ಹಗಲಿನಲ್ಲಿ ಮೊದಲು ಬ್ಯಾಟಿಂಗ್ ಮಾಡಿ. ನಂತರ ರಾತ್ರಿಯ ವೇಳೆ, ಭಾರತದ ವಿರುದ್ಧ ಬೌಲಿಂಗ್ ಮಾಡಬೇಕು. ಅದ್ರಲ್ಲೂ ಬೃಹತ್ ಮೊತ್ತದ ಗುರಿಯನ್ನು ನೀಡಿರಬೇಕು ಅಂತಿದ್ದಾರೆ ಗಿಲ್ಲಿ. ಇದೇ ವೇಳೆ ಭಾರತದ ಬ್ಯಾಟಿಂಗ್ ಲೈನ್ ಕುರಿತು ಕೂಡ ಗಿಲ್ಕ್ರಿಸ್ಟ್ ಹೆಮ್ಮೆಯಿಂದ ಮಾತನಾಡಿದ್ದಾರೆ.
ಒಟ್ನಲ್ಲಿ, ಒಂದು ಕಾಲದಲ್ಲಿ ಭಾರತ ತಂಡದ ವಿರುದ್ಧವೇ ಪದೇ ಪದೆ ಜಗಳ ತೆಗೆಯುತ್ತಿದ್ದ ಆ್ಯಡಂ ಗಿಲ್ಕ್ರಿಸ್ಟ್ ಈಗ ಭಾರತವನ್ನ ಸೋಲಿಸುವ ಬಗ್ಗೆ ಟಿಪ್ಸ್ ಕೊಟ್ಟಿದ್ದಾರೆ. ಆದರೆ ಆ್ಯಡಂ ಗಿಲ್ಕ್ರಿಸ್ಟ್ ಕೊಟ್ಟ ಈ ಐಡಿಯಾ 'ಡಬ್ಬಾ ಥರ ಇದೆ' ಅಂತಿದ್ದಾರೆ ಕ್ರಿಕೆಟ್ ಫ್ಯಾನ್ಸ್. ಜೊತೆಗೆ ಭಾರತ ಕ್ರಿಕೆಟ್ ತಂಡವು ಈಗ 'ಅನ್‌ಸ್ಟಾಪಬಲ್' ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಸೆಮಿಫೈನಲ್ ಪಂದ್ಯದಲ್ಲು ಭಾರತ ಕ್ರಿಕೆಟ್ ತಂಡ ಗೆದ್ದು ಬೀಗುವುದು ಪಕ್ಕಾ ಅನ್ನೋದು ಫ್ಯಾನ್ಸ್ ಅಭಿಮತ.












Click it and Unblock the Notifications