Dutee chand: ನಿಷೇಧಿತ ಡ್ರಗ್‌ ಸೇವನೆ ಆರೋಪದ ಮೇಲೆ ದ್ಯುತಿ ಚಾಂದ್ ತಾತ್ಕಾಲಿಕ ಅಮಾನತು !

ನವದೆಹಲಿ, ಜನವರಿ18 : ಭಾರತದ ಸ್ಟಾರ್‌ ಓಟಗಾರ್ತಿ ಮತ್ತು ಹಾಲಿ 100 ಮೀಟರ್ ರಾಷ್ಟ್ರೀಯ ಚಾಂಪಿಯನ್ ದ್ಯುತಿ ಚಾಂದ್‌ ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಧೃಡಪಟ್ಟ ಹಿನ್ನೆಲೆಯಲ್ಲಿ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ (WADA) ನಡೆಸಿದ ಪರಿಕ್ಷೇಯಲ್ಲಿ ದ್ಯುತಿ ಚಾಂದ್ ಅವರ ಮೂತ್ರದ ಮಾದರಿಯಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಧೃಡಪಟ್ಟಿವೆ. ದ್ಯುತಿ ಅವರು ಸ್ನಾಯು ಮತ್ತು ಮೂಳೆಗಳ ಬೆಳವಣಿಗೆಗೆ ಸಂಬಂಧಿಸಿದಂತೆ ನಿಷೇಧಿತ ಪದಾರ್ಥವನ್ನು ಸೇವಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವುದು ಭಾಗಶಃ ಅನುಮಾನ ಎಂಬತ್ತಾಗಿದೆ.

ದ್ಯುತಿ ಚಾಂದ್‌ ಅವರು ಉದ್ದೀಪನ ಮದ್ದು ಸೇವನೆಯಿಂದ ಆಮಾನತುಗೊಂಡಿರುವ ವಿಷಯದ ಕುರಿತು ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

Dutee Chand: Temporary suspension of Dutee Chand on the charge of consumption of prohibited drugs !

ವರ್ಲ್ಡ್ ಆಂಟಿ-ಡೋಪಿಂಗ್ ಏಜೆನ್ಸಿ (ವಾಡಾ) ನೀಡಿರುವ ಮಾಹಿತಿ ಪ್ರಕಾರ, ದ್ಯುತಿ ಚಾಂದ್‌ ಅವರನ್ನು ಪರಿಕ್ಷೇಗೆ ಒಳಪಡಿಸಿದಾಗ ಕ್ರೀಡೆಗಳಲ್ಲಿ ಕಾರ್ಯಕ್ಷಮತೆಯ ವರ್ಧನೆಗಾಗಿ ಬಳಸುವ ನಿಷೇಧಿತ ಪದಾರ್ಥಗಳಾದ ಅನಾಬೊಲಿಕ್ ಸ್ಟೆರಾಯ್ಡ್‌ ಬಳಸಿದ್ದಾರೆ. ಜೊತೆಗೆ ಸ್ನಾಯು ಮತ್ತು ಮೂಳೆಗಳ ಬೆಳವಣಿಗೆಗೆ ಸಹಾಯಕವಾಗುವ ಆಂಡ್ರೊಜೆನ್ ಬಳಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದೆ.

ದ್ಯುತಿ ಚಂದ್ ಅವರು ಕಳೆದ ವರ್ಷ(2022) ಡಿಸೆಂಬರ್ 5 ರಂದು ಪಂದ್ಯಾವಳಿಯ ವೇಳೆ ನಿಷೇಧಿತ ಡ್ರಗ್ಸ್​ ಸೇವನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ಅವರಿಗೆ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಭುವನೇಶ್ವರದಲ್ಲಿ ದ್ಯುತಿ ಚಾಂದ್‌ ಅವರ ಮೂತ್ರದ ಮಾದರಿಯನ್ನು ಪಡೆದು ಪರಿಕ್ಷೇಗೆ ಒಳಪಡಿಸಲಾಗಿತ್ತು. ಈ ಆರೋಪವನ್ನು ತಳ್ಳಿ ಹಾಕಿರುವ ದ್ಯುತಿ ಚಾಂದ್‌ ಅವರು, ಈ ಕುರಿತು ಹಲವಾರು ಬಾರಿ ಪರಿಕ್ಷೇಗೆ ಸಹ ಹಾಜರಾಗಿದ್ದೇನೆ. ಪರಿಕ್ಷೇಯಲ್ಲಿ ನಿಷೇಧಿತ ಸೇವನೆ ಧೃಡವಾಗಿರುವ ಈ ಕುರಿತು ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

Dutee Chand: Temporary suspension of Dutee Chand on the charge of consumption of prohibited drugs !

ದ್ಯುತಿ ಅವರು ಕಳೆದ 2022ರ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದರು. 200 ಮೀಟರ್‌ ಓಟದಲ್ಲಿ ವಿಭಾಗದಲ್ಲಿ ಫೈನಲ್‌ ತಲುಪಲು ಸಾಧ್ಯವಾಗಿರಲ್ಲಿಲ್ಲ. ನಂತರದಲ್ಲಿ 100 ಮೀಟರ್ ಓಟದ ಫೈನಲ್‌ ರೌಂಡ್‌ನಲ್ಲಿ ಆರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

Dutee Chand: Temporary suspension of Dutee Chand on the charge of consumption of prohibited drugs !

ದ್ಯುತಿ ದೇಹದಲ್ಲಿ ಪುರುಷರ ಹಾರ್ಮೋನ್‌ !

ದ್ಯುತಿ ಅವರ ದೇಹದಲ್ಲಿ ಪುರುಷರ ಹಾರ್ಮೋನ್‌ಗಳಿವೆ. ಹೀಗಾಗಿ ಅವರನ್ನು ಹೆಣ್ಣು ಎಂದು ಪರಿಗಣಿಸಲಾಗುವುದಿಲ್ಲ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಶನ್ 2014ರಲ್ಲಿ ಅವರಿಗೆ ನಿಷೇಧ ಹೇರಿತ್ತು. ಔಷಧಿಗಳನ್ನು ಬಳಸಿಕೊಂಡು ಹಾರ್ಮೋನು ಬದಲಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿ ಹೈಪರಾಂಡ್ರೋಜಿಸಿಸಮ್‌ ಎಂಬ ಪರಿಕ್ಷೇ ಸಹ ನಡೆಸಲಾಗಿತ್ತು. ಪರಿಕ್ಷೇಯ ಫಲಿತಾಂಶದ ವಿವರಗಳನ್ನು ಪಡೆದುಕೊಂಡು ಸ್ವಿಟ್ಜರ್ಲ್ಯಾಂಡ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.ಈ ವಾಜ್ಯ ಎರಡು ವರ್ಷಗಳ ಕಾಲ ನಡೆದು ನನ್ನ ಹೋರಾಟಕ್ಕೆ ಜಯ ಸಿಕ್ಕತು ಎಂದು ದ್ಯುತಿ ಚಾಂದ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+