David Lawrence: ಇಂಗ್ಲೆಂಡ್‌ನ ಮಾಜಿ ವೇಗಿ ಡೇವಿಡ್ ಲಾರೆನ್ಸ್ ನಿಧನ
David Lawrence Passes Away: ಇಂಗ್ಲೆಂಡ್‌ನ ಮಾಜಿ ವೇಗಿ ಡೇವಿಡ್ ಲಾರೆನ್ಸ್ (61) ಭಾನುವಾರ ನಿಧನರಾದರು. ಈ ಹಿನ್ನೆಲೆ ಗೌರವಾರ್ಥವಾಗಿ ಹೆಡ್ಡಿಂಗ್ಲೆಯಲ್ಲಿ ಭಾರತ-ಇಂಗ್ಲೆಂಡ್ ಕ್ರಿಕೆಟ್ ತಂಡಗಳ ಆಟಗಾರರು ಮೊದಲ ಟೆಸ್ಟ್‌ನ 3ನೇ ದಿನವಾದ ಅಂದು ಕೈಗೆ ಕಪ್ಪು ಪಟ್ಟಿ ಧರಿಸಿ ಆಟ ಆಡಿದರು.
ಅಲ್ಪಾವಧಿಯ ಅಂರಾಷ್ಟ್ರೀತ ವೃತ್ತಿಜೀವನದಲ್ಲಿ ಗಮನಾರ್ಹ ಕೊಡುಗೆ ನೀಡಿದ ಇಂಗ್ಲೆಂಡ್ ಮಾಜಿ ವೇಗಿಗೆ ಗೌರವದ ಸಂಕೇತವಾಗಿ ಹೆಡ್ಡಿಂಗ್ಲೆಯಲ್ಲಿ ಎರಡು ತಂಡಗಳಿಂದಲೂ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು.

ಇಂಗ್ಲೇಂಡ್ ಮಾಜಿ ವೇಗಿ ಡೇವಿಡ್ ಲಾರೆನ್ಸ್ ನಿಧನರಾಗಿದ್ದು, ಈ ಹಿನ್ನೆಲೆ ಅವರಿಗೆ ಭಾರತ-ಇಂಗ್ಲೆಂಡ್ ಆಟಗಾರರು ಗೌರವ ಸಲ್ಲಿಸಿದ್ದಾರೆ. ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಲೀಡ್ಸ್‌ನ ಹೆಡಿಂಗ್ಲೆ ಪಂದ್ಯದ ಮೂರನೇ ದಿನವಾದ ಜೂನ್ 22 ಎರಡೂ ತಂಡಗಳ ಆಟಗಾರರು ಮತ್ತು ತೀರ್ಪುಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿದರು.
ಡೇವಿಡ್ ಲಾರೆನ್ಸ್ ಅವರು 61ನೇ ವಯಸ್ಸಿನಲ್ಲಿ, ಜೂನ್ 22ರಂದು ನಿಧನರಾದರು. ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದರು, ಇದು ಜೂನ್ 2024ರಲ್ಲಿ ಪತ್ತೆ ಆಗಿತ್ತು. ವೈದ್ಯ ತಜ್ಞರ ಪ್ರಕಾರ ಇದು ಒಂದು ಗಂಭೀರ ಮತ್ತು ಗುಣಪಡಿಸಲಾಗದ ಕಾಯಿಲೆ ಆಗಿದ್ದು, ಮೆದುಳು ಮತ್ತು ನರಮಂಡಲದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ಕಾಯಿಲೆಯಿಂದಾಗಿ ವ್ಯಕ್ತಿಯ ದೈಹಿಕ ಸಾಮರ್ಥ್ಯ ಕ್ಷೀಣಿಸುತ್ತಿರುತ್ತದೆ ಮತ್ತು ರೋಗಿಗಳು ಸಾಮಾನ್ಯವಾಗಿ ಅಲ್ಪಾವಧಿಯವರೆಗೆ ಮಾತ್ರ ಬದುಕುವ ಸಾಧ್ಯತೆಯಿರುತ್ತದೆ.
ಡೇವಿಡ್ ಲಾರೆನ್ಸ್ ಸಾಧನೆ: ಡೇವಿಡ್ ಲಾರೆನ್ಸ್ ಅವರು ಬಲಗೈ ವೇಗದ ಬೌಲರ್ ಆಗಿ, ಇಂಗ್ಲೆಂಡ್ ತಂಡಕ್ಕಾಗಿ 5 ಟೆಸ್ಟ್ ಮತ್ತು 1 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ, 37.55ರ ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ, 60 ರನ್‌ಗಳನ್ನು ಸಿಡಿಸಿದ್ದಾರೆ. ಇನ್ನು ODIನಲ್ಲಿ ಅವರು 4 ವಿಕೆಟ್‌ಗಳನ್ನ ಪಡೆದಿದ್ದಾರೆ.
ಆದರೆ, 1992ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಲಾರೆನ್ಸ್ ಗಂಭೀರವಾಗಿ ಗಾಯಗೊಂಡರು. ಬೌಲಿಂಗ್ ಮಾಡುವ ವೇಳೆ ಅವರ ಮೊಣಕಾಲು ಮುರಿದಿತ್ತು. ಇದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಫುಲ್ ಸ್ಟಾಪ್ ಇಟ್ಟಾಂತಾಯಿತು.
ಅಂತಾರಾಷ್ಟ್ರೀಯ ವೃತ್ತಿಜೀವನ ಗಾಯದಿಂದ ಕೊನೆಗೊಂಡರೂ ಸಹ ಡೇವಿಡ್ ಲಾರೆನ್ಸ್ ದೇಶೀಯ ಕ್ರಿಕೆಟ್‌ನಲ್ಲಿ ಗ್ಲೌಸೆಸ್ಟರ್‌ಶೈರ್ ತಂಡವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. 185 ಪ್ರಥಮ ದರ್ಜೆ ಪಂದ್ಯಗಳಲ್ಲಿ, 32.07ರ ಸರಾಸರಿಯಲ್ಲಿ 515 ವಿಕೆಟ್‌ಗಳನ್ನ ಕಬಳಿಸಿದ್ದು, 1,851 ರನ್‌ಗಳನ್ನು ಕಲೆಹಾಕಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ 113 ಪಂದ್ಯಗಳಲ್ಲಿ 26.43ರ ಸರಾಸರಿಯಲ್ಲಿ 155 ವಿಕೆಟ್ ಪಡೆದಿದ್ದು, 292 ರನ್‌ಗಳನ್ನು ಕಲೆಹಾಕಿದ್ದಾರೆ.












Click it and Unblock the Notifications