ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ20 ವಿಶ್ವಕಪ್: ಪಾಕ್ ತಂಡ ಪ್ರಕಟ; ರಿಸರ್ವ್ ಸೇರಿದ ಸ್ಟಾರ್ ಆಟಗಾರ; ಶೋಯಬ್‌ಗೆ ಕೊಕ್

|
Google Oneindia Kannada News

ಇಸ್ಲಾಮಾಬಾದ್, ಸೆ. 15: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಏಷ್ಯಾ ಕಪ್‌ನಲ್ಲಿ ಆಡಿದ ತಂಡವೇ ಬಹುತೇಕ ಇದೆ. ಬಾಬರ್ ಅಜಂ ನಾಯಕತ್ವದ ಈ ತಂಡದಲ್ಲಿ ಶಾಹೀನ್ ಅಫ್ರಿದಿ ಇದ್ದಾರೆ.

ಪಾಕಿಸ್ತಾನದ ಅನುಭವಿ ಆಲ್‌ರೌಂಡರ್ ಹಾಗೂ ಸಾನಿಯಾ ಮಿರ್ಜಾ ಪತಿ ಶೋಯಬ್ ಮಲಿಕ್ ಅವರು ಕಂಬ್ಯಾಕ್ ಮಾಡುವ ನಿರೀಕ್ಷೆ ಹುಸಿಯಾಗಿದೆ. ಏಷ್ಯಾ ಕಪ್ ಫೈನಲ್‌ನಲ್ಲಿ ಶ್ರೀಲಂಕಾ ಎದುರು ಪಾಕಿಸ್ತಾನ ಸೋತ ನಂತರ ಪಾಕಿಸ್ತಾನಕ್ಕೆ ಶೋಯಬ್‌ರಂಥ ಅನುಭವಿ ಅಟಗಾರನ ಅಗತ್ಯತೆ ಇದೆ. ಅವರನ್ನು ವಿಶ್ವಕಪ್‌ಗೆ ಆಯ್ಕೆ ಮಾಡಬೇಕೆಂದು ಹಲವು ಪಾಕಿಸ್ತಾನೀಯರು ಧ್ವನಿ ಎತ್ತಿದ್ದರು. ಆದರೆ, ಪಾಕ್ ಕ್ರಿಕೆಟ್ ಮಂಡಳಿ ಯೋಜನೆಯಲ್ಲಿ ಶೋಯಬ್ ಬರಲಿಲ್ಲ.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ರಾಬಿನ್ ಉತ್ತಪ್ಪಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ರಾಬಿನ್ ಉತ್ತಪ್ಪ

ಏಷ್ಯಾ ಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಅನುಭವಿ ಬ್ಯಾಟರ್ ಫಕರ್ ಜಮಾನ್ ಅವರನ್ನು ಕೈಬಿಡುವ ಸಾಧ್ಯತೆ ಇತ್ತು. ಆದರೆ, ಮೀಸಲು ಆಟಗಾರನಾಗಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಏಷ್ಯಾ ಕಪ್‌ನಲ್ಲಿ ಆಡಿದ್ದ ಯುವ ಬೌಲರ್ ಶಹನವಾಜ್ ದಹಾನಿಯನ್ನೂ ರಿಸರ್ವ್ ಸಾಲಿಗೆ ಹಾಕಲಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿರುವ ಶಾನ್ ಮಸೂದ್ ಅವರೂ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಖುಷ್‌ದಿನ್ ಶಾ ಅವರಿಗೂ ಅವಕಾಶ ಸಿಕ್ಕಿದೆ.

ಪಾಕಿಸ್ತಾನ ತಂಡದ ಬೌಲಿಂಗ್ ಪಡೆ ಬಲವಾಗಿದೆ. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸ್ನೇನ್, ಶಾನ್ ಮಸೂದ್, ಉಸ್ಮಾನ್ ಖಾದಿರ್ ಅವರಿದ್ದಾರೆ. ರಿಸರ್ವ್ ಸಾಲಿನಲ್ಲಿ ಶಹನವಾಜ್ ದಹಾನಿ ಇದ್ದಾರೆ.

ವಿರಾಟ್ ಕೊಹ್ಲಿ ನಿವೃತ್ತಿ: ಪಾಕಿಸ್ತಾನ ಕ್ರಿಕೆಟರ್ ಹೇಳಿದ ಭವಿಷ್ಯದಲ್ಲಿ ಏನಿದೆ?ವಿರಾಟ್ ಕೊಹ್ಲಿ ನಿವೃತ್ತಿ: ಪಾಕಿಸ್ತಾನ ಕ್ರಿಕೆಟರ್ ಹೇಳಿದ ಭವಿಷ್ಯದಲ್ಲಿ ಏನಿದೆ?

ಟಿ20 ವಿಶ್ವಕಪ್‌ಗೆ ಪಾಕ್ ತಂಡ:
ಬಾಬರ್ ಅಜಂ (ಕ್ಯಾಪ್ಟನ್), ಶದಾಬ್ ಖಾನ್ (ವೈಸ್ ಕ್ಯಾಪ್ಟನ್), ಅಸಿಫ್ ಅಲಿ, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕಾರ್ ಅಹ್ಮದ್, ಖುಷ್‌ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ನಸೀಂ ಶಾ, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಉಮರ್ ಖಾದಿರ್.
ರಿಸರ್ವ್ಸ್: ಫಕರ್ ಜಮನ್, ಮೊಹಮ್ಮದ್ ಹ್ಯಾರಿಸ್, ಶಹನವಾಜ್ ದಹಾನಿ.

ICC T20 World Cup 2022: Pakistan Team Announced

ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶದೀಪ್ ಸಿಂಗ್.
ರಿಸರ್ವ್ಸ್: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.

ಟಿ20 ವಿಶ್ವಕಪ್ ಯಾವಾಗಿನಿಂದ?
ಐಸಿಸಿ ಟಿ20 ವಿಶ್ವಕಪ್ ಅಕ್ಟೋಬರ್ 16ರಂದು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ಮೊದಲಿಗೆ ಅರ್ಹತಾ ಹಂತ ಇರುತ್ತದೆ. ಇಲ್ಲಿ ಎಂಟು ತಂಡಗಳು ಸೆಣಸುತ್ತವೆ. ಅವುಗಳಲ್ಲಿ ನಾಲ್ಕು ತಂಡಗಳು ಸೂಪರ್-12 ಹಂತ ಪ್ರವೇಶಿಸುತ್ತವೆ. ಅಲ್ಲಿ ಭಾರತ ಸೇರಿ ಅಗ್ರ ಶ್ರೇಯಾಂಕದ 8 ತಂಡಗಳು ಆಟೊಮ್ಯಾಟಿಕ್ ಆಗಿ ಅರ್ಹತೆ ಪಡೆದು ಸೇರಿವೆ.

ಸೂಪರ್-12 ಹಂತದಲ್ಲಿ ಎರಡು ಗುಂಪುಗಳನ್ನು ಮಾಡಲಾಗಿದೆ. ಕಳೆದ ಬಾರಿಯ ಟಿ20 ವಿಶ್ವಕಪ್‌ನಂತೆ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ. ಎರಡೂ ತಂಡಗಳೂ ತಮ್ಮ ಮೊದಲ ಪಂದ್ಯದಲ್ಲಿ ಪರಸ್ಪರ ಸೆಣಸಲಿವೆ.

ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ಸೌತ್ ಆಫ್ರಿಕಾ, ನಮೀಬಿಯಾ ಮತ್ತು ನೆದರ್‌ಲೆಂಡ್ಸ್ ತಂಡಗಳು ಪ್ರಕಟಗೊಂಡಿವೆ.

ಶ್ರೀಲಂಕಾ, ಯುಎಇ, ಐರ್‌ಲೆಂಡ್, ಸ್ಕಾಟ್‌ಲೆಂಡ್, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಅಫ್ಘಾನಿಸ್ತಾನ್, ನ್ಯೂಜಿಲೆಂಡ್ ತಂಡಗಳು ಇನ್ನೂ ಪ್ರಕಟವಾಗಿಲ್ಲ.

(ಒನ್ಇಂಡಿಯಾ ಸುದ್ದಿ)

English summary
Pakistan Cricket Board announced a team for ICC T20 World Cup that begins on October 16th in Australia. Babar Azam will lead the team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X