‘ಕುಡುಕ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ ವಿದಾಯ...’ Glenn Maxwell

ಗ್ಲೆನ್ ಮ್ಯಾಕ್ಸ್‌ವೆಲ್ ಆಟದ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ಕಾಲ ಹೋಗಿದೆ.. ಗ್ಲೆನ್ ಮ್ಯಾಕ್ಸ್‌ವೆಲ್ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಕಾಲ ಮುಗಿದು ಹೋಗಿದ್ದು, ವಿಪರೀತ ಕುಡಿತಕ್ಕೆ ದಾಸನಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಳಾಗಿ ಹೋಗಿದ್ದಾರೆ ಎಂಬ ಆರೋಪ ಇದೆ. ಗ್ಲೆನ್ ಮ್ಯಾಕ್ಸ್‌ವೆಲ್ ಕೆಟ್ಟ ಆಟ ಆಡುತ್ತಾ ಐಪಿಎಲ್ ಅಭಿಮಾನಿಗಳಿಗೂ ರೊಚ್ಚಿಗೆಬ್ಬಿಸಿದ್ದಾರೆ. ಹೀಗಿದ್ದಾಗಲೇ, 'ಕುಡುಕ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ ವಿದಾಯ...'

ಆಸ್ಟ್ರೇಲಿಯಾದ ಆಟಗಾರ ಅನ್ನೋ ಕಾರಣಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಮೊದಲಿನಿಂದ ಕೂಡ ದೊಡ್ಡ ದೊಡ್ಡ ಅವಕಾಶ ಸಿಗುತ್ತಾ ಬಂದಿತ್ತು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಬೇಕು ಅಂತಲೇ ಐಪಿಎಲ್ ಟೂರ್ನಿಯಲ್ಲಿ ಕೆಟ್ಟದಾಗಿ ಆಡುತ್ತಾರೆ ಎಂಬ ಆರೋಪ ಮಾಡಲಾಗಿತ್ತು. ಐಸಿಸಿ ಟೂರ್ನಿ ಬಂದಾಗ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್ ಗೆದ್ದುಕೊಡುವ ಇದೇ ಗ್ಲೆನ್ ಮ್ಯಾಕ್ಸ್‌ವೆಲ್, ಐಪಿಎಲ್ ಬಂದಾಗ ಮಾತ್ರ ಬೇಕು ಅಂತಾನೇ ಕೆಟ್ಟದಾಗಿ ಆಟ ಆಡುತ್ತಾರೆ ಅನ್ನೋ ಗಂಭೀರ ಆರೋಪ ಇದೆ...

Glenn Maxwell Name Is On Trend After He Missed The Match Against RCB

'ಕುಡುಕ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ...'

ಗ್ಲೆನ್ ಮ್ಯಾಕ್ಸ್‌ವೆಲ್ ಈಗ ಯಾರಿಗೂ ಬೇಡವಾದ ಆಟಗಾರ ಆಗಿದ್ದು, ಹೀನಾಯವಾಗಿ ಕೆಟ್ಟ ಆಟ ಆಡುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಕೆಂಡವಾಗಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ ಸರಿಯಾಗಿ ಆಡಲು ಬರುತ್ತೆ, ಭಾರತದಲ್ಲಿ ಐಪಿಎಲ್ ಆಡಲು ಏನು ರೋಗ? ಅಂತಾನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶಗೊಂಡು, ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದರು. ಇದೇ ಕಾರಣಕ್ಕೆ ಆರ್‌ಸಿಬಿ ಎದುರು ಪಂಜಾಬ್ ಆಡಿದ ಪಂದ್ಯಕ್ಕೆ ಕೂಡ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಅವಕಾಶ ಕೊಡದೆ ಕೂರಿಸಿದ್ದ ಪಂಜಾಬ್ ತಂಡದ ಆಡಳಿತವು ಆಘಾತ ನೀಡಿದೆ. ಹೀಗಿದ್ದಾಗಲೇ, 'ಕುಡುಕ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ ವಿದಾಯ...'

ಹೌದು, ಗ್ಲೆನ್ ಮ್ಯಾಕ್ಸ್‌ವೆಲ್‌ನ ಆರ್‌ಸಿಬಿ ಅಂದ್ರೆ ನಮ್ಮ ಬೆಂಗಳೂರು ತಂಡ ಹೊರಗೆ ಹಾಕಿದ್ದು ಯಾಕೆ? ಅನ್ನೋದು ಇದೀಗ ಕೋಟಿ ಕೋಟಿ ಅಭಿಮಾನಿಗಳಿಗೆ ಗೊತ್ತಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್‌ ಇಷ್ಟು ಕೆಟ್ಟದಾಗಿ ಆಡುತ್ತಾರೆ, ತಂಡಕ್ಕೆ ಕೈಕೊಟ್ಟು ಹೋಗುತ್ತಾರೆ, ನಂಬಿದಾಗ ಮೋಸವೇ ಗ್ಯಾರಂಟಿ ಅಂತಾ ಅಭಿಮಾನಿಗಳು ಆಕ್ರೋಶ ಹೊರ ಹಾಕುವಾಗಲೇ ಭೀಕರ ಸುದ್ದಿಯೊಂದು ಹಬ್ಬಿದೆ. ಗ್ಲೆನ್ ಮ್ಯಾಕ್ಸ್‌ವೆಲ್‌ ಐಪಿಎಲ್ ಕ್ರಿಕೆಟ್ ಬದುಕು ಮುಗಿದು ಹೋಯಿತಾ? ಎಂಬ ಡೌಟ್ ಕೂಡ ಶುರುವಾಗಿದೆ....

ಮ್ಯಾಕ್ಸ್‌ವೆಲ್‌ ಐಪಿಎಲ್ ಕ್ರಿಕೆಟ್ ಬದುಕು...

ಗ್ಲೆನ್ ಮ್ಯಾಕ್ಸ್‌ವೆಲ್ ಪಂಜಾಬ್ ಪರ ಐಪಿಎಲ್-2025ರ ಸೀಸನ್ ಆಡುತ್ತಿದ್ದು, ಹೀನಾಯವಾಗಿ ಆಡ್ತಿದ್ದರೆ. ಹೀಗಿದ್ದಾಗಲೇ, 'ಕುಡುಕ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ ವಿದಾಯ ಹೇಳಬೇಕು, ಈ ಮೂಲಕ ಕುಡುಕ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯನ್ನೇ ಬಿಟ್ಟು ತೊಲಗಬೇಕು...' ಎಂಬ ಆಗ್ರಹವನ್ನ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಾಡುತ್ತಿದ್ದಾರೆ. ಈ ರೀತಿ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಇಂಡಿಯಾ ಪೂರ್ತಿ ಇರುವ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿರುವ ಕಾರಣಕ್ಕೆ ಭರ್ಜರಿ ಸೌಂಡ್ ಮಾಡುತ್ತಿದೆ ಗ್ಲೆನ್ ಮ್ಯಾಕ್ಸ್‌ವೆಲ್ ವಿಚಾರ. ಸೋಷಿಯಲ್ ಮೀಡಿಯಾಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಆಕ್ರೋಶ ಕೂಡ ಹೆಚ್ಚಾಗುತ್ತಿದೆ.

ಈಗಲಾದರೂ ಗ್ಲೆನ್ ಮ್ಯಾಕ್ಸ್‌ವೆಲ್ ಬದಲಾಗುತ್ತಾರಾ?

ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಅನ್ನೋದೇ ಒಂದು ಹಬ್ಬವಾಗಿದೆ, ಪ್ರತಿ ವರ್ಷ ಐಪಿಎಲ್ ಹಬ್ಬ ಸಂಭ್ರಮದಿಂದ ನಡೆದುಕೊಂಡು ಹೋಗುತ್ತಿದೆ. ಆದ್ರೆ ಐಪಿಎಲ್ ಅಖಾಡದಲ್ಲಿ ಕೆಲ ಆಟಗಾರರು ತುಂಬ ಕೆಟ್ಟ ಹೆಸರು ಪಡೆದು ಟ್ರೋಲ್ ಆಗುತ್ತಿದ್ದು, ಐಪಿಎಲ್-2025 ಆಡಲು ಬಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಕೂಡ ಅದೇ ರೀತಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಜೊತೆಗೇ, 'ಕುಡುಕ ಮ್ಯಾಕ್ಸ್‌ವೆಲ್ ಮನೆಗೆ ಹೋಗಪ್ಪಾ ಸಾಕು.. ಸಾಕು..' ಅಂತಿದ್ದಾರೆ ಕ್ರಿಕೆಟ್ ಫ್ಯಾನ್ಸ್. ಇಷ್ಟೆಲ್ಲದರ ನಡುವೆ ಪಂಜಾಬ್ ತಂಡ ಕೂಡ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕೈಕೊಟ್ಟು, ಆಟವನ್ನೇ ಆಡಿಸದೆ ಕಾಯಿಸುತ್ತಿರುವುದು ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+