Hardik Pandya: ಹೋಟೆಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡ ಹುಡುಗಿ ಯಾರು? ಫೋಟೋ ಭಾರೀ ವೈರಲ್
Hardik Pandya: ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ 2026 ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಈ ಗೆಲುವಿನ ಸಂಭ್ರಮದ ನಡುವೆಯೇ ಟೀಂ ಇಂಡಿಯಾ ಆಟಗಾರರೊಂದಿಗೆ ಯುವತಿಯೊಬ್ಬಳು ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ಮಧ್ಯೆ ಹಾರ್ದಿಕ್ ಪಾಂಡ್ಯ ಅವರಿಗೆ ಸಂಬಂಧಿಸಿದಂತೆ ಯುವತಿಯೊಬ್ಬಳು ಹೋಟೆಲ್‌ನಿಂದ ಫೋಟೋ ಹಂಚಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಆ ಚಿತ್ರದಲ್ಲಿ ಆಕೆ ಒಂದು ಕೈಯಿಂದ ಮುಖವನ್ನು ಮುಚ್ಚಿಕೊಂಡಿರುವಂತೆ ಕಾಣಿಸುತ್ತಿದ್ದು, ಇದನ್ನು ಕಂಡ ನೆಟ್ಟಿಗರು ವಿವಿಧ ರೀತಿಯಲ್ಲಿ ಕಲ್ಪನೆ ಮಾಡಿಕೊಂಡಿದ್ದಾರೆ. ಈಗಾಗಲೇ ಹಾರ್ದಿಕ್ ಪಾಂಡ್ಯ ಅವರಿಗೆ ಮಹಿಕಾ ಎಂಬ ಗರ್ಲ್‌ಫ್ರೆಂಡ್ ಇದ್ದಾರೆ ಎಂಬ ಸುದ್ದಿಗಳಿರುವ ಸಂದರ್ಭದಲ್ಲೇ, ಬೇರೊಬ್ಬ ಯುವತಿ ಜೊತೆ ಹೋಟೆಲ್‌ನಲ್ಲಿ ಕಾಣಿಸಿಕೊಂಡಿರುವುದು ಗೊಂದಲ ಸೃಷ್ಟಿಸಿದೆ.

ಹಾರ್ದಿಕ್ ಪಾಂಡ್ಯ ಜೊತೆ ಯುವತಿ
ಆದರೆ, ಈ ಚಿತ್ರ ನಿಜವಾದ ಫೋಟೋ ಅಲ್ಲ, ಕೃತಕ ಬುದ್ಧಿಮತ್ತೆ (AI) ಮೂಲಕ ತಯಾರಿಸಲಾದ ಡಿಜಿಟಲ್ ಫೋಟೋ ಆಗಿರಬಹುದು ಎಂಬ ಮಾತುಗಳು ಹರಿದಾಡುತ್ತಿವೆ. ಈ ಫೋಟೋವನ್ನು maya_suui ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಆ ಖಾತೆಯಲ್ಲಿ ಹೆಚ್ಚಿನದಾಗಿ ಎಐ ಆಧಾರಿತ ಡಿಜಿಟಲ್ ಅವತಾರ್‌ಗಳು ಹಾಗೂ ಎಡಿಟ್ ಮಾಡಿದ ಚಿತ್ರಗಳೇ ಕಾಣಿಸುತ್ತವೆ. ಈ ಖಾತೆಗೆ 3,00,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಕ್ಯಾಪ್ಶನ್‌ನಲ್ಲಿ ಏನಿದೆ ಗೊತ್ತಾ?
ಚಿತ್ರದಲ್ಲಿನ ಲೈಟಿಂಗ್ ಮತ್ತು ಶ್ಯಾಡೋಗಳು ಅತ್ಯಂತ ನಿಖರವಾಗಿ ಹೊಂದಿಸಿರುವುದರಿಂದ, ಮೊದಲು ನೋಡುವವರಿಗೆ ಇದು ನಿಜವಾದ ಫೋಟೋ ಅನ್ನಿಸುತ್ತದೆ. ಈ ಪೋಸ್ಟ್‌ಗೆ ನೀಡಿರುವ "Manifestation is REAL" ಎಂಬ ಕ್ಯಾಪ್ಶನ್ ಕೂಡ ಗೊಂದಲ ಹೆಚ್ಚಿಸಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಕ್ರಿಯೇಟರ್‌ಗಳು ತಮ್ಮ ಮೆಚ್ಚಿನ ಸೆಲೆಬ್ರಿಟಿಗಳೊಂದಿಗೆ ಇರುವಂತೆ ತೋರಿಸುವ ಎಐ ಚಿತ್ರಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.
ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನ ಈಗಾಗಲೇ ಸಾಕಷ್ಟು ಚರ್ಚೆಯಲ್ಲಿರುವ ಹಿನ್ನೆಲೆಯಲ್ಲಿ, ಅವರಿಗೆ ಸಂಬಂಧಿಸಿದ ಯಾವುದೇ ವಿಷಯಗಳು ಬೇಗನೇ ವೈರಲ್ ಆಗುತ್ತಿವೆ. ಇದೇ ಕಾರಣಕ್ಕೆ ಈ ಫೋಟೋ ಕೂಡ ಹೆಚ್ಚಿನ ಗಮನ ಸೆಳೆದಿದೆ ಎನ್ನಲಾಗುತ್ತಿದೆ.
ಹಾರ್ದಿಕ್ ಪಾಂಡ್ಯ ಅವರು ಭಾರತ ತಂಡ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮೂಲಕ ಅವರು ತಂಡಕ್ಕೆ ಮಹತ್ವದ ಕೊಡುಗೆ ನೀಡುತ್ತಾ ಬಂದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ, ಅವರು ಟಿ20 ಕ್ರಿಕೆಟ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿ ಅಲ್ಲಿಯೂ ಆಕ್ರಮಣಕಾರಿ ಆಟ ಆಡಿ ಗಮನ ಸೆಳೆದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಅವರು, ವೇಗವಾಗಿ ರನ್‌ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಟಿ20ಯಂತಹ ಟೂರ್ನಿಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಹಲವು ಪಂದ್ಯಗಳಲ್ಲಿ ಉತ್ತಮ ಫೀಲ್ಡಿಂಗ್ ಮಾಡಿ ರನ್‌ಗಳನ್ನು ತಡೆಹಿಡಿದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ.
ಇನ್ನೂ ಐಪಿಎಲ್‌ನಲ್ಲಿ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ಸು ಕಂಡಿರುವ ಅವರು, ಯುವ ಆಟಗಾರರಿಗೆ ಮಾದರಿಯಾಗಿಯಾಗಿದ್ದಾರೆ. ಗಾಯಗಳಿಂದ ಕೆಲವೊಮ್ಮೆ ಕಷ್ಟ ಅನುಭವಿಸಿದರೂ, ಹಾರ್ದಿಕ್ ಪಾಂಡ್ಯ ಮತ್ತೆ ಬೇಗನೇ ಚೇತರಿಸಿಕೊಂಡು ತಂಡಕ್ಕೆ ಮರಳಿದ ಉದಾಹರಣೆಗಳಿವೆ. ಹೀಗೆ ಆತ್ಮವಿಶ್ವಾಸ, ಶ್ರಮ ಹಾಗೂ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳದಿದ್ದಾರೆ.












Click it and Unblock the Notifications