India vs New Zealand: ಬೆಂಗಳೂರಿನಲ್ಲಿ ಭಾರತ vs ನ್ಯೂಜಿಲೆಂಡ್ ಟೆಸ್ಟ್; ಟಿಕೆಟ್ ಖರೀದಿ ಹೇಗೆ?

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ, ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿದೆ. ಅಕ್ಟೋಬರ್ 16 ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಮೊದಲನೇ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಬೆಂಗಳೂರಿನ ಕ್ರೀಡಾಸಕ್ತರು ಕಾಯುತ್ತಿದ್ದು, ನಾಳೆಯಿಂದ (ಶನಿವಾರ) ಟಿಕೆಟ್ ಮಾರಾಟ ಆರಂಭವಾಗಲಿದೆ.

ಅಕ್ಟೋಬರ್ 5ರಿಂದ ಮೊದಲ ಟೆಸ್ಟ್ ಪಂದ್ಯದ ಟಿಕೆಟ್ ಮಾರಾಟ ಆರಂಭಿಸಲಾಗುತ್ತಿದೆ. ಆನ್‌ಲೈನ್ ಟಿಕೆಟ್ ಮಾರಾಟ ಶನಿವಾರ ಬೆಳಿಗ್ಗೆ 10 ಗಂಟೆಗೆ ಶುರುವಾಗಲಿದೆ. ಪೇಟಿಎಂ (Paytm) ಇನ್‌ಸೈಟರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಟೆಸ್ಟ್ ಪಂದ್ಯಕ್ಕೆ ಟಿಕೆಟ್‌ಗಳನ್ನು ಖರೀದಿ ಮಾಡಬಹುದು. ಒಮ್ಮೆ ಟಿಕೆಟ್ ಖರೀದಿ ಮಾಡಿದರೆ 5 ದಿನಗಳ ಪಂದ್ಯಕ್ಕೆ ಪ್ರವೇಶ ಸಿಗಲಿದೆ.

How to get India vs New Zealand 1st Test Tickets Bengaluru

ಟಿಕೆಟ್ ಬೆಲೆ ಎಷ್ಟಿದೆ?

ಮೊದಲ ಟೆಸ್ಟ್ ಪಂದ್ಯದ ಟಿಕೆಟ್ ಬೆಲೆಗಳು 600 ರೂಪಾಯಿಗಳಿಂದ ಆರಂಭವಾಗಲಿದ್ದು, ಗರಿಷ್ಠ ಟಿಕೆಟ್ ದರ 7,500 ರೂಪಾಯಿ ಆಗಿದೆ. ಎಚ್‌ ಕೆಳಗಿನ ಸ್ಟಾಂಡ್ ಟಿಕೆಟ್ ಬೆಲೆ 600 ರೂಪಾಯಿ, ಸಿ ಸ್ಟಾಂಡ್ 1,200 ರೂಪಾಯಿ, ಬಿ ಸ್ಟಾಂಡ್ 2,000 ರೂಪಾಯಿ, ಡಿ ಕಾರ್ಪೊರೇಟ್ 2000 ರೂಪಾಯಿ, ಎನ್‌ ಸ್ಟಾಂಡ್ 2,500 ರೂಪಾಯಿ, ಪಿ4 ಸ್ಟಾಂಡ್ ಟಿಕೆಟ್ ಬೆಲೆ 2,000 ರೂಪಾಯಿಗಳಾಗಿದೆ. ಪಿ ಟೆರೇಸ್ ಟಿಕೆಟ್‌ಗಳ ಬೆಲೆಯನ್ನು 7,500 ರೂಪಾಯಿಗೆ ನಿಗದಿ ಮಾಡಲಾಗಿದೆ.

2022ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ನಡೆದಿತ್ತು. ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 238 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. 2 ವರ್ಷಗಳ ಬಳಿಕ ಭಾರತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಅಭಿಮಾನಿಗಳು ಟೆಸ್ಟ್ ಪಂದ್ಯ ವೀಕ್ಷಿಸಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡಕ್ಕೆ ಫೈನಲ್ ತಲುಪಲು ಇನ್ನುಳಿದ 8 ಟೆಸ್ಟ್‌ಗಳಲ್ಲಿ 4 ಟೆಸ್ಟ್ ಪಂದ್ಯಗಳನ್ನು ಗೆದ್ದು, ಒಂದು ಟೆಸ್ಟ್ ಡ್ರಾ ಮಾಡಿಕೊಳ್ಳಬೇಕಿದೆ. ನ್ಯೂಜಿಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವುದು ಖಚಿತವಾಗಲಿದೆ.

ತವರಿನಲ್ಲಿ ಭಾರತದ ಎದುರು ಯಾವ ತಂಡಗಳು ಕೂಡ ಗೆಲ್ಲುವುದು ಅಷ್ಟು ಸುಲಭವಲ್ಲ. ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಸೋತ ಬಳಿಕ, ಭಾರತದ ವಿರುದ್ಧ ಟೆಸ್ಟ್ ಸರಣಿ ಆಡಲು ಆಗಮಿಸುತ್ತಿದೆ. ಬಾಂಗ್ಲಾದೇಶ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಮಾಡಿರುವ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿದ್ದು, ಕಿವೀಸ್ ವಿರುದ್ಧ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+