Finn Allen: ಫಿನ್ ಅಲೇನ್ ಆರ್ಭಟ: ಶತಕದ ಸೊಬಗು
ನ್ಯೂಜಿಲೆಂಡ್ ತಂಡದ ಯುವ ಆಟಗಾರ ಫಿನ್ ಅಲೆನ್ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ) ಟೂರ್ನಿಯಲ್ಲಿ ಆರ್ಭಟ ನಡೆಸಿದ್ದಾರೆ. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸ್ಯಾನ್ ಫ್ರಾನ್ಸಿಸ್ಕೋ ಯುನಿಸ್ಕೋ ಜಯ ಸಾಧಿಸಿದೆ.
ಶುಕ್ರವಾರ ನಡೆದ ಟಿ20 ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್‌ಗೆ 200 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೆಕ್ಸ್ ಸೂಪರ್ ಕಿಂಗ್ಸ್ 4 ವಿಕೆಟ್‌ಗೆ 190 ರನ್ ಸೇರಿಸಿ ಸೋಲು ಕಂಡಿತ್ತು.

ಫಿನ್ ಅಲೆನಾ ಅರ್ಧಶತಕ
ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಆರಂಭಿಕ ಆಟಗಾರ ಫಿನ್ ಅಲೇನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರ ಅಬ್ಬರದ ಬ್ಯಾಟಿಂಗ್‌ಗೆ ಎದುರಾಳಿ ತಂಡದ ಬೌಲರ್‌ಗಳು ಥಂಡಾ ಹೊಡೆದರು. ಫಿನ್ ಅಲೇನ್ 53 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಾಯದಿಂದ 101 ರನ್ ಸಿಡಿಸಿದರು. ಅಲ್ಲದೆ ಈ ವೇಳೆ ಇವರ ಸ್ಟ್ರೈಕ್ ರೇಟ್ 190ಕ್ಕೂ ಹೆಚ್ಚಿತ್ತು.
ಫಿನ್ ಅಲೇನ್ ಹಾಗೂ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಮೊದಲು ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದುರ. ಈ ಜೋಡಿ 79 ರನ್ ಸೇರಿಸಿ ಅಬ್ಬರಿಸಿತು.
ಉಳಿದಂತೆ ಜೋಶ್ ಇಂಗ್ಲಿಸ್ 37, ಹಸನ್ ಖಾನ್ 27 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಟೆಕ್ಸ್ ಸೂಪರ್ ಕಿಂಗ್ಸ್ ಪರ ನೂರ್ ಅಹ್ಮದ್ ಮೂರು ವಿಕೆಟ್ ಕಬಳಿಸಿದರು.
ಗುರಿಯನ್ನು ಬೆನ್ನಟ್ಟಿದ ಟೆಕ್ಸಸ್ ಸೂಪರ್ ಕಿಂಗ್ಸ್ ಪರ ಆರಂಭಿಕರಾದ ಡೆವೊನ್ ಕಾನ್ವೇ, ಫಾಫ್ ಡು ಪ್ಲೆಸಿಸ್ ಅಬ್ಬರದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ಪವರ್ ಫುಲ್ ಆಟದ ಪ್ರದರ್ಶನ ನೀಡಿತು. ಪವರ್ ಪ್ಲೇನಲ್ಲಿ ರನ್‌ಗಳನ್ನು ಗುಡ್ಡೆ ಹಾಕಿದ ಜೋಡಿ 4.2 ಓವರ್‌ಗಳಲ್ಲಿ 55 ರನ್ ಸೇರಿಸಿತು.
ಡೆವೊನ್ ಕಾನ್ವೇ 38 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸೇರಿದಂತೆ 62 ರನ್ ಸೇರಿಸಿದರು. ಫಾಫ್ ಡು ಪ್ಲೇಸಿಸ್ 45 ರನ್ ಕಲೆ ಹಾಕಿತು. ಜೋಶುವಾ ಟ್ರಾಂಪ್ ಅಜೇಯ 56 ರನ್ ಸಿಡಿಸಿದರು.
ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಆಡಿದ ಏಳು ಪಂದ್ಯಗಳಲ್ಲಿ ಐದು ಜಯ, 1 ಸೋಲು ಕಂಡಿದ್ದು 11 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.












Click it and Unblock the Notifications