• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಹನಿಮೂನ್‌ಗೆ ಸಿದ್ದರಾದ 66 ವರ್ಷದ ಅರಣ್ ಲಾಲ್

|
Google Oneindia Kannada News

ಕೋಲ್ಕಾತ್ತಾ, ಜುಲೈ 13: ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್​ ಬೆಂಗಾಲ್ ಕ್ರಿಕೆಟ್​ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ.​ 66 ವರ್ಷಗಳ ಮಾಜಿ ಕ್ರಿಕೆಟರ್ ಇತ್ತೀಚೆಗೆ ತಮಗಿಂತಲೂ 28 ವರ್ಷ ಚಿಕ್ಕವರಾದ ಬುಲ್‌ಬುಲ್ ಸಾಹಾ ಎಂಬುವವರನ್ನು ವಿವಾಹವಾಗಿದ್ದರು.

ಕೋಲ್ಕತ್ತಾದ ಹೋಟೆಲ್​ ಒಂದರಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ಬುಲ್​ಬುಲ್​ ಸಾಹಾ ಅರುಣ್ ಲಾಲ್​ ಮೇ 2ರಂದು ವಿವಾಹವಾಗಿದ್ದರು. ಈ ವಿವಾಹ ಕಾರ್ಯಕ್ರಮಕ್ಕೆ ಬೆಂಗಾಲ್ ತಂಡದ ಕ್ರಿಕೆಟಿಗರು ಮತ್ತು ಅಸೋಸಿಯೇಸನ್​ ಆಧಿಕಾರಿಗಳು ಸೇರಿದಂತೆ ಹತ್ತಿರದ ಸಂಬಂಧಿಗಳು ಉಪಸ್ಥಿತರಿದ್ದರು.

ಸಂಕಷ್ಟದ ಸಮಯದಲ್ಲೂ ಲಂಕನ್ನರ ಕ್ರಿಕೆಟ್ ಪ್ರೀತಿಗೆ ಡೇವಿಡ್ ವಾರ್ನರ್ ಧನ್ಯವಾದಸಂಕಷ್ಟದ ಸಮಯದಲ್ಲೂ ಲಂಕನ್ನರ ಕ್ರಿಕೆಟ್ ಪ್ರೀತಿಗೆ ಡೇವಿಡ್ ವಾರ್ನರ್ ಧನ್ಯವಾದ

ಅನಾರೋಗ ಪೀಡಿತ ತಮ್ಮ ಮೊದಲ ಪತ್ನಿ ಒಪ್ಪಿಗೆ ಪಡೆದೇ ವಿವಾಹವಾಗಿದಗ್ದ ಅರುಣ್‌ ಲಾಲ್ ತಮಗಿಂತಲೂ ಅರ್ಧ ವಯಸ್ಸು ಕಿರಿಯಳನ್ನು ವಿವಾಹವಾಗಿ ಭಾರೀ ಸುದ್ದಿಯಾಗಿದ್ದರು. ಇದೀಗ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಡುವು ಮಾಡಿಕೊಂಡಿರುವ ಅವರು ತಮ್ಮ ಮಧುಚಂದ್ರದ ಯೋಜನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಕ್ರಿಕೆಟ್ ಮೈದಾನದಿಂದ ಸಂಪೂರ್ಣ ಬ್ರೇಕ್ ತೆಗೆದುಕೊಂಡಿರುವ ಅರುಣ್‌ ಲಾಲ್ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಿವುದಕ್ಕಾಗಿ ಟರ್ಕಿಗೆ ತೆರಳುವ ಯೋಜನೆ ಇರುವುದಾಗಿ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಅವರ ಪತ್ನಿ ಬುಲ್‌ಬುಲ್ ರಜೆ ಪಡೆಯುತ್ತಿದ್ದಂತೆ ತಕ್ಷಣದಲ್ಲೇ ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್‌ಗೆ ಹನಿಮೂನ್‌ಗಾಗಿ ಪ್ರಯಾಣಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

ಇದೇ ವರ್ಷ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮದುವೆ?ಇದೇ ವರ್ಷ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮದುವೆ?

ನಾನು ನನ್ನ ಹೆಂಡತಿಯ ಜೊತೆಗೆ ಟರ್ಕಿಗೆ ಹೋಗಬೇಕೆಂದು ಬಯಸಿದ್ದೇನೆ. ಮದುವೆಯಾದ ಮೇಲೆ ನಾನೂ ಎಲ್ಲಿಗೂ ಪ್ರಯಾಣಿಸಿಲ್ಲ. ನಾನು ನನ್ನ ಪತ್ನಿಗಾಗಿ ಮತ್ತು ನನಗಾಗಿ ಕೆಲವು ಸಮಯ ಕೊಡಬೇಕೆಂದುಕೊಂಡಿದ್ದೇನೆ. ಬುಲ್ ಬುಲ್ ಶಾಲಾ ಶಿಕ್ಷಕಿಯಾಗಿದ್ದಾರೆ, ಅವಳು ರಜೆ ಪಡೆಯುತ್ತಿದ್ದಂತೆ, ಆದಷ್ಟು ಬೇಗ ಹೊರ ಹೋಗುತ್ತೇವೆ ಎಂದು ಅರುಣ್ ಲಾಲ್ ತಿಳಿಸಿದ್ದಾರೆ.

ಬಂಗಾಳದ ಮುಖ್ಯ ತರಬೇತುದಾರರಾಗಿ ಅವರ ಯಶಸ್ವಿ ಸಮಯವನ್ನು ಕಳೆದ ನಂತರ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅರುಣ್ ಲಾಲ್, ತಾನೂ ಯಾವುದಾದರೂ ತಂಡ ಬಯಸಿದರೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಸುಳಿವು ನೀಡಿದರು. ಅಲ್ಲದೇ ಕಾಮೆಂಟರಿ ಬಾಕ್ಸ್‌ಗೆ ಮರಳುವುದು ಅವರ ಬಳಿಯಿರುವ ಮತ್ತೊಂದು ಆಯ್ಕೆ ಎಂದು ಹೇಳಿದ್ದಾರೆ.

ಅರುಣ್ ಲಾಲ್​ ಮೂಲತಃ ಉತ್ತರ ಪ್ರದೇಶದ ಮೊರಾದಾಬಾದ್‌ನವರು. ಅವರು ಭಾರತ ತಂಡದ ಪರ 16 ಟೆಸ್ಟ್, 13 ODI ಪಂದ್ಯಗಳನ್ನಾಡಿದ್ದು, ಕ್ರಮವಾಗಿ 729 ಮತ್ತು 122 ರನ್ ಗಳಿಸಿದರು. ಅರುಣ್ ಲಾಲ್ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಯಶಸ್ವಿಯಾಗದಿದ್ದರೂ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 156 ಪಂದ್ಯಗಳನ್ನಾಡಿದ್ದು, 30 ಶತಕಗಳ ಸಹಿತ 10,421 ರನ್ ಗಳಿಸಿದ್ದಾರೆ. ನಿವೃತ್ತಿ ನಂತರ ಕಾಮೆಂಟೇಟರ್​ ಆಗಿದ್ದ ಅವರಿಗೆ 6 ವರ್ಷಗಳ ಹಿಂದೆ ಕ್ಯಾನ್ಸರ್ ಕಾಣಿಸಿಕೊಂಡ ನಂತರ ಕಾಮೆಂಟರಿಗೆ ಗುಡ್‌ ಬೈ ಹೇಳಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

English summary
After step down as Bengal coach, Former Indian cricketer Arun Lal reveals his honeymoon plans and his future on the cricket field. he was recently married 28 years younger Bulbul Saha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X