ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಪಂದ್ಯ ಗೆದ್ದ ಬಳಿಕ ಮೈದಾನದಲ್ಲಿಯೇ ಕಣ್ಣೀರು; ಕಾರಣ ಹಂಚಿಕೊಂಡ ಹಾರ್ದಿಕ್ ಪಾಂಡ್ಯ!

|
Google Oneindia Kannada News

ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಗೆದ್ದ ನಂತರ, ಪಾಂಡ್ಯ ತನ್ನ ತಂದೆಯನ್ನು ನೆನೆದು ಭಾವುಕರಾದರು ಮತ್ತು ಮೈದಾನದಲ್ಲಿಯೇ ಕಣ್ಣೀರು ಹಾಕುತ್ತಾ ಅಳಲು ಪ್ರಾರಂಭಿಸಿದರು. ಪಂದ್ಯದ ಬಳಿಕ ಅವರು ಅಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಭಾರತವು ಭಾನುವಾರ ಪಾಕಿಸ್ತಾನದ ವಿರುದ್ಧ ಟಿ-20 ವಿಶ್ವಕಪ್ 2022 ಚೊಚ್ಚಲ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಭಾರತದ ಪರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು. ಮೊದಲು 30 ರನ್ ನೀಡಿ ಮೂರು ವಿಕೆಟ್ ಕಬಳಿಸಿದ ಪಾಂಡ್ಯ ನಂತರ 40 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಗುರಿ ತಲುಪಿಸಿದರು.

ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ಗಳಿಸಿದರು. ಕೊಹ್ಲಿ 53 ಎಸೆತಗಳಲ್ಲಿ 82 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರು ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಇವರಿಬ್ಬರು ಐದನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟ ನೀಡಿದರು. ಪಂದ್ಯ ಗೆದ್ದ ನಂತರ ತಂದೆಯನ್ನು ನೆನೆದು ಭಾವುಕರಾದ ಪಾಂಡ್ಯ ಮೈದಾನದಲ್ಲಿಯೇ ಅಳಲು ತೋಡಿಕೊಂಡರು.

 ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಗಾಯಗೊಂಡ ದಿನಗಳನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಗಾಯಗೊಂಡ ದಿನಗಳನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ

ನನ್ನ ತಂದೆ ನನಗಾಗಿ ಮಾಡಿದ್ದನ್ನು ನನಗೆ ಮಾಡಲು ಸಾಧ್ಯವಿಲ್ಲ

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಹಾರ್ದಿಕ್ ಪಾಂಡ್ಯ, 'ನಾನು ನನ್ನ ತಂದೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ನಾನು ನನ್ನ ತಂದೆಗಾಗಿ ಅಳಲಿಲ್ಲ. ನಾನು ನನ್ನ ಮಗನನ್ನು ಪ್ರೀತಿಸುತ್ತೇನೆ, ಆದರೆ ನನ್ನ ತಂದೆ ನನಗಾಗಿ ಮಾಡಿದ್ದನ್ನು ನಾನು ಮಾಡಲು ಸಾಧ್ಯವಾಗುತ್ತದೆಯೇ ಎಂದು ನನಗೆ ತಿಳಿದಿಲ್ಲ. ತನ್ನ ಆರೂವರೆ ವರ್ಷದ ಮಗುವಿನ ಕನಸನ್ನು ನನಸು ಮಾಡಲು ಬೇರೆ ಊರಿಗೆ ಬಂದಿದ್ದ. ನಾನು ಇಂದು ಇರುವ ಸ್ಥಿತಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ. ಹಾಗಾಗಿ ಈ ಇನ್ನಿಂಗ್ಸ್ ಅವರದ್ದು ಎಂದು ಕಣ್ಣೀರು ಹಾಕಿದರು,

Hardik Pandya gets emotional while remembering his late father after Indiaswin over Pakistan

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್, 'ನಾನು ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ. ಅವರು ನನಗೆ ಅವಕಾಶ ನೀಡದಿದ್ದರೆ, ನಾನು ಇಂದು ಇಲ್ಲಿ ನಿಲ್ಲುತ್ತಿರಲಿಲ್ಲ. ಅವರು ಅನೇಕ ತ್ಯಾಗಗಳನ್ನು ಮಾಡಿದರು. ಅವರು ತಮ್ಮ ಮಕ್ಕಳ ಸಲುವಾಗಿ ಬೇರೆ ನಗರದಲ್ಲಿ ನೆಲೆಸಿದರು. ಆಗ ನನಗೆ ಆರು ವರ್ಷ, ಅವರು ಬೇರೆ ನಗರದಲ್ಲಿ ನೆಲೆಸಿದರು ಮತ್ತು ಅಲ್ಲಿ ವ್ಯಾಪಾರ ಮಾಡಿದರು. ಇದು ದೊಡ್ಡ ವಿಚಾರ' ಹಾರ್ದಿಕ್ ಪಾಂಡ್ಯ ಎಂದು ಹೇಳಿದರು.

Hardik Pandya gets emotional while remembering his late father after Indiaswin over Pakistan

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಶಾನ್ ಮಸೂದ್ ಮತ್ತು ಇಫ್ತಿಕರ್ ಅಹ್ಮದ್ ಅವರ ಅತ್ಯುತ್ತಮ ಇನ್ನಿಂಗ್ಸ್‌ನ ನೆರವಿನಿಂದ ಭಾರತದ ಮುಂದೆ 160 ರನ್‌ಗಳ ಗುರಿಯನ್ನು ನೀಡಿತ್ತು. ಮಸೂದ್ 42 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 52 ರನ್ ಗಳಿಸಿದರು. ಇದೇ ಸಮಯದಲ್ಲಿ ಇಫ್ತಿಕರ್ ಅಹ್ಮದ್ 34 ಎಸೆತಗಳಲ್ಲಿ 51 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಭಾರತ ಕೊನೆಯ ಎಸೆತದಲ್ಲಿ ವಿಜಯ ಗಳಿಸಿಕೊಂಡಿತು.

English summary
Hardik Pandya gets emotional while remembering his late father after India's last-ball win over Pakistan Watch Video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X