ಕ್ರಿಕೆಟ್ ಹೇಳಿಕೊಟ್ಟ ಇಂಗ್ಲಿಷರಿಗೆ ಇದೆಂತಹ ಹೀನಾಯ ಸ್ಥಿತಿ?
ಅದು 16ನೇ ಶತಮಾನ, ಆಗ 2 ಘಟನೆ ನಡೆದವು. ಒಂದು ಕಡೆ ಇಂಗ್ಲಿಷರು ಭಾರತಕ್ಕೂ ಬಂದರು, ಹಾಗೇ ಕ್ರಿಕೆಟ್ ಎಂಬ ಅದ್ಭುತ ಶ್ರೀಮಂತ ಆಟವನ್ನೂ ಕಂಡು ಹಿಡಿದರು. ಹೀಗೆ ಕ್ರಿಕೆಟ್ ಆಟ ಶುರುವಾಗಿ ಭರ್ಜರಿ 400 ವರ್ಷಗಳೇ ಕಳೆದಿದೆ. ಆದರೆ ಕ್ರಿಕೆಟ್ ಆಟವನ್ನು ಈ ಜಗತ್ತಿಗೆ ಕಲಿಸಿಕೊಟ್ಟ ಇಂಗ್ಲೆಂಡ್ ಮಾತ್ರ, ಕ್ರಿಕೆಟ್‌ನಲ್ಲಿ ದಿನದಿಂದ ದಿನಕ್ಕೆ ಹೀನಾಯವಾದ ಪ್ರದರ್ಶನ ನೀಡುತ್ತಿದೆ. ಅದ್ರಲ್ಲೂ ಭಾರತದ ವಿರುದ್ಧ ಇಂಗ್ಲೆಂಡ್ ಟೀಂ ಸ್ಥಿತಿ ಹೀನಾಯವೇ ಆಗಿ ಹೋಗಿದೆ.
ಭಾರತ & ಇಂಗ್ಲೆಂಡ್ ನಡುವೆ 4ನೇ ಟೆಸ್ಟ್ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಹೀನಾಯ ಸೋಲು ಬಹುತೇಕ ಗ್ಯಾರಂಟಿ ಆಗಿದೆ. ಆದರೆ ಇಲ್ಲಿ ಇದೀಗ ಉದ್ಭವಿಸಿರುವ ಪ್ರಮುಖ ಪ್ರಶ್ನೆ ಏನು ಅಂದ್ರೆ, ಜಗತ್ತಿಗೆ ಕ್ರಿಕೆಟ್ ಪಾಠ ಮಾಡಿರುವ ಆಂಗ್ಲರ ಕ್ರಿಕೆಟ್ ತಂಡಕ್ಕೆ ಏನ್ ಆಗಿದೆ? ಅನ್ನೋದು. ಯಾಕಂದ್ರೆ ಇಂಗ್ಲೆಂಡ್ ಕ್ರಿಕೆಟ್ ತಂಡವು ಹೀಗೆ ಹೀನಾಯವಾಗಿ ಕ್ರಿಕೆಟ್ ಆಡುತ್ತಿರುವುದು ನೋಡಿದರೆ, ಆಂಗ್ಲರ ಭವಿಷ್ಯ ಡೊಲಾಯಮಾನ ಆಗಿದೆ. ಇನ್ನು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಇಂಗ್ಲೆಂಡ್ ಯಾವ ಸ್ಥಾನವನ್ನ ಪಡೆದಿದೆ ಗೊತ್ತೆ?

ಭಾರತದ ಎದುರು ಇಂಗ್ಲೆಂಡ್ ಡಮ್ಮಿ?
ಕ್ರಿಕೆಟ್ ಆಟವನ್ನು ಇಂಗ್ಲಿಷರೇ ಕಲಿಸಿಕೊಟ್ಟಿದ್ದಾರೆ, ಆದರೆ ಭಾರತ ಈಗ ಕ್ರಿಕೆಟ್ ಜಗತ್ತನ್ನು ಆಳುತ್ತಿದೆ. ಅದರಲ್ಲೂ ಭಾರತ ತಂಡದ ಅದ್ಭುತ ಪ್ರದರ್ಶನಕ್ಕೆ ಇಂಗ್ಲೆಂಡ್ ಕ್ರಿಕೆಟ್ ಟೀಂನ ಆಟಗಾರರು ಬೆಚ್ಚಿಬಿದ್ದಿದ್ದಾರೆ. ಈ ಮಾತು ಇದೀಗ 4ನೇ ಟೆಸ್ಟ್ ಕ್ರಿಕೆಟ್ ಮ್ಯಾಚ್‌ನಲ್ಲಿ ಕೂಡ ನಿಜವಾಗುತ್ತಿದೆ.
ಯಾಕಂದ್ರೆ ಈ ಪಂದ್ಯದಲ್ಲಿ ಕೂಡ ಇಂಗ್ಲೆಂಡ್ ಹೀನಾಯವಾಗಿ ಸೋಲನ್ನ ಕಾಣುವ ಸ್ಥಿತಿ ಎದುರಾಗಿದೆ. ಇನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿಯು ಇಂಗ್ಲೆಂಡ್ 8ನೇ ಸ್ಥಾನಕ್ಕೆ ಕುಸಿದು ಬಿದ್ದಿದೆ. ಆದರೆ ಭಾರತ 2ನೇ ಸ್ಥಾನದಲ್ಲಿದೆ. ಹಾಗಾದರೆ ಇಂಗ್ಲೆಂಡ್ ತಂಡ ಭಾರತ ಕ್ರಿಕೆಟ್ ಟೀಂ ಎದುರು, ಡಮ್ಮಿ ಆಗುತ್ತಿದೆಯಾ? ಮುಂದೆ ಓದಿ.

ಪಟ ಪಟನೆ ಇಂಗ್ಲೆಂಡ್ ಆಲೌಟ್
2ನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ, ಆರಂಭದಲ್ಲೇ ಭಾರತ ಬೌಲರ್‌ಗಳ ಏಟಿಗೆ ನಲುಗಿ ಹೋಗಿತ್ತು. ಅದರಲ್ಲೂ ಇಂಗ್ಲೆಂಡ್ ತಂಡದ ಪರ ಝಾಕ್ ಕ್ರಾಲಿ ಅವರನ್ನು ಬಿಟ್ಟರೆ, ಇನ್ಯಾವುದೇ ಆಟಗಾರ ಕೆಚ್ಚೆದೆಯ ಹೋರಾಟ ತೋರಿಸಲೇ ಇಲ್ಲ. ಹೀಗಾಗಿ ತನ್ನ ಸಾಲು ಸಾಲು ವಿಕೆಟ್ ಕಳೆದುಕೊಂಡಿತು ಇಂಗ್ಲೆಂಡ್ ಕ್ರಿಕೆಟ್ ತಂಡ, 19 ರನ್ ಆಗಿದ್ದಾಗಲೇ ತನ್ನ ಮೊದಲ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್. ನೋಡ ನೋಡುತ್ತಲೇ ಕೇವಲ 145ಕ್ಕೆ ಆಲೌಟ್ ಆಗಿ ಗೂಡು ಸೇರಿದೆ. ಹೀಗೆ ಇಂಗ್ಲೆಂಡ್ ನೀಡಿರುವ 192 ರನ್ ಗುರಿ ಬೆನ್ನುಹತ್ತಿದ ಭಾರತ ಈಗಾಗಲೇ ಅತ್ಯದ್ಭುತ ಆರಂಭ ಪಡೆದಿದೆ. ರೋಹಿತ್ ಶರ್ಮಾ ಮತ್ತು ಜೈಸ್ವಾಲ್‌ರ ಅಬ್ಬರದ ಆಟ ಶುರುವಾಗಿದೆ.
ಟೀಂ ಇಂಡಿಯಾಗೆ ಗೆಲುವು ಗ್ಯಾರಂಟಿ!
ಭಾರತ 2ನೇ ಇನ್ನಿಂಗ್ಸ್‌ನಲ್ಲಿ ಈಗಾಗಲೇ ವಿಕೆಟ್ ನಷ್ಟವಿಲ್ಲದೆ ಭರ್ಜರಿ 40 ರನ್ ಗಳಿಸಿದ್ದು, ಭಾರತ ಕ್ರಿಕೆಟ್ ತಂಡಕ್ಕೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ನೀಡಿತ್ತು. ಈ ಮೂಲಕ 4ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಸೋಲುಣಿಸುವ ಸ್ಕೆಚ್ ಹಾಕಿತ್ತು ಇಂಗ್ಲೆಂಡ್ ಟೀಂ. ಆದರೆ ಆಗಿದ್ದೆಲ್ಲಾ ಉಲ್ಟಾ, ಭಾರತ ತಂಡದ ಲೋವರ್ ಆರ್ಡರ್ ಕೊಟ್ಟ ಏಟಿಗೆ ಇಂಗ್ಲೆಂಡ್ ಕ್ರಿಕೆಟ್ ಟೀಂನ ಬೌಲರ್ಸ್ ಪಡೆ ಶೇಕ್ ಆಗಿತ್ತು. ಹೀಗೆ ನೋಡ ನೋಡುತ್ತಲೇ ಭಾರತ ತಂಡ ಕೂಡ ಸವಾಲಿನ ಮೊತ್ತ ಕಲೆಹಾಕಿತ್ತು. ಇದೀಗ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 145 ರನ್‌ಗಳಿಗೆ ತಮ್ಮ ಎಲ್ಲಾ ವಿಕೆಟ್ ಕಳೆದುಕೊಂಡಿರುವ ಇಂಗ್ಲಿಷರು, ಭಾರತ ಕ್ರಿಕೆಟ್ ತಂಡಕ್ಕೆ ಕೇವಲ 192 ರನ್‌ಗಳ ಗುರಿ ನೀಡಿದ್ದಾರೆ.












Click it and Unblock the Notifications