IPL 2025 CSK vs MI: ಹಾರ್ದಿಕ್‌ ಪಾಂಡ್ಯ ಬ್ಯಾನ್‌! ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ನಾಯಕ ಯಾರು

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಐಪಿಎಲ್‌ನಲ್ಲಿ ಬಿಸಿಸಿಐ ಹಲವು ನಿಯಮಗಳಲ್ಲಿ ಬದಲಾವಣೆ ಮಾಡಿದೆ. ನಿಧಾನಗತಿಯ ಓವರ್-ರೇಟ್ ಕಾರಣದಿಂದಾಗಿ ನಾಯಕರು ಇನ್ನು ಮುಂದೆ ಪಂದ್ಯದಿಂದ ನಿಷೇಧವನ್ನು ಎದುರಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಅದಕ್ಕೆ ಬದಲಾಗಿ ಡಿಮೆರಿಟ್ ಅಂಕಗಳನ್ನು ಪಡೆಯುತ್ತಾರೆ ಎಂದು ತಿಳಿಸಿದ್ದು, ತೀವ್ರ ಸಂದರ್ಭಗಳಲ್ಲಿ ಮಾತ್ರ ನಿಷೇಧ ವಿಧಿಸಲಾಗುತ್ತದೆ ಎಂದು ಹೇಳಿದೆ.

ಆದರೆ ಕಳೆದ ಬಾರಿ ಐಪಿಎಲ್‌ನಲ್ಲಿ ಮೂರು ಪಂದ್ಯಗಳಲ್ಲಿ ನಿಧಾನಗತಿಯ ಓವರ್ ರೇಟ್‌ನಿಂದಾಗಿ ಹಾರ್ದಿಕ್ ಪಾಂಡ್ಯಗೆ ಒಂದು ಪಂದ್ಯದಲ್ಲಿ ನಿಷೇಧ ವಿಧಿಸಲಾಗಿದೆ. ಲೀಗ್ ಹಂತದಲ್ಲೇ ಮುಂಬೈ ಇಂಡಿಯನ್ಸ್ ಹೊರಬಿದ್ದ ಕಾರಣ, ಹಾರ್ದಿಕ್ ಪಾಂಡ್ಯ ಮೇಲಿನ ನಿಷೇಧ ಈ ಆವೃತ್ತಿಗೆ ಮುಂದುವರೆಯಲಿದ್ದು, ಮೊದಲ ಪಂದ್ಯದಿಂದ ಪಾಂಡ್ಯ ಹೊರಗುಳಿಯಲಿದ್ದಾರೆ.

hardik panyda ban for mi vs csk match who will new captain ipl 2025

ಮುಂಬೈ ಇಂಡಿಯನ್ಸ್ ನಾಯಕ ಯಾರು?

ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲ ಅನಿವಾರ್ಯವಾಗಿ ಹೊರಗುಳಿಯಬೇಕಾಗುತ್ತದೆ. ಮಾರ್ಚ್ 23ರಂದು, ಭಾನುವಾರ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಈ ಪಂದ್ಯಕ್ಕೆ ಪಾಂಡ್ಯ ಅಲಭ್ಯರಾಗಿದ್ದು ಅವರ ಬದಲಾಗಿ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಲಿದ್ದಾರೆ.

ಮುಂಬೈಗೆ ಡಬಲ್ ಶಾಕ್!

ಕಳೆದ ಬಾರಿ ಐಪಿಎಲ್‌ನಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಆದರೆ ಮೊದಲ ಪಂದ್ಯದಲ್ಲಿ ಮುಂಬೈಗೆ ಡಬಲ್ ಶಾಕ್ ಸಿಕ್ಕಿದೆ. ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇನ್ನೂ ಫಿಟ್ ಆಗಿಲ್ಲದ ಕಾರಣ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ, ಹಾರ್ದಿಕ್ ಪಾಂಡ್ಯ ಕೂಡ ಮೊದಲ ಪಂದ್ಯ ಆಡದ ಕಾರಣ ಭಾರಿ ಹಿನ್ನಡೆಯಾಗಲಿದೆ.

ಚೆನ್ನೈನಲ್ಲೇ ಈ ಪಂದ್ಯ ನಡೆಯುವ ಕಾರಣ ಸಿಎಸ್‌ಕೆ ಮೊದಲ ಪಂದ್ಯದಲ್ಲಿ ಫೇವರಿಟ್ ಎನಿಸಿಕೊಂಡಿದೆ. ಎಂಎಸ್ ಧೋನಿಯನ್ನು ಮತ್ತೊಮ್ಮೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿಎಸ್‌ಕೆ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡದೇ ಇದ್ದರೂ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಿದ್ದು ಉತ್ತಮ ಆರಂಭ ಪಡೆಯುವ ವಿಶ್ವಾಸದಲ್ಲಿದೆ.

ಸಿಎಸ್‌ಕೆ vs ಎಂಐ ಪಂದ್ಯಕ್ಕೆ ಸಂಭಾವ್ಯ ಆಡುವ ಬಳಗ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಬಿನ್ ಮಿಂಜ್‌ (ವಿಕೆಟ್ ಕೀಪರ್), ದೀಪಕ್ ಚಾಹರ್, ಕರಣ್ ಶರ್ಮಾ, ಮುಜೀಬ್ ಉರ್ ರೆಹಮಾನ್, ಟ್ರೆಂಟ್ ಬೌಲ್ಟ್.

ಇಂಪ್ಯಾಕ್ಟ್ ಪ್ಲೇಯರ್: ರಾಜ್ ಬಾವ, ಸತ್ಯನಾರಾಯಣ ರಾಜು, ಅಶ್ವನಿ ಕುಮಾರ್.

ಸಿಎಸ್‌ಕೆ: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಶಿವಂ ದುಬೆ, ಡೆವೋನ್ ಕಾನ್ವೆ, ದೀಪಕ್ ಹೂಡಾ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಮತೀಶ ಪತಿರಾನ, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮುಖೇಶ್ ಚೌಧರಿ.

ಇಂಪ್ಯಾಕ್ಟ್ ಪ್ಲೇಯರ್: ಶ್ರೇಯಸ್ ಗೋಪಾಲ್, ಕಮಲೇಶ್ ನಾಗರಕೋಟಿ, ರವಿಚಂದ್ರನ್ ಅಶ್ವಿನ್, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+