Saurav Chauhan: 13 ಎಸೆತಗಳಲ್ಲೇ ಅರ್ಧಶತಕ; ಸೌರವ್ ಚೌಹಾಣ್ ಐಪಿಎಲ್ ಸಂಬಳ, ಟಿ20 ಅಂಕಿಅಂಶ
ಸೌರವ್ ಚೌಹಾಣ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದಾರೆ. ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೌಹಾಣ್ ಮೊದಲ ಅವಕಾಶ ಪಡೆದುಕೊಂಡಿದ್ದಾರೆ.
ಈ ಬಾರಿ ಐಪಿಎಲ್‌ನಲ್ಲಿ ವಿವಿಧ ತಂಡಗಳಲ್ಲಿ ಭಾರತದ ಯುವ ಬ್ಯಾಟರ್ ಗಳು ಮಿಂಚುತ್ತಿದ್ದಾರೆ. ಇದರಿಂದಲೇ ಸೌರವ್ ಚೌಹಾಣ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಸೌರವ್ ಚೌಹಾಣ್, ಎಡಗೈ ಬ್ಯಾಟರ್ ಆಗಿದ್ದು ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ದೇಶೀಯ ಟೂರ್ನಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನೆಟ್ಸ್‌ನಲ್ಲಿ ಅವರ ಬ್ಯಾಟಿಂಗ್ ನೋಡಿದ ಬಳಿಕ ಅವರಿಗೆ ತಂಡದಲ್ಲಿ ಆಡುವ ಅವಕಾಶ ನೀಡಲಾಗಿದೆ.
ಯಾರು ಈ ಸೌರವ್ ಚೌಹಾಣ್
ಸೌರವ್ ಚೌಹಾಣ್ ಮೇ 27, 2000 ಇಸವಿಯಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದರು. 23 ವರ್ಷದ ಎಡಗೈ ಬ್ಯಾಟರ್ ಸ್ಫೋಟಕ ಬ್ಯಾಟರ್. ದೇಶೀಯ ಟೂರ್ನಿಯಲ್ಲಿ ಅವರು ಗುಜರಾತ್ ತಂಡಕ್ಕಾಗಿ ಆಡುತ್ತಾರೆ.
ದೇಶೀಯ ಕ್ರಿಕೆಟ್‌ನಲ್ಲಿ 19 ಟಿ20 ಪಂದ್ಯಗಳನ್ನಾಡಿರುವ ಅವರು 29 ಸರಾಸರಿಯಲ್ಲಿ 464 ರನ್ ಗಳಿಸಿದ್ದಾರೆ. 152.13 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಅಜೇಯ 84 ರನ್ ಗಳಿಸಿರುವುದು ಅವರ ಅತ್ಯಧಿಕ ಸ್ಕೋರ್ ಆಗಿದೆ.
13 ಬಾಲ್‌ನಲ್ಲಿ ಅರ್ಧಶತಕ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 13-ಬಾಲ್‌ಗಳಲ್ಲಿ ಸೌರವ್ ಚೌಹಾಣ್ ವೇಗದ ಅರ್ಧಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. ಇದು ಅವರ ಬ್ಯಾಟಿಂಗ್ ಶೈಲಿಗೆ ಹಿಡಿದ ಕೈಗನ್ನಡಿಯಾಗಿದೆ. ಅಶುತೋಷ್ ಶರ್ಮಾ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಚೌಹಾಣ್ ಅವರ ದಾಖಲೆ ಮುರಿದರು.
ಐಪಿಎಲ್ 2024 ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ವರ್ಷದ ಯುವಕನನ್ನು ₹20 ಲಕ್ಷಗಳ ಮೂಲ ಬೆಲೆಗೆ ತೆಗೆದುಕೊಂಡಿದೆ. ಅದೇ ವರ್ಷದ ನಂತರ ಡಿಸೆಂಬರ್‌ನಲ್ಲಿ ವಿಜಯ್ ಹಜಾರೆ ಟ್ರೋಫಿ ಲಿಸ್ಟ್ ಎ ಗೆ ಚೌಹಾಣ್ ಪಾದಾರ್ಪಣೆ ಮಾಡಿದರು.
ಮೊದಲ ಪಂದ್ಯದಲ್ಲೇ ನಿರಾಸೆ!
ಇನ್ನು ಸೌರವ್ ಚೌಹಾಣ್ ಆಡಿದ ಮೊದಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ. 6 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ಔಟಾಗಿದ್ದಾರೆ.












Click it and Unblock the Notifications