ಆರ್‌ಸಿಬಿ ಕಪ್ ಗೆದ್ದ ಖುಷಿಗೆ ರಾತ್ರಿ ಪೂರ್ತಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಭ್ರಮ ಆಚರಿಸಿದ ಫ್ಯಾನ್ಸ್!
ಆರ್‌ಸಿಬಿ ಕಪ್ ಗೆದ್ದಿದ್ದೇ ತಡ, ಬೆಂಗಳೂರಿನಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ದೆಹಲಿಯಲ್ಲಿ ನಡೆದ 2024ರ ಡಬ್ಲ್ಯೂಪಿಎಲ್ (WPL) ಫೈನಲ್ ಪಂದ್ಯದಲ್ಲಿ ನಮ್ಮ ಆರ್‌ಸಿಬಿ ಹುಡುಗಿಯರು ದೆಹಲಿ ತಂಡಕ್ಕೆ ಮಣ್ಣು ಮುಕ್ಕಿಸಿ ಕಪ್ ಗೆದ್ದಿದ್ದಾರೆ. ಈ ಮೂಲಕ ಆರ್‌ಸಿಬಿ ಟೀಂ ಮೊಟ್ಟ ಮೊದಲ ಬಾರಿಗೆ ಕಪ್ ಗೆದ್ದಿದೆ. ಹೀಗಾಗಿಯೇ ನಿನ್ನೆ ರಾತ್ರಿ ಪೂರ್ತಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಭ್ರಮಿಸಿದ್ದಾರೆ ಫ್ಯಾನ್ಸ್, ಆ ವಿಡಿಯೋಗಳನ್ನ ನೋಡಲು ಮುಂದೆ ಓದಿ.
ಅದು ಬರೀ ಕನಸಲ್ಲ, ಅದು 7 ಕೋಟಿ ಕನ್ನಡಿಗರ ಜೀವನದ ಗುರಿ ಕೂಡ ಆಗಿತ್ತು. ನಮ್ಮ ಆರ್‌ಸಿಬಿ ತಂಡ ಕಪ್ ಗೆದ್ದಿಲ್ಲ ಎನ್ನುವ ಬೇಸರ, ಕನ್ನಡ ನಾಡಿನ ಜನರನ್ನು ಕಾಡುತ್ತಿತ್ತು. ಹೀಗಾಗಿಯೇ ಆರ್‌ಸಿಬಿ ಕಪ್ ಗೆಲ್ಲುತ್ತೆ, ಆರ್‌ಸಿಬಿ ಕಪ್ ಗೆಲ್ಲುತ್ತೆ ಅಂತಾ ಕಾಯುತ್ತಲೇ ಇದ್ದರು ಇಡೀ ಜಗತ್ತಿನ ಅತ್ಯಂತ ನಿಷ್ಠಾವಂತ ಅಭಿಮಾನಿಗಳು. ಆದರೆ ಹುಡುಗರ ತಂಡ ಮಾತ್ರ ಈ ಸಾಧನೆ ಮಾಡಲೇ ಇಲ್ಲ. ಬೆಂಗಳೂರು ಹುಡುಗರ ತಂಡ ಅಂದ್ರೆ ಆರ್‌ಸಿಬಿ (RCB) ಮೆನ್ಸ್ ಟೀಂ ಇದುವರೆಗೂ IPL ಅಖಾಡದಲ್ಲಿ ಕಪ್ ಗೆಲ್ಲಲು ಆಗಿಲ್ಲ. ಆದರೂ, IPL ರೀತಿಯಲ್ಲೇ ನಡೆದಿರುವ WPL ಫೈನಲ್ಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ ನಮ್ಮ ಆರ್‌ಸಿಬಿ ಹುಡುಗಿಯರು. ಹಾಗಾದರೆ ಆರ್‌ಸಿಬಿ ಫ್ಯಾನ್ಸ್ ಸಂಭ್ರಮ ಹೆಂಗಿತ್ತು ಗೊತ್ತಾ? ವಿಡಿಯೋಗಾಗಿ ಮುಂದೆ ಓದಿ.

ಆರಂಭದಲ್ಲೇ ಆರ್‌ಸಿಬಿಗೆ ಗೆಲುವು!
ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಟೀಂ, ಆರ್‌ಸಿಬಿ ಟೀಂ ಹುಡುಗಿಯರ ಬೌಲಿಂಗ್ ದಾಳಿಗೆ ಪೀಸ್ ಪೀಸ್ ಆಗಿ ಹೋಗಿತ್ತು. ಈ ಮೂಲಕ ಕೇವಲ 113 ರನ್‌ಗಳಿಗೆ ಈ ದೆಹಲಿ ತಂಡವು ಆಲೌಟ್ ಆಗಿ ಹೋಗಿತ್ತು. 114 ರನ್‌ಗಳ ಗುರಿ ಬೆನ್ನುಹತ್ತಿದ್ದ, ನಮ್ಮ ಆರ್‌ಸಿಬಿ ಹುಡುಗಿಯರು ಇತಿಹಾಸ ನಿರ್ಮಿಸಿದ್ದಾರೆ. ಕೇವಲ 2 ವಿಕೆಟ್ ಕಳೆದುಕೊಂಡು ನಮ್ಮ ಆರ್‌ಸಿಬಿ ತಂಡ ದೆಹಲಿ ಕ್ಯಾಪಿಟಲ್ಸ್ ನೀಡಿದ್ದ 114 ರನ್ ಗುರಿ ಮುಟ್ಟಿದೆ. ಈ ಮೂಲಕ 17 ವರ್ಷಗಳ ನಂತರ ಆರ್‌ಸಿಬಿ ಕಪ್ ಗೆದ್ದಿದೆ. ಈ ಕಾರಣಕ್ಕೆ ಆರ್‌ಸಿಬಿ ಫ್ಯಾನ್ಸ್ ಬೆಂಗಳೂರಿನ ಬೀದಿ ಬೀದಿಗಳಲ್ಲು ಸಂಭ್ರಮ ಆಚರಿಸಿದ್ದಾರೆ.
RCB Winning celebration 🎉🎉
— ♞ ದೊಡ್ಡವರು в𝐢ق 𝐃คĎĎㄚ ♜ (@shivanna_fan1) March 17, 2024
Congratulations RCB pic.twitter.com/ViVIkTpIwc
ಕಣ ಕಣದಲ್ಲೂ ಆರ್‌ಸಿಬಿ ತಂಡ!
ಕನ್ನಡಿಗರ ಕಣ ಕಣದಲ್ಲೂ ಬೆರೆತು ಹೋಗಿರುವ ಆರ್‌ಸಿಬಿ ತಂಡಕ್ಕೆ ನಿನ್ನೆಯ ದಿನ ಅಂದ್ರೆ 2024 ಮಾರ್ಚ್ 17 ಎಂದೆಂದಿಗೂ ಮರೆಯಲು ಆಗದ ದಿನ. ಈ ದಿನವನ್ನು ಕನ್ನಡಿಗರು ಅದರಲ್ಲೂ ಕ್ರಿಕೆಟ್ ಅಭಿಮಾನಿಗಳು, ಇದನ್ನೂ ಮೀರಿ RCBಯ ಪಕ್ಕಾ ಫ್ಯಾನ್ಸ್ ತಮ್ಮ ಜೀವ ಇರುವವರೆಗೂ ಮರೆಯಲ್ಲ. ಯಾಕಂದ್ರೆ ಅಭಿಮಾನಿಗಳು ಕಳೆದ 16 ವರ್ಷಗಳಿಂದಲೂ ಉಸಿರು ಬಿಗಿ ಹಿಡಿದು ಯಾವ ದಿನಕ್ಕಾಗಿ ಕಾಯುತ್ತಾ ಇದ್ದರೋ ಆ ದಿನ ನಿನ್ನೆ ಬಂದೇ ಬಿಟ್ಟಿತ್ತು. ಈ ಮೂಲಕ ನಮ್ಮ ಆರ್‌ಸಿಬಿ (Royal Challengers Bengaluru) ತಂಡ ಕಪ್ ಗೆದ್ದೇ ಬಿಟ್ಟಿದೆ, ಇದೇ ಕಾರಣಕ್ಕೆ ನಿದ್ದೆ ಬಿಟ್ಟು ಬೆಂಗಳೂರು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

MADNESS IN BANGALORE 🤯
— Riya Agrahari 🇵🇸🍉🔻 (@Riyaagrahari8) March 18, 2024
- Fans went crazy after maiden trophy win of the RCB🫠😂
Congratulations RCB.#WPLFinal #WPL2024 #RCBvDC #SmritiMandhana pic.twitter.com/2wVeWWY0UE
ಒಟ್ನಲ್ಲಿ ಹೀಗೆ ಆರ್‌ಸಿಬಿ ತಂಡ ಕಪ್ ಗೆದ್ದ ನಂತರ ಸಂಭ್ರಮ ಬಲು ಜೋರಾಗಿದೆ. ಇದೀಗ ಹುಡುಗಿಯರ ತಂಡ ಕಪ್ ಗೆದ್ದ ರೀತಿಯೇ, ಹುಡುಗರ ತಂಡ ಕೂಡ ಕಪ್ ಗೆಲ್ಲಲಿ ಅಂತಾ ಆರ್‌ಸಿಬಿ ಅಭಿಮಾನಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನದಲ್ಲಿ WPL ರೀತಿಯೇ IPL ಟೂರ್ನಿ ಕೂಡ ಶುರುವಾಗಲಿದ್ದು, ಆರ್‌ಸಿಬಿ ಹುಡುಗರ ತಂಡ ಕೂಡ ಕಪ್ ಗೆಲ್ಲುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications