ವಿಶೇಷ ಚೇತನರಿಗೆ ಅವಮಾನ; ಕ್ಷಮೆಯಾಚಿಸಿದ ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ
ಭಾರತದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಅವರು ವಿಕಲಾಂಗ ವ್ಯಕ್ತಿಗಳನ್ನು ಅಪಹಾಸ್ಯ ಮಾಡುವ ವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಕ್ಷಮೆಯಾಚಿಸಿದ್ದಾರೆ.
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ರ ಫೈನಲ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದ ಬಳಿಕ, ಭಾರತ ಚಾಂಪಿಯನ್ಸ್ ತಂಡದ ಆಟಗಾರರಾದ ಹರ್ಭಜನ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಕುಂಟುತ್ತಾ ಮತ್ತು ತಮಾಷೆಯಿಂದ ನಡೆದುಕೊಂಡು ಬಂದಿದ್ದಾರೆ. ಇದು ವಿಕಲಾಂಗರು ನಡೆಯುವುದನ್ನು ಅಣಕಿಸುವಂತಿದೆ.

ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಮಾನಸಿ ಜೋಶಿ ಕ್ರಿಕೆಟಿಗರನ್ನು ಅವರ ವರ್ತನೆಗೆ ಟೀಕಿಸಿದ್ದಾರೆ, ಅವರ ಕ್ರಮಗಳು ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳಿಗೆ ಅಗೌರವ ಎಂದು ಹೇಳಿದ್ದಾರೆ. ಗೆಲುವಿನ ಖುಷಿಯಲ್ಲಿ ದುರುದ್ದೇಶವಿಲ್ಲದೇ ಈ ರೀತಿ ಮಾಡಿದ್ದಾರೆ ಎಂದರೂ, ಇದನ್ನು ಒಪ್ಪಲು ಸಾಧ್ಯವಿಲ್ಲ, ಸಮಾಜದ ಮೇಲೆ ಇಂತಹ ನಡವಳಿಕೆಗಳು ಕೆಟ್ಟ ಪರಿಣಾಮ ಬೀರುತ್ತವೆ ಎಂದಿದ್ದಾರೆ.
"ಈ ಜೋಕರ್‌ಗಳಿಗೆ ಪೋಲಿಯೊ ಹೊಂದಿರುವ ಜನರ ನಡಿಗೆಯ ಶೈಲಿಯನ್ನು ಅಪಹಾಸ್ಯ ಮಾಡುವುದು ಏಕೆ?" ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆ ಮಾಡಿದ್ದಾರೆ.
— Harbhajan Turbanator (@harbhajan_singh) July 15, 2024
ಕ್ಷಮೆಯಾಚನೆ ಮಾಡಿದ ಭಜ್ಜಿ
ವೈರಲ್ ವಿಡಿಯೋ ಬಗ್ಗೆ ಭಾರಿ ಟೀಕೆ ವ್ಯಕ್ತವಾದ ಬಳಿಕ ಹರ್ಭಜನ್ ಸಿಂಗ್ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದರು. ತಮ್ಮ ನಡವಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಕೇಳಿದರು.
"ನಾವು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ. ನಾವು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಗೌರವಿಸುತ್ತೇವೆ. ಈ ವಿಡಿಯೋ ಕೇವಲ 15 ದಿನಗಳ ಕಾಲ ನಿರಂತರ ಕ್ರಿಕೆಟ್ ಆಡಿದ ನಮ್ಮ ದೇಹದ ನೋವನ್ನು ಪ್ರತಿಬಿಂಬಿಸಲು ಆಗಿತ್ತು." ಎಂದು ಹೇಳಿದ್ದಾರೆ.
ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಸುರೇಶ್ ರೈನಾ, ಹರ್ಭಜನ್ ಸಿಂಗ್‌ರ ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದಾರೆ ಮತ್ತು ಅದೇ ಪೋಸ್ಟ್ ಅನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.












Click it and Unblock the Notifications