Hardik Pandya: ಮತ್ತೆ ಪ್ರೀತಿಯಲ್ಲಿ ಬಿದ್ರಾ ಪಾಂಡ್ಯ? ಗಾಯಕಿ ಜೊತೆ ಡೇಟಿಂಗ್‌!

ನತಾಶಾ ಸ್ಟಾಂಕೋವಿಕ್ ಜೊತೆ ವಿಚ್ಛೇದನ ಘೋಷಣೆ ಮಾಡಿದ ಬಳಿಕ ಹಾರ್ದಿಕ್ ಪಾಂಡ್ಯ ಮತ್ತೆ ಪ್ರೀತಿಯಲ್ಲಿ ಬಿದ್ರಾ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಹಂಚಿಕೊಂಡಿರುವ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಅಭಿಮಾನಿಗಳು, ಪಾಂಡ್ಯ ಗಾಯಕಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ನತಾಸಾ ಸ್ಟಾಂಕೋವಿಕ್‌ನಿಂದ ಬೇರೆಯಾಗುತ್ತಿರುವುದಾಗಿ ಘೋಷಿಸಿದ ಒಂದು ತಿಂಗಳಲ್ಲೇ ಪಾಂಡ್ಯ ಬೇರೊಬ್ಬರ ಜೊತೆ ಕಾಣಿಸಿಕೊಂಡಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

hardik pandya dating jasmin walia rumours

ಹಾರ್ದಿಕ್ ಮತ್ತು ಜಾಸ್ಮಿನ್ ಇಬ್ಬರೂ ಗ್ರೀಸ್‌ನಲ್ಲಿ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಹೇಳುತ್ತಿದ್ದಾರೆ. ಒಂದೇ ರೀತಿಯ ಫೋಟೋಗಳು ನೋಡಿ ಇಬ್ಬರು ಒಂದೇ ಸ್ಥಳದಲ್ಲಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಅನುಮಾನಕ್ಕೆ ಕಾರಣವೇನು?

ಹಾರ್ದಿಕ್ ಮತ್ತು ಜಾಸ್ಮಿನ್ ಒಂದೇ ಪೂಲ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಜಾಸ್ಮಿನ್ ನೀಲಿ ಬಿಕಿಯಿನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಒಣಹುಲ್ಲಿನ ಟೋಪಿ ಮತ್ತು ದೊಡ್ಡ ಗಾತ್ರದ ಸನ್‌ಗ್ಲಾಸ್‌ ಧರಿಸಿ ಮಿಂಚಿದ್ದಾರೆ.

ಹಾರ್ದಿಕ್ ಪಾಂಡ್ಯ ಕೆನೆ ಬಣ್ಣದ ಪ್ಯಾಂಟ್, ಮಾದರಿಯ ಶರ್ಟ್ ಮತ್ತು ಸನ್‌ಗ್ಲಾಸ್‌ಗಳನ್ನು ಒಳಗೊಂಡಿರುವ ಕ್ಯಾಶುಯಲ್ ಮತ್ತು ಫ್ಯಾಶನ್ ಉಡುಪು ಧರಿಸಿ ಅದೇ ಕೊಳದ ಸುತ್ತಲೂ ನಡೆಯುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರು ಒಂದೇ ಸ್ಥಳದಲ್ಲಿದ್ದಾರೆ ಎನ್ನುವುದನ್ನು ಈ ಎರಡು ಪೋಸ್ಟ್‌ಗಳ ಮೂಲಕ ಅಭಿಮಾನಿಗಳು ಪತ್ತೆಹಚ್ಚಿದ್ದಾರೆ.

ಜಾಸ್ಮಿನ್ ಅವರು ಹಾರ್ದಿಕ್ ಪಾಂಡ್ಯ ಅವರು ಹಂಚಿಕೊಂಡಿರುವ ವಿಡಿಯೋವನ್ನು ಲೈಕ್‌ ಮಾಡಿರುವುದು ಅನುಮಾನ ಮತ್ತಷ್ಟು ಬಲವಾಗಲು ಕಾರಣವಾಗಿದೆ. ಹಾರ್ದಿಕ್ ಪಾಂಡ್ಯ ಜಾಸ್ಮಿನ್‌ರ ಬಿಕಿನಿ ಹಾಕಿರುವ ಪೋಸ್ಟ್‌ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ, ಇತ್ತೀಚೆಗೆ ಅವರು ಹಂಚಿಕೊಂಡ ಉಳಿದ ಫೋಟೊಗಳಿಗೆ ಲೈಕ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಇಬ್ಬರೂ ಒಬ್ಬರನ್ನೊಬ್ಬರ ಫಾಲೋ ಮಾಡುತ್ತಿರುವುದು ಕೂಡ ಗೊತ್ತಾಗಿದೆ.

ನತಾಶಾಗೆ ಮೋಸ ಆಯ್ತಾ?

ನತಾಶಾ ಮತ್ತು ಹಾರ್ದಿಕ್ ಪಾಂಡ್ಯ ಬೇರೆಯಾದಾಗ ಅಭಿಮಾನಿಗಳು ನತಾಶಾ ಮೇಲೆ ಮುಗಿಬಿದ್ದಿದ್ದರು. ಆಕೆ ಹಣಕ್ಕಾಗಿ ಪಾಂಡ್ಯರನ್ನು ಮದುವೆಯಾಗಿ ಈಗ ಡಿವೋರ್ಸ್ ಪಡೆಯುತ್ತಿದ್ದಾರೆ ಎಂದೆಲ್ಲಾ ಆರೋಪ ಮಾಡಿದ್ದರು. ಆದರೆ ನತಾಶಾ ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ, ಮಗ ಅಗಸ್ತ್ಯ ಜೊತೆ ಸೆರ್ಬಿಯಾಗೆ ತೆರಳಿದ್ದಾರೆ.

ಇತ್ತೀಚೆಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಮೋಸ ಹೋದ, ಮಾನಸಿಕ ಹಿಂಸೆ ಅನುಭವಿಸುವ ಮಾತುಗಳನ್ನು ಹಂಚಿಕೊಳ್ಳುವ ವಿಡಿಯೋಗಳಿಗೆ ಲೈಕ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದರಿಂದಾಗಿ ಪಾಂಡ್ಯ ವಿಚಾರದಲ್ಲಿ ನತಾಶಾ ಅವರೇ ಮೋಸ ಹೋಗಿದ್ದಾರಾ ಎನ್ನುವ ಅನುಮಾನ ಕೂಡ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+