ಈ ಸಲ ಕಪ್ ನಮ್ದು: ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ; ವಿಡಿಯೋ ಕಾಲ್ ಮಾಡಿದ ಕಿಂಗ್ ಕೊಹ್ಲಿ!
17 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಪ್ರತಿ ಬಾರಿ ಆರ್ ಸಿಬಿ ಸೋತಾಗಲೂ ಆಟಗಾರರು ನಿರಾಸೆಗೊಂಡರೂ, ಈ ಸಲ ಕಪ್ ನಮ್ದೇ ಎಂದು ಆಟಗಾರರಿಗೆ ಸ್ಪೂರ್ತಿ ತುಂಬಿದ್ದು ಅಭಿಮಾನಿಗಳು. ಪ್ರತಿ ಸಲ ಸೋತಾಗಲೂ ಈ ಸಲ್ ಕಪ್ ನಿಮ್ದಲ್ಲ ಎಂದು ಕುಹುಕವಾಡಿದರೂ, ಕಾಲೆಳೆದರೂ ಅಭಿಮಾನಿಗಳ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ.
17 ವರ್ಷಗಳ ಕಾಯುವಿಕೆ, ನಿರಾಸೆ, ಹತಾಶೆ, ಪ್ರಶಸ್ತಿಯ ಬರವನ್ನು ಕೊನೆಗೊಳಿಸಿದ್ದಾರೆ ಆರ್ ಸಿಬಿ ಮಹಿಳಾ ತಂಡ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಆರ್ ಸಿಬಿ ಕಪ್ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಕಣ್ಣಂಚಲ್ಲಿ ನೀರು, ಅವರ ಸಂಭ್ರಮಕ್ಕೆ ಪಾರವೇ ಇಲ್ಲ, ಕಪ್ ಗೆದ್ದ ಆಟಗಾರ್ತಿಯರಿಗಿಂತ ಅಭಿಮಾನಿಗಳ ಸಂಭ್ರಮವೇ ಜೋರಾಗಿದೆ. ಬೆಂಗಳೂರಿನಲ್ಲಿ ಆರ್ ಸಿಬಿ ಗೆಲ್ಲುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇನ್ನು ಸೋಷಿಯಲ್ ಮೀಡಿಯಾದಲ್ಲಂತೂ ಅಭಿಮಾನಿಗಳ ಅಬ್ಬರ ಜೋರಾಗಿದೆ. ಕಪ್ ಗೆದ್ದ ಖುಷಿಯಲ್ಲಿ ಬೀಗುತ್ತಿದ್ದಾರೆ. ತಾವೇ ಕಪ್ ಗೆದ್ದಷ್ಟು ಸಂಭ್ರಮಿಸುತ್ತಿದ್ದಾರೆ. 16 ವರ್ಷಗಳಿಂದ ಪುರುಷರ ತಂಡ ಮಾಡದೇ ಇರುವುದನ್ನು, ಎರಡನೇ ವರ್ಷವೇ ಮಹಿಳಾ ತಂಡ ತೋರಿಸಿಕೊಟ್ಟಿದ್ದಾರೆ ಎಂದು ಹಾಡಿ ಹೊಗಳುತ್ತಿದ್ದಾರೆ.
ಕರೆ ಮಾಡಿದ ವಿರಾಟ್ ಕೊಹ್ಲಿ
ಆರ್ ಸಿಬಿ ಕಪ್ ಗೆಲ್ಲುತ್ತಿದ್ದಂತೆ ಕಿಂಗ್ ವಿರಾಟ್ ಕೊಹ್ಲಿ ಕೂಡ ವಿಡಿಯೋ ಕರೆ ಮಾಡಿ ಸ್ಮೃತಿ ಮಂದಾನ ಪಡೆಯನ್ನು ಅಭಿನಂದಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಟ್ವೀಟ್ ಮಾಡಿದ್ದು, ಅಭಿನಂದನೆ ಸಲ್ಲಿಸಿದರು.
ಆರ್ ಸಿಬಿ ಟ್ವೀಟ್ ಮಾಡಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದೆ. ಈ ಗೆಲುವು ಅಭಿಮಾನಿಗಳಿಗೆ ಅರ್ಪಣೆ ಎಂದು ಹೇಳಿದೆ.
ಹಲವು ಪ್ರಮುಖರು ಆರ್ ಸಿಬಿ ಗೆಲುವಿನ ಬಗ್ಗೆ ಟ್ವೀಟ್ ಮಾಡಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.
ಪ್ರಾಮಾಣಿಕ ಅಭಿಮಾನಕ್ಕೆ
— Rishab Shetty (@shetty_rishab) March 17, 2024
ಸಂದ ಪ್ರಥಮ ವಿಜಯೋತ್ಸವ ........
ಮೊದಲ ಬಾರಿಗೆ Trophy ಗೆದ್ದ RCB ಮಹಿಳಾ ತಂಡಕ್ಕೆ ಅಭಿನಂದನೆ.#SophieDevine @mandhana_smriti @EllysePerry @13richaghosh @shreyanka_patil @RCBTweets pic.twitter.com/Ha7JaJ0S14
Aaarceeebeeee! ❤️💛
— DK (@DineshKarthik) March 17, 2024
What a fantastic performance! Congratulations to all our girls! 🏆#WPLFinal pic.twitter.com/DzKCxD3por
Heartiest congratulations @RCBTweets on a memorable win.
— Venkatesh Prasad (@venkateshprasad) March 17, 2024
Wonderful effort from the whole team and Elysse Perry in particular was simply outstanding. pic.twitter.com/ghGA2vnKF9
"ಆನಂದ.. ಪರಮಾನಂದ.... ಪರಮಾನಂದ...." 🎶
— Yuzvendra Chahal (@yuzi_chahal) March 17, 2024
ನಮ್ಮ RCB ತಂಡಕ್ಕೆ ಅಭಿನಂದನೆಗಳು! ❤🔥 pic.twitter.com/Eqoqmdumrb
This is for you, 12th Man Army! This is for the most loyal fans in the world! We ❤️ you ♾️ 🤗#PlayBold #ನಮ್ಮRCB #SheIsBold #WPL2024 #WPLFinal #DCvRCB pic.twitter.com/odMXeJdwnE
— Royal Challengers Bangalore (@RCBTweets) March 17, 2024












Click it and Unblock the Notifications