RCB: ಐಪಿಎಲ್ ಕಪ್ ಖರೀದಿ ಮಾಡಲು ಹಣ ಉಳಿಸುತ್ತಿರುವ ಆರ್‌ಸಿಬಿ! ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಎಲ್ಲಾ ತಂಡಗಳು ಬಲಿಷ್ಠ ತಂಡವನ್ನು ಕಟ್ಟುವಲ್ಲಿ ನಿರತವಾಗಿವೆ. ಈಗಾಗಲೇ ಬಹುತೇಕ ತಂಡಗಳು ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವ ಆಟಗಾರರನ್ನು ಖರೀದಿ ಮಾಡಿದ್ದಾರೆ. 83 ಕೋಟಿ ರೂಪಾಯಿ ಪರ್ಸ್‌ನೊಂದಿಗೆ ಮೆಗಾ ಹರಾಜಿಗೆ ಹೋಗಿದ್ದ ಆರ್ ಸಿಬಿ ಹಲವು ಪ್ರಮುಖ ಆಟಗಾರರಿಗೆ ಬಿಡ್ ಮಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಮುಖ್ಯವಾಗಿ ಕೆಎಲ್ ರಾಹುಲ್, ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್, ಕಗಿಸೋ ರಬಾಡ, ಯುಜ್ವೇಂದ್ರ ಚಹಾಲ್‌ರನ್ನು ಖರೀದಿ ಮಾಡಲು ಆಸಕ್ತಿ ತೋರದೇ ಇರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತು. ಕನ್ನಡಿಗ ಕೆಎಲ್ ರಾಹುಲ್‌ರನ್ನು ಆರ್ ಸಿಬಿ ಖರೀದಿ ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರೂ ಆರ್ ಸಿಬಿ ನಿರಾಸೆ ಮೂಡಿಸಿತು.

ಮೊದಲ ಎರಡು ಸೆಟ್ ಆಟಗಾರರ ಹರಾಜು ಮುಗಿದರೂ ಆರ್ ಸಿಬಿ ಒಬ್ಬ ಆಟಗಾರನನ್ನೂ ಖರೀದಿ ಮಾಡಲಿಲ್ಲ. ಆರ್ ಸಿಬಿ ಫ್ರಾಂಚೈಸಿ ನಿರ್ಧಾರ ನೋಡಿದ ಅಭಿಮಾನಿಗಳು ಸಿಟ್ಟಾಗಿದ್ದು, ಇದೆಂತಹಾ ಮ್ಯಾನೇಜ್‌ಮೆಂಟ್ ಗುರು ಎಂದು ತಲೆ ಚಚ್ಚಿಕೊಂಡಿದ್ದಾರೆ.
Never seen bigger clowns than RCB management
— Aarav (@sigma__male_) November 24, 2024
Could have bagged Miller or Buttler easily pic.twitter.com/1AB5BehpNn
ಬಗೆ ಬಗೆಯಲ್ಲಿ ಟ್ರೋಲ್
ಆರ್ ಸಿಬಿ ಮೊದಲ ಎರಡು ಸೆಟ್‌ನಲ್ಲಿ ಆರ್ ಸಿಬಿ ಯಾರಿಗೂ ಬಿಡ್ ಮಾಡದೇ ಇರುವುದನ್ನು ನೋಡಿದ ಅಭಿಮಾನಿಗಳು ಭಾರಿ ಟ್ರೋಲ್ ಮಾಡಿದ್ದಾರೆ. ಆರ್ ಸಿಬಿ ಮ್ಯೂಚುಯಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡಲು ಹಣವನ್ನು ಉಳಿಸುತ್ತಿದೆ ಎಂದು ಕೆಲವು ಕಾಲೆಳೆದಿದ್ದಾರೆ.
RCB management should just put all the money in mutual funds & refund fans after every match. 👌#IPLAuction2025
— Shridhar V (@iimcomic) November 24, 2024
ಇನ್ನೂ ಹಲವು ಅಭಿಮಾನಿಗಳು ಆರ್ ಸಿಬಿ ಕಪ್ ಖರೀದಿ ಮಾಡಲು ಎಲ್ಲಾ ಹಣವನ್ನು ಉಳಿಸಿಕೊಳ್ಳುತ್ತಿದೆ ಎಂದು ಟ್ರೋಲ್ ಮಾಡಿದ್ದಾರೆ. ಇನ್ನೂ ಹಲವು ನೆಟ್ಟಿಗರು ವಿರಾಟ್ ಕೊಹ್ಲಿ ಮಗನಿಗೆ ಲಂಡನ್‌ನಲ್ಲಿ ಸ್ಕೂಲ್ ಫೀಸ್ ಕಟ್ಟಲು ಹಣವನ್ನು ಉಳಿಸಿಕೊಳ್ಳುತ್ತಿದೆ ಎಂದು ತಮಾಷೆ ಮಾಡಿದ್ದಾರೆ.
Rumours saying RCB management saving the money for Aakay’s School fees in London🫡 pic.twitter.com/3iIdPCwH4q
— TukTuk Academy (@TukTuk_Academy) November 24, 2024
ಇನ್ನಷ್ಟು ಅಭಿಮಾನಿಗಳು ಆರ್ ಸಿಬಿ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲು ಕಾಸು ಉಳಿಸಿಕೊಳ್ಳುತ್ತಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಹಲವು ಕರ್ನಾಟಕದ ಕ್ರಿಕೆಟಿಗರು ಕೂಡ ಆರ್ ಸಿಬಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಎಲ್ ರಾಹುಲ್‌ರನ್ನು ಖರೀದಿ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.
ಅಭಿನವ್ ಮನೋಹರ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್ ರಂತಹ ಕರ್ನಾಟಕದ ಆಟಗಾರರನ್ನು ಕೂಡ ಆರ್ ಸಿಬಿ ಖರೀದಿ ಮಾಡಿಲ್ಲ.












Click it and Unblock the Notifications