ಮೊದಲ ಟೆಸ್ಟ್‌ ಪಂದ್ಯದಲ್ಲಿ ಯಾವ ಸ್ಪಿನ್ ಬೌಲರ್‌ಗೆ ಸಿಗಲಿದೆ ಸ್ಥಾನ? ಭಜ್ಜಿ ಹೇಳಿದ್ದೇನು?

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಶುಭಮನ್‌ ಗಿಲ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿಯಲಿದೆ. ಈ ವೇಳೆ ಯುವ ಆಟಗಾರರು ಅಬ್ಬರದ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಬೇಕಿದೆ. ಈ ವೇಳೆ ತಂಡದ ಸಂಯೋಜನೆ ಹೇಗಿರಲಿದೆ? ಯಾವ ಆಟಗಾರರಿಗೆ ಮ್ಯಾನೇಜ್ಮೆಂಟ್‌ ಮಣೆ ಹಾಕಲಿದೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಪ್ರಶ್ನೆಗೆ ಈಗ ಟೀಮ್ ಇಂಡಿಯಾ ಮಾಜಿ ಸ್ಪಿನ್ ಬೌಲರ್‌ ಹರ್ಭಜನ್ ಸಿಂಗ್ ಉತ್ತರ ನೀಡಿದ್ದಾರೆ.

ಇಂಗ್ಲೆಂಡ್‌ ಪ್ರವಾಸದ ಮೂಲಕ ಭಾರತ ಮುಂದಿನ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನ್ನು ಆರಂಭಿಸಲಿದೆ. ಈ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸ್ಪಿನ್ ಬೌಲರ್‌ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಹೀಗಾಗಿ ಇವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಸಹ ಮೂಡಿ ಬಂದಿವೆ. ಹೀಗಾಗಿ ಟೀಮ್ ಇಂಡಿಯಾ ಇವರ ಬದಲಿಗೆ ಯಾವ ಆಟಗಾರರನ್ನು ಹೇಗೆ ಬಳಸಿಕೊಳ್ಳಲಿದೆ ಎಂಬ ಪ್ರಶ್ನೆಗಳು ಎದ್ದಿವೆ.

Harbhajan Singh Backs Jadeja Kuldeep for India s Opening Test Against England

ಹೆಡಿಂಗ್ಲಿಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಎಷ್ಟು ವೇಗದ ಬೌಲರ್‌ಗಳಿಗೆ ಹಾಗೂ ಎಷ್ಟು ಸ್ಪಿನ್ ಬೌಲರ್‌ಗಳಿಗೆ ಅವಕಾಶ ನೀಡಬೇಕು ಎಂಬುದು ಚರ್ಚೆಯ ವಿಷಯವಾಗಿದೆ. ಈ ವಿಷಯದ ಬಗ್ಗೆ ಹರ್ಭಜನ್‌ ಸಿಂಗ್ ಟೀಮ್ ಇಂಡಿಯಾಕ್ಕೆ ಉತ್ತಮ ಸಲಹೆ ನೀಡಿದ್ದಾರೆ.

ಯಾರಿಗೆ ಸ್ಥಾನ?

ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಇಬ್ಬರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯಬೇಕು. ಅನುಭವಿ ರವೀಂದ್ರ ಜಡೇಜಾ ಹಾಗೂ ಕುಲ್‌ದೀಪ್‌ ಯಾದವ್ ತಂಡದಲ್ಲಿ ಸ್ಥಾನ ಪಡೆದರೆ ಬೆಸ್ಟ್‌. ಚೈನಾ ಮೆನ್ ಬೌಲರ್‌ ಕುಲ್‌ದೀಪ್ ಯಾದವ್ ಅವರಿಗೆ ತಂಡ ಸೇರಿಸಿಕೊಳ್ಳಬೇಕು. ಹೆಡಿಂಗ್ಲಿ ಪಿಚ್ ಕೊಂಚ ಸ್ಪಿನ್ ಬೌಲರ್‌ಗಳಿಗೆ ನೆರವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕುಲ್‌ದೀಪ್‌ ಪಂದ್ಯದ ಯಾವುದೇ ಪರಿಸ್ಥಿತಿಯಲ್ಲಾದ್ರೂ ವಿಕೆಟ್‌ ಪಡೆಯಬಲ್ಲ ಬೌಲರ್. ಪಂದ್ಯವನ್ನು ಗೆಲ್ಲಿಸಿಕೊಡಬಹುದಾ ಬೌಲರ್‌ಗಳಿಗೆ ಕುಲ್‌ದೀಪ್‌ಗೂ ಸ್ಥಾನ. ಪರಿಸ್ಥಿತಿಗಳು ಸ್ಪಿನ್ ಬೌಲರ್‌ಗಳಿಗೆ ನೆರವಾಗುವ ಹಾಗೆ ಇದ್ದರೆ, ನಿಜಕ್ಕೂ ಇವರಿಬ್ಬರೂ ಮಾರಕವಾಗಬಲ್ಲ ಪ್ಲೇಯರ್ಸ್‌. ಇನ್ನು ಈ ಇಬ್ಬರೂ ಆಟಗಾರರು ಯಾವುದೇ ಪಿಚ್‌ನಲ್ಲಿ ಸಂಘಟಿತ ದಾಳಿಯನ್ನು ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

Harbhajan Singh Backs Jadeja Kuldeep for India s Opening Test Against England

ಹರ್ಭಜನ್ ಕುಲದೀಪ್ ಯಾದವ್ ಅವರನ್ನು ಪಂದ್ಯ ವಿಜೇತ ಎಂದು ಬಣ್ಣಿಸಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ವಿಕೆಟ್ ಪಡೆಯಬಲ್ಲೆ ಎಂದು ಅವರು ನಂಬುತ್ತಾರೆ. ಪರಿಸ್ಥಿತಿಗಳು ಬದಲಾಗುತ್ತವೆಯೇ ಮತ್ತು ಸ್ಪಿನ್ನರ್‌ಗಳಿಗೆ ಎಷ್ಟು ಸಹಾಯ ಸಿಗುತ್ತದೆ ಎಂದು ನೋಡೋಣ ಎಂದು ಅವರು ಹೇಳಿದರು. ಆದರೆ ಇದು ಸಂಭವಿಸದಿದ್ದರೂ, ಈ ಇಬ್ಬರೂ ಯಾವುದೇ ಪಿಚ್‌ನಲ್ಲಿ ವಿಕೆಟ್ ಪಡೆಯಬಲ್ಲ ಬೌಲರ್‌ಗಳು ಎಂದು ನಾನು ಭಾವಿಸುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+