Get Updates
Get notified of breaking news, exclusive insights, and must-see stories!

ICC World Cup 2023: ಫೈನಲ್‌ಗೆ ಎಲ್ಲರನ್ನೂ ಕರೆದರು, ಆದರೆ ಜೈಲು ಸೇರಿರುವ ಪಾಕಿಸ್ತಾನ ತಂಡದ ಮಾಜಿ ಕ್ಯಾಪ್ಟನ್ ಕಥೆ ಏನು?

ಒಂದು.. ಎರಡು.. ಮೂರು.. ಇನ್ನೇನು 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಶುರು ಆಗೇ ಬಿಡಲಿದೆ. ಅದರಲ್ಲೂ ಭಾರತ ತಂಡ ಈ ಬಾರಿ, ವಿಶ್ವಕಪ್ ಗೆಲ್ಲುವ ಅತ್ಯಂತ ಶಕ್ತಿಶಾಲಿ ತಂಡವಾಗಿದೆ. ಹೀಗಾಗಿ ಇಡೀ ಜಗತ್ತಿನ ಕಣ್ಣು ಭಾರತದ ಮೇಲೆ ನೆಟ್ಟಿದೆ. ಐಸಿಸಿ ಕೂಡ ಇದೇ ಕಾರಣಕ್ಕೆ ವಿಶ್ವಕಪ್ ವಿಜೇತ ತಂಡಗಳ ನಾಯಕರನ್ನು ಫೈನಲ್ ಪಂದ್ಯಕ್ಕಾಗಿ ಆಹ್ವಾನಿಸಿದೆ. ಹೀಂಗಾದ್ರೆ ಈಗ ಜೈಲಲ್ಲಿ ಪರದಾಡುತ್ತಿರುವ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಇಮ್ರಾನ್ ಖಾನ್ ಗತಿ ಏನು?

ಭಾರತ & ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್ ಅಖಾಡ ರಂಗೇರಿದೆ. 20 ವರ್ಷಗಳ ಹಿಂದೆ ಕಂಡಿದ್ದ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿ ನಿಂತಿದೆ. ಈಗಾಗಲೇ ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣ ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಕ್ರಿಕೆಟ್ ಲೋಕದ ಗಣ್ಯರು & ವಿವಿಧ ಕ್ಷೇತ್ರಗಳ ಪ್ರಮುಖರು ಪಂದ್ಯ ವೀಕ್ಷಣೆಗಾಗಿ ಬರಲಿದ್ದಾರೆ. ಭಾರತಕ್ಕೆ ಎರಡು ವಿಶ್ವಕಪ್ ಗೆದ್ದು ಕೊಟ್ಟ ಕ್ಯಾಪ್ಟನ್ಸ್ ಕಪಿಲ್ ದೇವ್ & ಮಹೇಂದ್ರ ಸಿಂಗ್ ಧೋನಿ ಕೂಡ ಫೈನಲ್ ಮ್ಯಾಚ್‌ಗೆ ಬರ್ತಿದ್ದಾರೆ. ಇದೇ ರೀತಿ, ಇಡೀ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಎಲ್ಲಾ ದೇಶಗಳ ಕ್ರಿಕೆಟ್ ತಂಡದ ನಾಯಕರು ಬರ್ತಿದ್ದಾರೆ. ಆದ್ರೆ ಪಾಕಿಸ್ತಾನ ನಾಯಕನ ಬಗ್ಗೆಯೇ ಅನುಮಾನ ಶುರುವಾಗಿದೆ.

ICC Invited ODI World Cup Winning Team Captains But What About Imran Khan

ಜೈಲಿನಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕ!

ಅದ್ಯಾವ ಘಳಿಗೆಯಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಆದರೋ ಗೊತ್ತಿಲ್ಲ, ಪದೇ ಪದೆ ಸಂಕಷ್ಟದ ಸುಳಿಗೆ ಸಿಲುಕಿ ನರಳುತ್ತಿದ್ದಾರೆ. ಇಮ್ರಾನ್ ವಿರುದ್ಧ ಪಾಕಿಸ್ತಾನದಲ್ಲಿ ಈಗ, ಹತ್ತಿರ ಹತ್ತಿರ 150ಕ್ಕೂ ಹೆಚ್ಚು ಕೇಸ್ ಇವೆ. ಹೀಗಿದ್ದಾಗಲೆ ಐಸಿಸಿ ಈಗ ಎಲ್ಲಾ ನಾಯಕರಿಗೆ ಆಹ್ವಾನ ನೀಡಿ, ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮೆರಗು ನೀಡಲು ಮುಂದಾಗಿದೆ. ಆದರೂ, 1992ರಲ್ಲಿ ಪಾಕಿಸ್ತಾನಕ್ಕೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಇಮ್ರಾನ್ ಖಾನ್‌ಗೆ, ಭಾರತದಲ್ಲಿ ನಡೆಯುತ್ತಿರುವ ಮ್ಯಾಚ್‌ಗೆ ಬರೋದಕ್ಕೆ ಆಗೋದಿಲ್ಲ ಎನ್ನಲಾಗಿದೆ.

10 ವರ್ಷವಾದರೂ ಹೊರಗೆ ಬರಲ್ವಾ ಇಮ್ರಾನ್?

ಈಗ ಇಮ್ರಾನ್ ಖಾನ್ ವಿರುದ್ಧ ಹಾಕಿರುವ ಕೇಸ್‌ಗಳ ಲೆಕ್ಕಾಚಾರ ನೋಡಿದರೆ. ಇನ್ನೂ 10 ವರ್ಷ ಕಳೆದರೂ ಪಾಕಿಸ್ತಾನ ಕ್ರಿಕೆಟ್ ಟೀಂನ ಮಾಜಿ ನಾಯಕ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಜೈಲಿನಿಂದ ಹೊರಗೆ ಬರುವ ಲಕ್ಷಣ ಇಲ್ಲ. ಇಂತಹ ಸ್ಥಿತಿಯಲ್ಲಿ ಐಸಿಸಿ ಆಹ್ವಾನ ಸಿಕ್ಕರೂ ಇಮ್ರಾನ್ ಖಾನ್ ಭಾರತದಲ್ಲಿ ನಡೆಯುತ್ತಿರುವ, 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನೋಡಲು ಬರಲು ಆಗಲ್ಲ. ಹೀಗೆ, ಇಮ್ರಾನ್ ಫ್ಯಾನ್ಸ್ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದಾರೆ.

ಒಟ್ನಲ್ಲಿ ಇಮ್ರಾನ್ ಖಾನ್ ಸಾಲು ಸಾಲು ಸಂಕಷ್ಟ ಎದುರಿಸುತ್ತಿದ್ದಾರೆ. ಒಂದು ಕಾಲದಲ್ಲಿ, 1992ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟು ಪಾಕಿಸ್ತಾನಕ್ಕೆ ಇಮ್ರಾನ್ ಹೀರೋ ಆಗಿದ್ದರು. ಈ ಹಿನ್ನೆಲೆಯಲ್ಲಿ ರಾಜಕೀಯಕ್ಕೂ ಬಂದು ಮಿಂಚಲು ನೋಡಿದರು. ಆದರೆ ಈಗ ಆಗಿರುವುದೇ ಬೇರೆ, ಹಲವು ತಿಂಗಳಿಂದ ಇಮ್ರಾನ್ ಜೈಲಿನಲ್ಲೇ ನರಳುತ್ತಿದ್ದಾರೆ. ಕನಿಷ್ಠ ಅವರ ಮನೆಯ ಸದಸ್ಯರನ್ನು ನೋಡುವುದಕ್ಕೂ ಪರದಾಡುವ ಸ್ಥಿತಿ ಇದೆ. ಹೀಗಿದ್ದಾಗ, ಇಮ್ರಾನ್ ವಿಶ್ವಕಪ್ ಫೈನಲ್ ಮ್ಯಾಚ್ ನೋಡಲು ಬರುತ್ತಾರಾ? ಎಂಬ ಕುಹಕದ ಮಾತುಗಳು ಕೂಡ ಎಲ್ಲೆಲ್ಲೂ ಓಡಾಡುತ್ತಿವೆ.

ICC Invited ODI World Cup Winning Team Captains But What About Imran Khan

ಇಮ್ರಾನ್ ಖಾನ್ ಕಂಬಿ ಎಣಿಸುತ್ತಿರುವುದು ಏಕೆ?

ಆರಂಭದಲ್ಲಿ ಭ್ರಷ್ಟಾಚಾರ ಆರೋಪದ ಅಡಿ ಜೈಲು ಸೇರಿದ್ದ ಇಮ್ರಾನ್‌ಗೆ ರಿಲೀಫ್ ಸಿಕ್ಕು ರಿಲೀಸ್ ಆಗಿದ್ರು. ಹೀಗೆ ಬಿಡುಗಡೆ ಆಗುತ್ತಿದ್ದಂತೆ ಮತ್ತೆ ಬಂಧಿಸಲಾಗಿತ್ತು. ಭ್ರಷ್ಟಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಮ್ರಾನ್‌ ಖಾನ್ ಆಗಸ್ಟ್‌ 5ರಿಂದ ಪಂಜಾಬ್‌ ಪ್ರಾಂತ್ಯದ ಅಟ್ಟೋಕ್‌ ಕಾರಾಗೃಹದಲ್ಲಿ ಇದ್ದರು. ಆದರೆ ಆಗಸ್ಟ್‌ 29ರಂದು ಇಸ್ಲಾಮಾಬಾದ್‌ ಹೈಕೋರ್ಟ್‌ ಭ್ರಷ್ಟಾಚಾರ ಪ್ರಕರಣದ ಶಿಕ್ಷೆ ತೀರ್ಪನ್ನೇ ಅಮಾನತು ಮಾಡಿತ್ತು. ಹೀಗಾಗಿ ಇನ್ನೇನು ಇಮ್ರಾನ್ ಜೈಲಿಂದ ರಿಲೀಸ್ ಆಗಿ ಹೊರಗೆ ಬರ್ತಾರೆ ಅಂತಾ ಅವರ ಅಭಿಮಾನಿಗಳು & ಬೆಂಬಲಿಗರು ನಿರೀಕ್ಷೆಯ ಇಟ್ಟುಕೊಂಡಿದ್ದರು. ಆದರೆ ರಹಸ್ಯ ದಾಖಲೆಗಳ ಸೋರಿಕೆ ಪ್ರಕರಣದ ಅಡಿ, ಇಮ್ರಾನ್ ಖಾನ್ ಜೈಲಿನಲ್ಲಿಯೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+