Glenn Maxwell: ಈ ತರನೂ ಬೌಂಡರಿ ಬಾರಿಸಬಹುದು ಎಂದು ತೋರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
ಗ್ಲೆನ್ ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದವರು, ಅವರ ವಿಭಿನ್ನ ರೀತಿಯ ಬ್ಯಾಟಿಂಗ್ ಶೈಲಿಯನ್ನು ಕಂಡು ಕ್ರಿಕೆಟ್ ಜಗತ್ತು, ಅಭಿಮಾನಿಗಳು ಕೂಡ ಸೋಜಿಗ ಪಡುವುದು ಇದೆ. ಚಿತ್ರ ವಿಚಿತ್ರ ಬ್ಯಾಟಿಂಗ್ ಮೂಲಕ ಬೌಲರ್ ಗಳ ತಲೆ ಕೆಡಿಸುತ್ತಾರೆ.
ಸದ್ಯ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅವರು ವಿಚಿತ್ರವಾಗಿ ಬೌಂಡರಿ ಬಾರಿಸಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ರೀಸ್ ಟೋಪ್ಲಿ ಅವರ ಬೌಲಿಂಗ್‌ನಲ್ಲಿ ವೈಡ್ ಆಗಿ ಹೋಗುತ್ತಿದ್ದ ಬಾಲ್ ಅನ್ನು ಬೌಂಡರಿ ಬಾರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಬಿಗ್ ಬ್ಯಾಷ್ ಲೀಗ್‌ನಲ್ಲಿ ಮ್ಯಾಕ್ಸ್‌ವೆಲ್ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕರಾಗಿದ್ದರು, ಮೊದಲ ಪಂದ್ಯದ ಬಳಿಕ ಗಾಯಗೊಂಡಿದ್ದ ಅವರು, ನಂತರ ಫಿಟ್ ಆಗಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಮ್ಯಾಕ್ಸ್‌ವೆಲ್ ಆಲರೌಂಡರ್ ಆಟ
ಮಂಗಳವಾರ ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅಸಾಧಾರಣ ಆಲ್-ರೌಂಡ್ ಪ್ರದರ್ಶನ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ಸ್ಪಿನ್ನರ್‌ಗಳ ಅತ್ಯುತ್ತಮ ಪ್ರದರ್ಶನದ ಸಹಾಯದಿಂದ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಮಳೆಯಿಂದಾಗಿ 14-ಓವರ್‌ಗಳಿಗೆ ಸೀಮಿತವಾದ ಆಟದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ರೆನೆಗೇಡ್ಸ್ ಕೇವಲ 97 ರನ್ ಗಳಿಸಲು ಸಾಧ್ಯವಾಯಿತು. ಕ್ವಿಂಟನ್ ಡಿ ಕಾಕ್ ಮೂರು-ಓವರ್‌ಗಳ ಪವರ್‌ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸ್ಫೋಟಕ ಆರಂಭ ಪಡೆಯಿತು. ಮೂರು ಓವರ್ ಗಳಲ್ಲೇ 33 ರನ್ ಗಳಿಸಿದ ರೆನೆಗೇಡ್ಸ್ ದೊಡ್ಡ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿತು.
ಆದರೆ ಮೂರನೇ ಓವರ್ ಬಳಿಕ ದಾಳಿಗಿಳಿದ ಸ್ಪಿನ್ನರ್ ಗಳು ರೆನೆಗೇಡ್ಸ್ ಬ್ಯಾಟರ್ ಗಳನ್ನು ಕಾಡಿದರು. ಸ್ಪಿನ್ ದಾಳಿಯೆದುರು ತತ್ತರಿಸಿದ ಮೆಲ್ಬೋರ್ನ್ ರೆನಿಗೇಡ್ಸ್ ಅಂತಿಮವಾಗಿ 14 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 97 ರನ್ ಗಳಿಸಿತು. ಡಿ ಕಾಕ್ 23 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಜೋಲ್ ಪ್ಯಾರಿಸ್, ಇಮಾದ್ ವಾಸಿಮ್, ಸ್ಟೆಕೆಟೀ, ವೆಬ್‌ಸ್ಟರ್ ತಲಾ ಒಂದು ವಿಕೆಟ್ ಗಳಿಸಿದರೆ, ಡೇನಿಯಲ್ ಲಾರೆನ್ಸ್ ಎರಡು ವಿಕೆಟ್ ಪಡೆದರು, ಮ್ಯಾಕ್ಸ್‌ವೆಲ್ ಮೂರು ಓವರ್ ಗಳಲ್ಲಿ ಕೇವಲ 8 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದುಕೊಂಡರು.
ಸುಲಭ ಸವಾಲನ್ನು ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ಥಾಮಸ್ ರೋಜರ್ಸ್ (46 ರನ್) ಉತ್ತಮ ಆರಂಭ ನೀಡಿದರು. ನಾಯಕ ಮ್ಯಾಕ್ಸ್‌ವೆಲ್ 15 ಎಸೆತಗಳಲ್ಲಿ 2 ಬೌಂಡರಿ ಮೂರು ಸಿಕ್ಸರ್ ಸಹಿತ ಅಜೇಯ 32 ರನ್ ಗಳಿಸುವ ಮೂಲಕ 12.1 ಓವರ್ ಗಳಲ್ಲೇ 101 ರನ್ ಗಳಿಸಿ ಸುಲಭ ಗೆಲುವು ಸಾಧಿಸಿದರು.












Click it and Unblock the Notifications