ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FIFA ವಿಶ್ವಕಪ್: ಟಾಪ್ 5 ಆಕ್ರಮಣಕಾರಿ ಫುಟ್ಬಾಲ್‌ ತಂಡಗಳಿವು

|
Google Oneindia Kannada News

ವಿಶ್ವದ ಅತ್ಯಂತ ಜನಪ್ರಿಯ ಫುಟ್ಬಾಲ್‌ ಆಟ ಎಂದು ಕರೆಯಲ್ಪಡುವ ಫಿಫಾ ವಿಶ್ವಕಪ್‌-2022ರ ಆವೃತ್ತಿಯು ಇದೇ ತಿಂಗಳು ನವೆಂಬರ್ 20ರಿಂದ ಪ್ರಾರಂಭವಾಗಲಿದೆ. ನವೆಂಬರ್ 20ರಿಂದ ಡಿಸೆಂಬರ್ 18ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ವಿಶ್ವದಾದ್ಯಂತ ಹಲವು ತಂಡಗಳು ಭಾಗವಹಿಸಲಿವೆ. ಈ ಬಾರಿಯ ವಿಶ್ವಕಪ್‌ ಫುಟ್ಬಾಲ್‌ ಅರ್ಹತಾ ಪಂದ್ಯಗಳು ಕೂಡ ಮುಂಚಿತವಾಗಿಯೇ ಆರಂಭವಾಗುತ್ತಿವೆ.

ಕತಾರ್‌ನಲ್ಲಿ ಪ್ರಾರಂಭವಾಗಲಿರುವ ಫುಟ್ಬಾಲ್‌ ವಿಶ್ವಕಪ್‌ ಪಂದ್ಯಗಳಲ್ಲಿ ಬ್ರೆಜಿಲ್, ಅರ್ಜೆಂಟೀನಾ ಹಾಗೂ ಹಾಲಿ ಚಾಂಪಿಯನ್ ಫ್ರಾನ್ಸ್ ಫಿಫಾ ಪ್ರಶಸ್ತಿಗಾಗಿ ಪ್ರಬಲ ಪೈಪೋಟಿಯ ಸ್ಪರ್ಧಿಗಳಲ್ಲಿ ಸೇರಿಕೊಂಡಿವೆ. ದಾಖಲೆಯ 5 ಬಾರಿ ಚಾಂಪಿಯನ್ ಆಗಿರುವ ಬ್ರೆಜಿಲ್ ತಂಡವು ಅತ್ಯುತ್ತಮ ಫಾರ್ಮ್‌ನಲ್ಲಿರುವ ಯುವ ಆಟಗಾರರನ್ನು ಒಳಗೊಂಡಿದೆ. ಕಳೆದ ಕೆಲವು ಪಂದ್ಯಗಳನ್ನು ನೋಡಿದರೆ ಬ್ರೆಜಿಲ್ ಅತ್ಯಂತ ಆಕ್ರಮಣಕಾರಿ ಆಟಗಳನ್ನು ಪ್ರದರ್ಶಿಸಿದೆ. ಕತಾರ್‌ನಲ್ಲೂ ಈ ತಂಡವು ಇದೇ ತಂತ್ರದೊಂದಿಗೆ ಕಣಕ್ಕಿಳಿಯಲಿದೆ.

ಅತ್ಯುತ್ತಮ ದಾಳಿ ನಡೆಸಲಿರುವ ಟಾಪ್ 5 ತಂಡಗಳನ್ನು ನೀವು ಇಲ್ಲಿ ಗಮನಿಸಬಹುದು.

ಫೀಫಾ ವಿಶ್ವಕಪ್‌ 2022ಗಾಗಿ ಬಲಿಷ್ಠ ತಂಡ ಘೋಷಿಸಿದ ಬ್ರೆಜಿಲ್ ಫೀಫಾ ವಿಶ್ವಕಪ್‌ 2022ಗಾಗಿ ಬಲಿಷ್ಠ ತಂಡ ಘೋಷಿಸಿದ ಬ್ರೆಜಿಲ್

ಬ್ರೆಜಿಲ್ ತಂಡ

ಬ್ರೆಜಿಲ್ ತಂಡ

ತಂಡವು ಪ್ರತಿ ವಿಭಾಗದಲ್ಲಿ ಉತ್ತಮ ಆಯ್ಕೆಗಳನ್ನು ಹೊಂದಿದೆ. ಬ್ರೆಜಿಲ್‌ನ ಡಿಫೆನ್ಸ್ ಮತ್ತು ಮಿಡ್‌ಫೀಲ್ಡ್ ಕೂಡ ಅತ್ಯಂತ ಬಲಿಷ್ಠವಾಗಿದೆ. ಸದ್ಯ ಫಾರ್ಮ್‌ನಲ್ಲಿರುವ ನೇಮಾರ್ ನಾಯಕತ್ವ ತಂಡದ ದಾಳಿಯು ತುಂಬಾ ಪ್ರಬಲವಾಗಿದೆ. ಇವರಲ್ಲದೆ, ವಿನ್ಸಿಯಸ್ ಜೂನಿಯರ್, ಗೇಬ್ರಿಯಲ್ ಜೀಸಸ್, ಆಂಟೊಯಿನ್, ಮಾರ್ಟಿನೆಲ್ಲಿ, ರಫಿನ್ಹಾ, ರಿಚಾರ್ಲಿಸನ್ ಮತ್ತು ಪೆಡ್ರೊ ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

ಹಾಲಿ ಚಾಂಪಿಯನ್ ಫ್ರಾನ್ಸ್

ಹಾಲಿ ಚಾಂಪಿಯನ್ ಫ್ರಾನ್ಸ್

ಹಾಲಿ ಚಾಂಪಿಯನ್ ಫ್ರಾನ್ಸ್‌ನಲ್ಲಿ ಕರೀಮ್ ಬೆಂಜೆಮಾ, ಕೈಲಿಯನ್ ಎಂಬಾಪೆ ಮತ್ತು ಉಸ್ಮಾನೆ ಡೆಂಬೆಲೆ ಅವರಂತಹ ಆಕ್ರಮಣಕಾರಿ ಆಟಗಾರರಿದ್ದಾರೆ. ಫ್ರಾನ್ಸ್‌ನ ತಂಡವು ಈ ಬಾರಿಯೂ ಪ್ರಬಲವಾಗಿದೆ. ತರಬೇತುದಾರ ಡಿಡಿಯರ್ ಡ್ಯಾಶ್‌ಚಾಂಪ್ಸ್ ಕ್ರಿಸ್ಟೋಫರ್ ಕುಂಕು, ಆಂಟೊಯಿನ್ ಗ್ರೀಜ್‌ಮನ್, ಒಲಿವಿಯರ್ ಗೆರಾರ್ಡ್ ಮತ್ತು ಕಿಂಗ್ಸ್ಲೆ ಕೊಮನ್ ರೂಪದಲ್ಲಿ ಉತ್ತಮ ಆಯ್ಕೆಗಳನ್ನು ಹೊಂದಿದ್ದಾರೆ. ಎಂಬಾಪೇ ಮತ್ತು ಬೆಂಜೆಮಾ ತಂಡದ ಸತತ ಎರಡನೇ ಪ್ರಶಸ್ತಿಗೆ ಕಾರಣರಾಗಿದ್ದಾರೆ.

ಇಂಗ್ಲೆಂಡ್ ಪುಟ್ಬಾಲ್‌ ತಂಡ

ಇಂಗ್ಲೆಂಡ್ ಪುಟ್ಬಾಲ್‌ ತಂಡ

ಗ್ಯಾರೆತ್ ಸೌತ್‌ಗೇಟ್ ಅವರ ತಂಡವು ಕೆಲವು ಆಕ್ರಮಣಕಾರಿ ಆಟಗಾರರನ್ನು ಹೊಂದಿದೆ. ಅವರನ್ನು ಈ ವಿಭಾಗದಲ್ಲಿ ನಿಲ್ಲುವಂತೆ ಮಾಡುತ್ತದೆ. ತಂಡದಲ್ಲಿ ಹ್ಯಾರಿ ಕೇನ್, ಫಿಲ್ ಫೋಡೆನ್, ರಹೀಮ್ ಸ್ಟರ್ಲಿಂಗ್, ಮೇಸನ್ ಮೌಂಟ್, ಜ್ಯಾಕ್ ಗ್ರೀಲಿಶ್ ಮತ್ತು ಬುಕಾಯೊ ಸಕಾ ಅವರಂತಹ ಆಟಗಾರರು ಇದ್ದಾರೆ. ಕೇನ್ ವಿಶ್ವದ ಅತ್ಯುತ್ತಮ ಸ್ಟ್ರೈಕರ್‌ಗಳಲ್ಲಿ ಒಬ್ಬರು. ತರಬೇತುದಾರರು ಉತ್ತಮ ಫಾರ್ಮ್‌ನಲ್ಲಿರುವ ಮಾರ್ಕಸ್ ರಾಶ್‌ಫೋರ್ಡ್ ಅವರನ್ನು ಸಹ ಅವಲಂಬಿಸಬಹುದು.

ಆಕ್ರಮಣಕಾರಿ ಪೋರ್ಚುಗಲ್

ಆಕ್ರಮಣಕಾರಿ ಪೋರ್ಚುಗಲ್

ವಿಶ್ವಕಪ್‌ನಲ್ಲಿ ಪೋರ್ಚುಗಲ್ ತಂಡ ಎಂಟನೇ ಬಾರಿಗೆ ತನ್ನ ಅಸ್ತಿತ್ವವನ್ನು ದಾಖಲಿಸಲು ಇಳಿಯಲಿದೆ. ಕೋಚ್ ಫೆರ್ನಾಂಡೊ ಸ್ಯಾಂಟೋಸ್ ತಮ್ಮ ತಂಡವು ಈ ಸುವರ್ಣ ಅವಕಾಶವನ್ನು ಬಿಡುವುದಿಲ್ಲ ಎಂದು ಹಾರೈಸಿದ್ದಾರೆ. ತಂಡವು ಫುಟ್ಬಾಲ್ ಇತಿಹಾಸದಲ್ಲಿ ಅಗ್ರ ಗೋಲ್ ಸ್ಕೋರರ್ ಕ್ರಿಸ್ಟಿಯಾನೊ ರೊನಾಲ್ಡೊ ರೂಪದಲ್ಲಿ ಟ್ರಂಪ್ ಕಾರ್ಡ್ ಹೊಂದಿದೆ. ರೊನಾಲ್ಡೊ ಜೊತೆಗೆ ಜೋವೊ ಫೆಲಿಕ್ಸ್, ರಾಫೆಲ್ ಲಿಯೊ ಮತ್ತು ಯುವ ವಿಗರ್ ಉಪಸ್ಥಿತಿಯಿಂದ ತಂಡಕ್ಕೆ ಹೆಚ್ಚು ಆಕ್ರಮಣಕಾರಿ ಆಟ ಆಡಲು ಅವಕಾಶವಿದೆ.

ಅರ್ಜೆಂಟೀನಾ

ಈ ತಂಡ ಬಹುಶಃ ಲೆಜೆಂಡರಿ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಕೊನೆಯ ವಿಶ್ವಕಪ್ ಆಗಿದೆ. ಮೆಸ್ಸಿ ಕ್ಲಬ್ ಮತ್ತು ಅವರ ರಾಷ್ಟ್ರೀಯ ತಂಡಕ್ಕಾಗಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅರ್ಜೆಂಟೀನಾ ತಂಡದ ದಾಳಿಯಲ್ಲಿ ಸಾಕಷ್ಟು ದಾಖಲೆಗಳಿವೆ. ಮೆಸ್ಸಿ ಹೊರತುಪಡಿಸಿ ಅನುಭವಿ ಏಂಜೆಲ್ ಡಿ ಮಾರಿಯಾ, ಲೌಟಾರೊ ಮಾರ್ಟಿನೆಜ್ ಅವರು ಸ್ಟ್ರೈಕರ್ ಆಗಿ ಕೋಚ್‌ನ ಮೊದಲ ಆಯ್ಕೆಯಾಗಿರುತ್ತಾರೆ. ಜೂಲಿಯನ್ ಅಲ್ವಾರೆಜ್ ಅವರ ಬ್ಯಾಕಪ್ ಆಗಿ ಉಪಸ್ಥಿತರಿರುತ್ತಾರೆ.

English summary
Now that the World Cup of 2022 is just two weeks away, let's see which national football team has the best-attacking arsenal available to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X