Hardik Pandya: ಪತ್ನಿಗೆ ವಿಚ್ಛೇದನ ಕೊಟ್ಟರೆ 70% ಆಸ್ತಿ ಕಳೆದುಕೊಳ್ಳಲಿದ್ದಾರೆ ಹಾರ್ದಿಕ್ ಪಾಂಡ್ಯ
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ಆವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದರು. ಮುಂಬೈ ಇಂಡಿಯನ್ಸ್ ಲೀಗ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಅಭಿಯಾನ ಮುಗಿಸಿದೆ.
ಅವರ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದಿದೆ. ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ವಹಿಸಿಕೊಂಡಿದ್ದರಿಂದ ಅಭಿಮಾನಿಗಳು ಕೋಪಗೊಂಡಿದ್ದರು, ಪಾಂಡ್ಯ ಅವರಿಗೆ ತವರಿನ ತಂಡದ ಅಭಿಮಾನಿಗಳಿಂದಲೇ ನಿಂದನೆ, ವಿರೋಧ ವ್ಯಕ್ತವಾಗಿತ್ತು.

ಈಗ ಟಿ20 ವಿಶ್ವಕಪ್ ಆಡಲು ಸಜ್ಜಾಗುತ್ತಿರುವ ಪಾಂಡ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಈಗಾಗಲೇ ಬೇರ್ಪಟ್ಟಿದ್ದಾರೆ ಮತ್ತು ಶೀಘ್ರ ವಿಚ್ಛೇದನ ಪಡೆಯಬಹುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.
ಸರ್ಬಿಯಾದ ಮಾಡೆಲ್ ಸ್ಟಾಂಕೋವಿಕ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪಾಂಡ್ಯ ಎಂಬ ಹೆಸರನ್ನು ತೆಗೆದುಹಾಕಿದ್ದಾರೆ ಎಂದು ವದಂತಿಗಳು ಹಬ್ಬಿವೆ. ಇಬ್ಬರೂ ಇತ್ತೀಚೆಗೆ ಪರಸ್ಪರ ಯಾವುದೇ ಚಿತ್ರಗಳನ್ನು ಹಂಚಿಕೊಂಡಿಲ್ಲ ಮತ್ತು ಮಾರ್ಚ್ 4 ರಂದು ಪಾಂಡ್ಯ ಅವರ ಜನ್ಮದಿನದಂದು ಅವರ ಹೆಂಡತಿಗೆ ಸ್ಟೇಟಸ್ ಅನ್ನು ಸಹ ಪೋಸ್ಟ್ ಮಾಡಿಲ್ಲ ಎಂದು ಬಳಕೆದಾರರು ಹೇಳಿದ್ದಾರೆ.
ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿ ಪಾಂಡ್ಯ
ವದಂತಿಗಳ ಪ್ರಕಾರ ಪಾಂಡ್ಯ ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದರೆ ಜೀವನಾಂಶದ ಕಾರಣದಿಂದಾಗಿ 70% ಆಸ್ತಿಯನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಹಾರ್ದಿಕ್ ಪಾಂಡ್ಯ ಅವರು ಜನವರಿ 20, 2020 ರಂದು ನತಾಶಾ ಸ್ಟಾಂಕೋವಿಕ್ ಅವರಿಗೆ ಪ್ರಪೋಸ್ ಮಾಡಿದ್ದರು ಮತ್ತು ಇಬ್ಬರಿಗೂ ಜುಲೈ 30, 2020 ರಂದು ಗಂಡು ಮಗು ಜನಿಸಿತ್ತು. ಕಳೆದ ವರ್ಷ ಪ್ರೇಮಿಗಳ ದಿನದಂದು ಉದಯಪುರದಲ್ಲಿ ನಡೆದ ಸಮಾರಂಭದಲ್ಲಿ ವಿವಾಹ ಶಾಸ್ತ್ರಗಳನ್ನು ಮಾಡಿಕೊಂಡಿದ್ದರು.
ಆರ್ಥಿಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಅವರು ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರ್ಪಡೆಯಾಗಿದ್ದರು ಎನ್ನುವ ವದಂತಿಗಳು ಕೂಡ ಇದೆ. ಒಂದಾದ ಮೇಲೊಂದರಂತೆ ಪಾಂಡ್ಯ ಅವರಿಗೆ ಕಷ್ಟ ಎದುರಾಗಿತ್ತಿದೆ.
ವಿಚ್ಛೇದನ ವದಂತಿಗಳ ಬಗ್ಗೆ ಇಬ್ಬರೂ ಕೂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಟಿ20 ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಈ ವದಂತಿಗಳು ಪಾಂಡ್ಯ ಅವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ ಟಿ20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಾತ್ರವಲ್ಲದೆ ಅವರು ತಂಡದ ಉಪನಾಯಕನ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ.












Click it and Unblock the Notifications