Glenn Maxwell & Kohli: ವಿರಾಟ್ ಕೊಹ್ಲಿ ಗೆಳೆಯ ಮ್ಯಾಕ್ಸ್‌ವೆಲ್ ದ್ವಿಶತಕ ದಾಖಲಿಸಲು ಕಾರಣ ಯಾರು?

ಕ್ರಿಕೆಟ್ ಜಗತ್ತಿನಲ್ಲಿ ನಿನ್ನೆಯಿಂದ ಒಂದೆ ಹೆಸರು ರಾರಾಜಿಸುತ್ತಿದೆ. ಇಂಟರ್‌ನೆಟ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲೂ ಆರ್‌ಸಿಬಿ ತಂಡದ ಈ ಆಟಗಾರನೇ ಹೀರೋ ಆಗಿದ್ದಾನೆ. ಒಂದೇ ಒಂದು ಪಂದ್ಯ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ದೊಡ್ಡ ಹೆಸರನ್ನೂ ತಂದುಕೊಟ್ಟಿದೆ. ಆದ್ರೆ ಹೀಗೆ ಗ್ಲೆನ್ ಮ್ಯಾಕ್ಸ್‌ವೆಲ್ ಡಬಲ್ ಸೆಂಚ್ಯುರಿ ದಾಖಲಿಸಲು ಕಾರಣವಾಗಿದ್ದು ಯಾರು? ಮ್ಯಾಕ್ಸ್‌ವೆಲ್ ಬೆನ್ನಿಗೆ ನಿಂತು ಬಲ ತುಂಬಿದವರು ಯಾರು?

ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡದ ಪಂದ್ಯ ನೋಡಿದ ಯಾರೇ ಆಗಿದ್ದರೂ, ಈ ಮ್ಯಾಚ್ ಆಸ್ಟ್ರೇಲಿಯಾ ಸೋಲುತ್ತೆ ಅಂತಾ ಡಿಸೈಡ್ ಆಗಿದ್ದರು. ಯಾಕಂದ್ರೆ ನಿನ್ನೆ ನಡೆದ ಪಂದ್ಯದಲ್ಲಿ ನೋಡ ನೋಡಲುತ್ತಲೆ ಆಸ್ಟ್ರೇಲಿಯಾ ತಂಡ ಕುಸಿದು 100 ರನ್ ಒಳಗೆ ಆಲೌಟ್ ಆಗುತ್ತೆ ಅನ್ನೋ ಮುನ್ಸೂಚನೆ ಸಿಕ್ಕಿತ್ತು. ಹೀಗಿದ್ದಾಗಲೇ 6ನೇ ಕ್ರಮಾಂಕದಲ್ಲಿ ಎಂಟ್ರಿಯಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಇಡೀ ಪಂದ್ಯವನ್ನೇ ಬದಲಾಯಿಸಿ, ಡಬಲ್ ಸೆಂಚ್ಯುರಿ ದಾಖಲಿಸಿದರು. ಆದರೆ ಹೀಗೆ ಮ್ಯಾಕ್ಸ್‌ವೆಲ್ ಡಬಲ್ ಸೆಂಚ್ಯುರಿ ಗಳಿಸಲು ಸ್ಫೂರ್ತಿ ಆಗಿದ್ದು ಯಾರು?

glenn-maxwell-double-century

ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಆರ್‌ಸಿಬಿ ಸ್ಫೂರ್ತಿ?

ಹೌದು, ಐಪಿಎಲ್ ಅಖಾಡದಲ್ಲಿ ಬೆಂಗಳೂರನ್ನ ಪ್ರತಿನಿಧಿಸುವ ಆರ್‌ಸಿಬಿ ತಂಡದಲ್ಲಿ ಇದೇ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರಮುಖ ಆಟಗಾರ. ಇದು ಮಾತ್ರವಲ್ಲ ಎಷ್ಟೋ ಬಾರಿ ಆರ್‌ಸಿಬಿ ಟೀಂ ಸಂಕಷ್ಟಕ್ಕೆ ಸಿಲುಕಿದ್ದಾಗ ಇದೇ ಗ್ಲೆನ್ ಮ್ಯಾಕ್ಸ್‌ವೆಲ್ ನೆರವಾಗಿ, ಬೆಂಗಳೂರು ತಂಡಕ್ಕೆ ಜಯ ತಂದುಕೊಟ್ಟಿದ್ರು. ಹೀಗೆ ನಿನ್ನೆ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನದ ಸ್ಪಿನ್ ದಾಳಿಯನ್ನ ಎದುರಿಸಿ ಡಬಲ್ ಸೆಂಚ್ಯುರಿ ಅಂದರೆ 200 ರನ್‌ಗಳನ್ನ ಚಚ್ಚಿದ್ದು ಹೇಗೆ ಗೊತ್ತಾ?

ಮ್ಯಾಕ್ಸ್‌ವೆಲ್‌ಗೆ ಸ್ಪಿನ್ ಜ್ಞಾನ ಎಷ್ಟಿದೆ?

ನಿಮಗೆಲ್ಲಾ ಗೊತ್ತಿರುವಂತೆ ಐಪಿಎಲ್ ಹಾವಳಿ ಶುರುವಾದ ನಂತರ ಇಡೀ ಕ್ರಿಕೆಟ್ ಜಗತ್ತಿನ ಆಟಗಾರರು, ಒಟ್ಟಾಗಿ ಆಟ ಆಡುತ್ತಿದ್ದಾರೆ. ಅದೇ ರೀತಿ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ನಮ್ಮ ಬೆಂಗಳೂರು ತಂಡಕ್ಕೆ ಆಟ ಆಡುತ್ತಾ ಇಲ್ಲಿನವರೇ ಆಗಿ ಹೋಗಿದ್ದಾರೆ. ಹೀಗಿದ್ದಾಗಲೇ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ಭಾರತದ ಸ್ಪಿನ್ ಪಿಚ್‌ಗಳ ಬಗ್ಗೆ ದೊಡ್ಡ ಜ್ಞಾನ ಬೆಳೆದಿದೆ. ನೀವೆಲ್ಲ ನಿನ್ನೆಯ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಮ್ಯಾಚ್ ನೋಡಿದ್ದರೆ, ಸ್ಪಷ್ಟವಾಗಿ ಇದರ ಬಗ್ಗೆ ಮಾಹಿತಿ ಸಿಗುತ್ತದೆ. ಇಡೀ ಆಸ್ಟ್ರೇಲಿಯಾ ತಂಡ ಸ್ಪಿನ್ ಬೌಲಿಂಗ್ ಎದುರು ಆಡೋಕೆ ತತ್ತರಿಸಿ ಹೋದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರ ಸ್ಪಿನ್ ಬೌಲರ್ಸ್‌ನ ಹಿಡಿದು ಹಿಡಿದು ಚಚ್ಚಿ ಬಿಟ್ಟರು. ಹೀಗೆ ಆರ್‌ಸಿಬಿ ಟೀಂನ ಪರ ಆಡುವ ವಿರಾಟ್ ಕೊಹ್ಲಿಯ ಜೀವದ ಗೆಳೆಯನಾದ ಗ್ಲೆನ್ ಮ್ಯಾಕ್ಸ್‌ವೆಲ್ 201 ರನ್‌ಗಳನ್ನ ಸರಾಗವಾಗಿ ದಾಖಲಿಸಿ ಇತಿಹಾಸ ಬರೆದರು.

glenn-maxwell-double-century

ಮ್ಯಾಕ್ಸ್‌ವೆಲ್ ಪಾಲಿಗೆ ವರವಾದ ಕಮ್ಮಿನ್ಸ್!

ಮತ್ತೊಂದು ಮಾತು ಹೇಳಬೇಕು ಅದೇನೆಂದರೆ ನಿನ್ನೆ ಗ್ಲೆನ್ ಮ್ಯಾಕ್ಸ್‌ವೆಲ್ 201 ರನ್ ಗಳಿಸಿ ದಾಖಲೆ ಬರೆಯುವಲ್ಲಿ ಪ್ಯಾಟ್ ಕಮ್ಮಿನ್ಸ್ ಪಾಲು ಕೂಡ ದೊಡ್ಡದಾಗಿದೆ. 9ನೇ ಕ್ರಮಾಂಕದ ಆಟಗಾರನಾದ ಪ್ಯಾಟ್ ಕಮ್ಮಿನ್ಸ್ ನಿನ್ನೆ ಗ್ಲೆನ್ ಮ್ಯಾಕ್ಸ್‌ವೆಲ್ ಮಾತನ್ನು ಚಾಚೂ ತಪ್ಪದೆಯೇ ಪಾಲಿಸಿದರು. ಒಂದು ಕಡೆ ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ಬೌಲರ್‌ಗಳ ವಿರುದ್ಧ ಭಾರಿ ವೇಗವಾಗಿ ರನ್ ಗಳಿಸುತ್ತಿದ್ದರೆ, ಮತ್ತೊಂದು ಕಡೆ ವಿಕೆಟ್ ಬೀಳದ ರೀತಿ ನೋಡಿಕೊಂಡಿದ್ದ ಕೀರ್ತಿ ಪ್ಯಾಟ್ ಕಮ್ಮಿನ್ಸ್‌ಗೆ ಸಲ್ಲಬೇಕು. ಮ್ಯಾಕ್ಸ್‌ವೆಲ್ 128 ಬಾಲ್‌ಗಳಲ್ಲಿ 201 ರನ್‌ಗಳನ್ನು ಗಳಿಸಿದರೆ, ಪ್ಯಾಟ್ ಕಮ್ಮಿನ್ಸ್ 68 ಬಾಲ್ ಆಡಿ ಕೇವಲ 12 ರನ್ ಗಳಿಸಿದರು. ಇಲ್ಲೇ ನಿಮಗೆ ಗೊತ್ತಾಗುತ್ತದೆ ಪ್ಯಾಟ್ ಕಮ್ಮಿನ್ಸ್ ಶ್ರಮ ಎಂತಹದ್ದು ಅಂತಾ.

ಗಾಯ ಕಾಡಿದರೂ.. ಹೆದರಲೇ ಇಲ್ಲ!

ಇಷ್ಟೆಲ್ಲದರ ನಡುವೆ ದೈಹಿಕವಾಗಿ ಕೂಡ ನಿನ್ನೆ ಮ್ಯಾಕ್ಸ್‌ವೆಲ್ ನಲುಗಿದ್ದರು. ತಮಗೆ ಗಾಯ ಮತ್ತು ನೋವಿನ ಸಮಸ್ಯೆ ಕಾಡಿದರು ಕೂಡ ಗಟ್ಟಿಯಾಗಿ ನಿಂತು ಮ್ಯಾಕ್ಸ್‌ವೆಲ್ ಆಡಿದರು. ಎಷ್ಟೇ ಕಷ್ಟವಾದ್ರೂ ಫೀಲ್ಡ್ ಬಿಟ್ಟು ಹೋಗದ ಮ್ಯಾಕ್ಸ್‌ವೆಲ್ ಗಟ್ಟಿಯಾಗಿ ನಿಂತು, ಜೊತೆಯಲ್ಲೇ ಅಫ್ಘಾನಿಸ್ತಾನ ಬೌಲಿಂಗ್ ಪಡೆಗೆ ಬುದ್ಧಿ ಕಲಿಸಿ ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದರು. ಹೀಗೆ ಅಫ್ಘಾನಿಸ್ತಾನ ನೀಡಿದ್ದ 292 ರನ್ ಗುರಿ ಬೆನ್ನುಹತ್ತಿದ್ದ ಆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರ 201 ರನ್ ಕೊಡುಗೆಯಿಂದ 293 ರನ್‌ಗಳನ್ನ ಗಳಿಸಿತು. ಕೇವಲ 46.5 ಓವರ್‌ಗೆ ಮ್ಯಾಚ್ ಮಗಿಸಿತು ಆಸಿಸ್ ತಂಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+